PM Surya Ghar Yojana 2024: ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ಸಬ್ಸಿಡಿ ಸೇರಿದಂತೆ ರೂ.15000 ಆದಾಯ, ಒಂದೇ ಯೋಜನೆ, ಲಾಭ ಹಲವು!

PM Surya Ghar Yojana 2024: ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆಗೆ (ಪ್ರಧಾನ ಮಂತ್ರಿ ಸೂರ್ಯ ಮನೆ ಉಚಿತ ವಿದ್ಯುತ್ ಯೋಜನೆ ) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಸೋಲಾರ್ ಪ್ಲಾಂಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಸರಕಾರ ಪ್ರತಿ ಕುಟುಂಬಕ್ಕೂ ಸಹಾಯಧನ ನೀಡಲಿದೆ. (Business News In Kannada)  

Written by - Nitin Tabib | Last Updated : Feb 29, 2024, 06:16 PM IST
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ ಸರ್ಕಾರ 75,021 ಕೋಟಿ ರೂ. ಬಿಡುಗಡೆ ಮಾಡಿದ್ದು,
  • ಈ ಯೋಜನೆಯ ಮೂಲಕ ದೇಶದ 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ.
  • ಇದರೊಂದಿಗೆ ಆ ಒಂದು ಕೋಟಿ ಕುಟುಂಬಗಳಿಗೆ ವಾರ್ಷಿಕ 15 ಸಾವಿರ ರೂ. ಆದಾಯ ಕೂಡ ಹರಿದು ಬರಲಿದೆ.
PM Surya Ghar Yojana 2024: ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ಸಬ್ಸಿಡಿ ಸೇರಿದಂತೆ ರೂ.15000 ಆದಾಯ, ಒಂದೇ ಯೋಜನೆ, ಲಾಭ ಹಲವು! title=

PM Surya Ghar Muft Bijli Yojana 2024:  ಪ್ರಧಾನ ಮಂತ್ರಿ ಸೂರ್ಯ ಮನೆ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಯೋಜನೆಯ ಎಲ್ಲಾ ಪ್ರಯೋಜನಗಳನ್ನು ವಿವರಿಸಿದ್ದಾರೆ. ಈ ಯೋಜನೆಯಡಿ, 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗುತ್ತದೆ. ಇದಲ್ಲದೇ ವಾರ್ಷಿಕ 15,000 ರೂ. ಅವರಿಗೆ ಸಹಾಯಧನದ ಲಾಭ ಸಿಗಲಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ 1 ಕೋಟಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರೊಂದಿಗೆ ಒಂದು ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಪ್ರಧಾನ ಮಂತ್ರಿ-ಸೂರ್ಯ ಘರ್, ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಫಲಕಗಳನ್ನು ಸ್ಥಾಪಿಸಲು ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. (Business News In Kannada)

ಇದನ್ನೂ ಓದಿ-Investment Tips: ಅತಿ ಕಡಿಮೆ ಸಮಯದಲ್ಲಿ ಕೋಟ್ಯಾಧೀಶರಾಗುವ ಈ ಸಿಂಪಲ್ ರೂಲ್ ನಿಮಗೆ ತಿಳಿದಿರಲಿ!

ಈ ಯೋಜನೆಗೆ ಸರ್ಕಾರ 75,021 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆ ಮಾಡಿದೆಈ ಯೋಜನೆಯಲ್ಲಿ, ಸರ್ಕಾರವು 2 ಕಿಲೋವ್ಯಾಟ್‌ವರೆಗಿನ ಸೋಲಾರ್ ಪ್ಲಾಂಟ್‌ಗಳಿಗೆ ಶೇ 60 ರಷ್ಟು ಸಬ್ಸಿಡಿ ಮತ್ತು 1 ಕಿಲೋವ್ಯಾಟ್ ಹೆಚ್ಚಿಸಲು ಶೇ.40 ರಷ್ಟು ಸಬ್ಸಿಡಿ ನೀಡಲಿದೆ. ಸೋಲಾರ್ ಪ್ಲಾಂಟ್ ಸ್ಥಾಪಿಸಲು ಪ್ರತಿ ಕುಟುಂಬಕ್ಕೆ ಸುಮಾರು 78,000 ಸಹಾಯಧನ ಸಿಗಲಿದೆ.

ಇದನ್ನೂ ಓದಿ-Annual Expenditure Survey: ಬದಲಾಗುತ್ತಿದೆ ಭಾರತ, ಹಣ ಖರ್ಚು ಮಾಡುವ ವಿಷಯದಲ್ಲಿ ಯಾವ ರಾಜ್ಯದ ಜನ ಟಾಪ್ ನಲ್ಲಿದ್ದಾರೆ ಗೊತ್ತಾ?

ವಾರ್ಷಿಕ 15000 ರೂ ಉಳಿತಾಯ
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ ಸರ್ಕಾರ 75,021 ಕೋಟಿ ರೂ. ಬಿಡುಗಡೆ ಮಾಡಿದ್ದು,  ಈ ಯೋಜನೆಯ ಮೂಲಕ ದೇಶದ 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಇದರೊಂದಿಗೆ ಆ ಒಂದು ಕೋಟಿ ಕುಟುಂಬಗಳಿಗೆ ವಾರ್ಷಿಕ 15 ಸಾವಿರ ರೂ. ಆದಾಯ ಕೂಡ ಹರಿದು ಬರಲಿದೆ. ಪ್ರಧಾನಿ-ಸೂರ್ಯ ಘರ್ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿಯ ಸೌರ ಫಲಕಗಳನ್ನು ಅಳವಡಿಸಲು ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಮೋದಿ ಕ್ಯಾಬಿನೆಟ್ ಅನುಮೋದಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News