Cheap Gold - ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಮತ್ತೆ ಸಿಗುತ್ತಿದೆ, ಇಲ್ಲಿದೆ ಡೀಟೇಲ್ಸ್
Cheap Gold - ಸೋಮವಾರದಿಂದ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ 2021-22 ರ ನಾಲ್ಕನೇ ಸರಣಿಯ ಮಾರಾಟ ಆರಂಭಗೊಳ್ಳುತ್ತಿದೆ. ಈ ಮಾರಾಟ ಜುಲೈ 16ರವರೆಗೆ ಮಾತ್ರ ಇರಲಿದೆ.
ನವದೆಹಲಿ: Cheap Gold - ಅಗ್ಗದ ದರದ ಚಿನ್ನದಲ್ಲಿ ಹೂಡಿಕೆ ಮಾಡಬೇಕೆನ್ನುವವರಿಗೆ ಮತ್ತೊಂದು ಸುವರ್ಣಾವಕಾಶ ಲಭಿಸುತ್ತಿದೆ. ಹೌದು, ಜುಲೈ 12ರಿಂದ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ 2021-22ರ ನಾಲ್ಕನೇ ಸರಣಿಯ ಮಾರಾಟ ಆರಂಭವಾಗುತ್ತಿದೆ. ಈ ಮಾರಾಟ ಪ್ರಕ್ರಿಯೆ ಜುಲೈ 16ರವರೆಗೆ ಇರಲಿದೆ.
ಈ ಕುರಿತು RBI ಜಾರಿಗೊಳಿಸಿರುವ ವಿಜ್ನಪ್ತಿಯ ಪ್ರಕಾರ, ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು ರೂ.4, 807 ನಿಗದಿಪಡಿಸಲಾಗಿದೆ. ಸಾವೆರಿನ್ ಗೋಲ್ಡ್ ಬಂದ್ ಯೋಜನೆಯ ನಾಲ್ಕನೇ ಸರಣಿ ಸೋಮವಾರದಿಂದ ಮುಂದಿನ ಐದು ತಿಂಗಳವರೆಗೆ ತೆರೆದುಕೊಳ್ಳಲಿದೆ. ಈ ಬಾಂಡ್ ಗಾಗಿ ಒಂದು ವೇಳೆ ಯಾರಾದರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ, ಅವರಿಗೆ ಪ್ರತಿ ಗ್ರಾಂ ರೂ.50 ರಿಯಾಯಿತಿ ಸಿಗಲಿದೆ.ಅಂದರೆ ಹೂಡಿಕೆದಾರರು ಪ್ರತಿ ಗ್ರಾಂ ಚಿನ್ನಕ್ಕೆ ರೂ. 4757 ಪಾವತಿಸಬೇಕು.
ಎಲ್ಲಿಂದ ಮತ್ತು ಹೇಗೆ ಈ ಬಾಂಡ್ ಗಳನ್ನು ಖರೀದಿಸಬಹುದು?
ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಬಂದ್ ಗಳನ್ನೂ ಎಲ್ಲಾ ಬ್ಯಾಂಕ್, ಅಂಚೆ ಕಚೇರಿ ಹಾಗೂ ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ ಚೇಂಜ್, NSE, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್, BSE ಗಳ ಮೂಲಕ ಖರೀದಿಸಬಹುದು.
ಇದನ್ನೂ ಓದಿ- 7th Pay Commission: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಉಡುಗೊರೆ, LTC Claim ಕುರಿತು ಮಹತ್ವದ ನಿರ್ಧಾರ
ಎಷ್ಟು ಚಿನ್ನ ಖರೀದಿಸಬಹುದು?
ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯಲ್ಲಿ (Sovereign Gold Bond Scheme), ಒಬ್ಬ ವ್ಯಕ್ತಿಯು ಗರಿಷ್ಠ 4 ಕೆಜಿ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. ಇದೇ ವೇಳೆ ಕನಿಷ್ಠ ಒಂದು ಗ್ರಾಂ ಹೂಡಿಕೆ ಮಾಡುವುದು ಅನಿವಾರ್ಯವಾಗಿದೆ. ಉದಾಹರಣೆಯಾಗಿ, ಬಾಂಡ್ ಐದು ಗ್ರಾಂ ಚಿನ್ನವಾಗಿದ್ದರೆ, ಐದು ಗ್ರಾಂ ಚಿನ್ನದ (Sovereign Gold) ಬೆಲೆಯೇ ಬಾಂಡ್ ಗೆ ಇರಲಿದೆ.
ಇದನ್ನೂ ಓದಿ-Gold-Silver Price : ಚಿನ್ನವು 8500 ರೂ.ಗಳವರೆಗೆ ಅಗ್ಗ! ಬೆಳ್ಳಿ ಎರಡು ದಿನಗಳಲ್ಲಿ ₹700 ಇಳಿಕೆ!
2015ರಲ್ಲಿ ಸರ್ಕಾರ ಸಾವೆರಿಂಗ್ ಗೋಲ್ಡ್ ಬಾಂಡ್ ಯೋಜನೆ ಆರಂಭಿಸಿತ್ತು
ಸಾವೆರಿನ್ ಗೋಲ್ಡ್ ಬಾಂಡ್ ಒಂದು ಸರ್ಕಾರಿ ಬಾಂಡ್ ಆಗಿದೆ. ಇದನ್ನು ಡಿಮ್ಯಾಟ್ ರೂಪದಲ್ಲಿ ಬದಲಾಯಿಸಬಹುದು. ಇದರ ಬೆಲೆ ರೂಪಾಯಿ ಅಥವಾ ಡಾಲರ್ ಗಳಲ್ಲಿ ಇರುವುದಿಲ್ಲ. ಇದರ ಬೆಲೆ ಚಿನ್ನದ ತೂಕವನ್ನು ಆಧರಿಸಿದೆ. ಕೇಂದ್ರದ ಮೋದಿ ನೇತೃತ್ವದ ಸರ್ಕಾರ (Modi Government) ಈ ಯೋಜನೆಯನ್ನು 2015ರಲ್ಲಿ ಆರಂಭಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.