ಸುಕನ್ಯಾ ಸಮೃದ್ಧಿ-ಪಿಪಿಎಫ್ ನಿಯಮಗಳಲ್ಲಿ ಬದಲಾವಣೆ ! ಸೆ. 30 ರೊಳಗೆ ಈ ದಾಖಲೆ ಸಲ್ಲಿಸದಿದ್ದರೆ ನಿಷ್ಕ್ರಿಯವಾಗುವುದು ನಿಮ್ಮ ಖಾತೆ
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಂ ಹೂಡಿಕೆ ಮಾಡಲು ಈ ದಾಖಲೆ ಅಗತ್ಯ. ಸೆ. 30 ರೊಳಗೆ ಈ ದಾಖಲೆ ಸಲ್ಲಿಸದಿದ್ದರೆ ನಿಮ್ಮ ಖಾತೆಗಳು ನಿಷ್ಕ್ರಿಯವಾಗುವುದು.
ಬೆಂಗಳೂರು : ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS), ಸುಕನ್ಯಾ ಸಮೃದ್ಧಿ ಯೋಜನೆ (SSY), ಮಹಿಳಾ ಸಮ್ಮಾನ್ ಯೋಜನೆ ಮತ್ತು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರಿಗೆ ಸರ್ಕಾರವು ನಿಯಮಗಳನ್ನು ಬದಲಾಯಿಸಿದೆ. ಈ ಹೊಸ ನಿಯಮ ಈಗಾಗಲೇ ಜಾರಿಗೆ ಬಂದಿದೆ. ಹೊಸ ನಿಯಮದ ಬಗ್ಗೆ ಹಣಕಾಸು ಸಚಿವಾಲಯ ಆದೇಶ ಕೂಡಾ ಹೊರಡಿಸಿದೆ. ನೀವು ಈ ಸರ್ಕಾರಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ಇನ್ನು ಮುಂದೆ ನೀವು ಕೂಡಾ ಈ ದಾಖಲೆಯನ್ನು ಹೊಂದಿರಲೇ ಬೇಕು. ಹೌದು, ಪ್ಯಾನ್ ಅಥವಾ ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ, ಈ ಯೋಜನೆಗಳಲಿ ಹಣ ಹೂಡಿಕೆ ಮಾಡುವುದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ.
ಪಾರದರ್ಶಕವಾಗಿಸಲು ಯೋಜನೆಯಲ್ಲಿ ಬದಲಾವಣೆ :
ಈ ಯೋಜನೆಗಳಲ್ಲಿನ ಹೂಡಿಕೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಲಭಗೊಳಿಸುವ ಉದ್ದೇಶದಿಂದ ಸರ್ಕಾರವು ಈ ಬದಲಾವಣೆಯನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹೂಡಿಕೆದಾರರ ಹಕ್ಕುಗಳನ್ನು ರಕ್ಷಿಸಲು ಈ ಬದಲಾವಣೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಮತ್ತು ಪ್ಯಾನ್ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಈ ಮೊದಲು, ಆಧಾರ್ ಸಂಖ್ಯೆ ಇಲ್ಲದೆಯೂ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿತ್ತು.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೀಗಿದೆ ನೋಡಿ
ಹೂಡಿಕೆಗೆ ಪ್ಯಾನ್ ಕಾರ್ಡ್ ತೋರಿಸುವುದು ಅಗತ್ಯ :
ಹೂಡಿಕೆದಾರರು ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಅಲ್ಲದೆ ಯಾವುದೇ ಯೋಜನೆಯಲ್ಲಿ ಮಿತಿ ಮೀರಿ ಹೂಡಿಕೆ ಮಾಡುವುದಾದರೆ ಪ್ಯಾನ್ ಕಾರ್ಡ್ ತೋರಿಸಬೇಕು. ಸರ್ಕಾರ ನಡೆಸುವ ಯೋಜನೆಗಳಲ್ಲಿ ಹೂಡಿಕೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಲಭವಾಗಿಸಲು ಈ ಬದಲಾವಣೆಯನ್ನು ಮಾಡಲಾಗಿದೆ. ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ಖಾತೆ ತೆರೆದ ಆರು ತಿಂಗಳೊಳಗೆ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು. ನೀವು ನಿರ್ದಿಷ್ಟ ಮಿತಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದ್ದರೆ, ಪ್ಯಾನ್ ಕಾರ್ಡ್ ಅನ್ನು ಸಹ ಸಲ್ಲಿಸಬೇಕಾಗುತ್ತದೆ.
ಸಣ್ಣ ಉಳಿತಾಯ ಯೋಜನೆಯ ಖಾತೆಯನ್ನು ತೆರೆಯಲು ನಿಮಗೆ ಈ ದಾಖಲೆಗಳು ಬೇಕಾಗುತ್ತವೆ :
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಆಧಾರ್ ಸಂಖ್ಯೆ ಅಥವಾ ಆಧಾರ್ ನೋಂದಣಿ ಸ್ಲಿಪ್
- ಪ್ಯಾನ್ ಸಂಖ್ಯೆ,
- ಅಸ್ತಿತ್ವದಲ್ಲಿರುವ ಹೂಡಿಕೆದಾರರು ಸೆಪ್ಟೆಂಬರ್ 30 2023 ರೊಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಸಲ್ಲಿಸದಿದ್ದರೆ, ಅವರ ಖಾತೆಯನ್ನು ಅಕ್ಟೋಬರ್ 2023 ರಿಂದ ನಿಷೇಧಿಸಲಾಗುತ್ತದೆ.
ಇದನ್ನೂ ಓದಿ : ನೀವು ಬ್ಯಾಂಕ್ ನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿದೆಯೆಂದು ನಿಶ್ಚಿಂತೆಯಿಂದ ಇದ್ದೀರಾ ? ಇರಲಿ ಎಚ್ಚರ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.