Cheapest Recharge Plan - ನವದೆಹಲಿ: ಗ್ರಾಹಕರನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ಕೊಡುಗೆಗಳನ್ನು ಹೊತ್ತು ತರುತ್ತವೆ. ರಿಚಾರ್ಜ್ ಪ್ಲಾನ್ ಗಳಲ್ಲಿ ಕಂಪನಿಗಳು ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ಲಾಭ ನೀಡಲು ಪ್ರಯತ್ನಿಸುತ್ತಿವೆ. ಇತ್ತೀಚೆಗಷ್ಟೇ ರಿಲಯನ್ಸ್ ಮಾಲೀಕತ್ವದ ಜೋಯೋ ತನ್ನ ರಿಚಾರ್ಜ್ ಪ್ಲಾನ್ ಗಳಲ್ಲಿ ಬೇರೆ ನೆಟ್ವರ್ಕ್ ಗಳಿಗೆ ಕರೆಯನ್ನು ಉಚಿತವಾಗಿ ನೀಡಲು ಆರಂಭಿಸಿದೆ. ಒಂದು ವೇಳೆ ನೀವೂ ಕೂಡ ಅಗ್ಗದ ದರದ ಡೇಟಾ ಪ್ಲಾನ್ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ನಾವು ನಿಮಗೆ ಇಂತಹ ಯೋಜನೆಯೊಂದರ ಕುರಿತು ಮಾಹಿತಿ ನೀಡಲಿದ್ದೇವೆ. ಈ ಯೋಜನೆಯಡಿ ನೀವು ಕೇವಲ 2 ರೂಪಾಯಿಗಳಲ್ಲಿ 1 ಜಿಬಿ ಡೇಟಾ ಪಡೆಯಬಹುದು. ಇದಲ್ಲದೆ ಇನ್ನೂ ಹಲವು ಲಾಭಗಳನ್ನು ಈ ಯೋಜನೆ ಒಳಗೊಂಡಿದೆ. ಹಾಗಾದರೆ ಬನ್ನಿ ಈ ಪ್ಲಾನ್ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ.


COMMERCIAL BREAK
SCROLL TO CONTINUE READING

ಕೇವಲ 2 ರೂ.ಗಳಲ್ಲಿ 1ಜಿಬಿ ಡೇಟಾ ಪ್ಲಾನ್
ಇದು ವೊಡಾಫೋನ್ ಐಡಿಯಾ ಕಂಪನಿಯ 449 ರೂ. ಪ್ಲಾನ್ ಆಗಿದೆ. ಈ ಪ್ಲಾನ್ ಸಿಂಧುತ್ವ 56 ದಿನಗಳು. ಡಬಲ್ ಡೇಟಾ ಆಫರ್ ಅಡಿ ಐಡಿಯಾ-ವೊಡಾಫೋನ್ ಈ ಯೋಜನೆಯಲ್ಲಿ ನಿತ್ಯ 4 ಜಿಬಿ ಡೇಟಾ ನೀಡುತ್ತಿದೆ. ಅಂದರೆ ಈ ಪ್ಲಾನ್ ನಲ್ಲಿ ಒತ್ತು 224 ಜಿಬಿ ಡೇಟಾ ಗ್ರಾಹಕರಿಗೆ ಸಿಗುತ್ತಿದೆ. ಈ ಪ್ಲಾನ್ (Recharge Plan) ಒಟ್ಟು ಲೆಕ್ಕಾಚಾರ ಹಾಕಿದರೆ ನಿಮಗೆ 1 ಜಿಬಿ ಡೇಟಾ ಕೇವಲ 2ರೂ.ಗೆ ಸಿಗುತ್ತಿದೆ. ಈ ಪ್ಲಾನ್ ಅಡಿ ಸಿಗುತ್ತಿರುವ 1 ಜಿಬಿ ಡೇಟಾ ಅತ್ಯಂತ ಅಗ್ಗದ ದರದ ಡೇಟಾ ಆಗಿರಲಿದೆ.


ಇದನ್ನು ಓದಿ- ಹೊಸ ರೀಚಾರ್ಜ್ ಯೋಜನೆ ಪ್ರಾರಂಭಿಸಿದ BSNL, ಸಿಗಲಿದೆ ಈ ಎಲ್ಲಾ ಪ್ರಯೋಜನ


ವೊಡಾಫೋನ್-ಐಡಿಯಾ ಕಂಪನಿಯ ಈ ಪ್ಲಾನ್ ಅಡಿ ನೀವು ಯಾವುದೇ ನೆಟ್ವರ್ಕ್ ನಂಬರ್ ಗೆ ಉಚಿತವಾಗಿ ಕರೆ ಮಾಡಬಹುದು. ನಿತ್ಯ 100 ಉಚಿತ SMS ಕೊಡುಗೆ ಕೂಡ ನಿಮಗೆ ಸಿಗುತ್ತಿದೆ. ಇದರ ಜೊತೆಗೆ ನೀವು Vi Movies ಹಾಗೂ TVಗಳನ್ನು ಉಚಿತವಾಗಿ ನೋಡಬಹುದು. ಈ ಪ್ಲಾನ್ ಗೆ ವೀಕೆಂಡ್ ಡೇಟಾ ರೋಲ್ ಓವರ್ ಕೂಡ ಅನ್ವಯಿಸುತ್ತದೆ.


ಇದನ್ನು ಓದಿ- TELECOM RULE : ಜ.15ರಿಂದ ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಡೈರೆಕ್ಟ್ ಕಾಲ್ ಹೋಗಲ್ಲ..! ಯಾಕೆ..?


ಕೇವಲ 2.08 ರೂ.ಗೆ ಸಿಗುತ್ತದೆ 1 ಜಿಬಿ ಡೇಟಾ
ವೊಡಾಫೋನ್-ಐಡಿಯಾ ಕಂಪನಿಯ ರೂ.699 ಪ್ಲಾನ್ ಅಡಿ ಕೂಡ ನೀವು 2.08 ರೂ.ಗಳಲ್ಲಿ ಒಟ್ಟು 1 ಜಿಬಿ ಡೇಟಾ ಪಡೆಯಬಹುದು. 84 ದಿನಗಳ ಸಿಂಧುತ್ವ ಹೊಂದಿರುವ ಈ ಪ್ಲಾನ್ ಅಡಿ ನಿಮಗೆ ಒಟ್ಟು 336 ಜಿಬಿ ಡೇಟಾ ಸಿಗುತ್ತದೆ. ಈ ಪ್ಲಾನ್ ನಲ್ಲಿ ಉಚಿತ ಕಾಲಿಂಗ್, ಉಚಿತ SMS, ಉಚಿತ VI Movies ಹಾಗೂ TV ಲಾಭಗಳ ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಕರ್ಯ ಕೂಡ ಲಭಿಸುತ್ತದೆ.


ಇದನ್ನು ಓದಿ- ತನ್ನ ಗ್ರಾಹಕರಿಗಾಗಿ ಅಗ್ಗದ ದರದಲ್ಲಿ ಹೊಸ ಪ್ಲಾನ್ ಲಾಂಚ್ ಮಾಡಿದ BSNL


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.