ನವದೆಹಲಿ: PAN- Aadhaar Link Today : ಆಧಾರ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಇಂದು ಕೊನೆಯ ದಿನವಾಗಿದೆ. ಒಂದು ವೇಳೆ ಲಿಂಕ್ ಮಾಡದೆ ಹೋದರೆ ಅನೇಕ ಆರ್ಥಿಕ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ನೀವು ಪ್ಯಾನ್ ಕಾರ್ಡ್ (PAN ) ಮತ್ತು ಆಧಾರ್ (Aadhaar) ಅನ್ನು ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ 'ನಿಷ್ಕ್ರಿಯ'ಗೊಳ್ಳುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ.ಗಳ ದಂಡವನ್ನು ಸಹ ಪಾವತಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

PAN ಮತ್ತು Aadhaar ಲಿಂಕ್ ಆಗಿದೆಯಾ ಕಂಡು ಹಿಡಿಯುವುದು ಹೇಗೆ ? 
ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ (Aadhaar) ಈಗಾಗಲೇ ಲಿಂಕ್ ಆಗಿದ್ದರೆ, ಏನೂ ಸಮಸ್ಯೆಯಿಲ್ಲ. ಆದರೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ  ಇಲ್ಲವೋ ಎಂಬ ಗೊಂದಲ  ಇದ್ದರೆ, ಅದನ್ನು ತಿಳಿದುಕೊಳ್ಳಲು ಸುಲಭ ವಿಧಾನವಿದೆ. 


ಇದನ್ನೂ ಓದಿ : ಏಪ್ರಿಲ್ 1 ರಿಂದ Car, Bike, TV, AC ಸೇರಿದಂತೆ ಈ ವಸ್ತುಗಳು ದುಬಾರಿ


ಮೊದಲನೆಯದ್ದು  ಐಟಿ ವೆಬ್‌ಸೈಟ್ ಮೂಲಕ : 


ಆದಾಯ ತೆರಿಗೆ ಅಧಿಕೃತ ವೆಬ್‌ಸೈಟ್ www.incometaxindiaefiling.gov.in/aadhaarstatus ಲಿಂಕ್‌ಗೆ ಭೇಟಿ ನೀಡಿ
ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಇಲ್ಲಿ ಹಾಕಿ
'View Link Aadhaar Status' ಮೇಲೆ ಕ್ಲಿಕ್ ಮಾಡಿ
ಇಲ್ಲಿ ನಿಮ್ಮ ಪ್ಯಾನ್ (PAN) ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂಬುದು ನಿಮಗೆ ತಕ್ಷಣ ತಿಳಿಯುತ್ತದೆ.


ಎರಡನೇಯದ್ದು - SMS ಮೂಲಕ : 
ಎಸ್‌ಎಂಎಸ್ (SMS) ಮೂಲಕ ಕೂಡಾ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್‌ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಬಹುದು . 
-ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್ ನಲ್ಲಿ ನಿಗದಿತ ರೂಪದಲ್ಲಿ ಮೆಸೇಜ್ ಟೈಪ್ ಮಾಡಿ 567678 ಅಥವಾ 56161 ಗೆ ಕಳುಹಿಸಬೇಕು
-SMS - UIDPAN <12 ಅಂಕೆಯ ಆಧಾರ್> <10 ಅಂಕಿಯ ಪ್ಯಾನ್>ಟೈಪ್ ಮಾಡಿ 
-ಈ ಎಸ್‌ಎಂಎಸ್ ಅನ್ನು 567678 ಅಥವಾ 56161 ಗೆ ಕಳುಹಿಸಿ 


ಇವೆರಡೂ ಲಿಂಕ್ ಆಗಿದ್ದರೆ  "Aadhaar...is already associated with PAN..in ITD database. Thank you for using our services." ಎಂಬ ಮೆಸೇಜ್ ಬರುತ್ತದೆ. 


ಇದನ್ನೂ ಓದಿ : Indian Railways IRCTC Latest News : ರೈಲು ಪ್ರಯಾಣಿಕರಿಗೆ ಇನ್ನು ಮುಂದೆ ಈ ಸೌಲಭ್ಯ ಸಿಗುವುದಿಲ್ಲ


ಒಂದು ವೇಳೆ ಇನ್ನು ಕೂಡ  ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರದಿದ್ದರೆ ಅದನ್ನು ಲಿಂಕ್  ಮಾಡುವ ಪ್ರಕ್ರಿಯೆ ಕೂಡ ಸರಳವಾಗಿದೆ. 


SMS ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ ?  


SMS ಮೂಲಕ ಆಧಾರ್-ಪ್ಯಾನ್ ಲಿಂಕ್ ಮಾಡಲು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ UIDPAN <12-digit Aadhaar> <10-digit PAN> ಟೈಪ್ ಮಾಡಿ  567678 ಅಥವಾ  561561 ಸಂಖ್ಯೆಗೆ ಸಂದೇಶ ಕಳುಹಿಸಿ. ಬಳಿಕ ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರುವ ಸೂಚನೆ ನಿಮಗೆ ಸಿಗಲಿದೆ.


ವೆಬ್ಸೈಟ್ ಮೂಲಕ ಲಿಂಕ್ ಮಾಡುವುದು ಹೇಗೆ? 
-ಇದಕ್ಕಾಗಿ ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ https://incometaxindiaefiling.gov.in ಭೇಟಿ ನೀಡಬೇಕು. 
-ಇಲ್ಲಿ ನಿಮ್ಮ ಮುಂದೆ ಹೋಮ್ ಪೇಜ್ ತೆರೆದುಕೊಳ್ಳಲಿದೆ.
-ಈ ಹೋಮ್ ಪೇಜ್ ನಲ್ಲಿ ನಿಮಗೆ Link Aadhaar ಮೇಲೆ ಕ್ಲಿಕ್ಕಿಸಿ.
-ಇದಾದ ಬಳಿಕ ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರೆ ಆವಶ್ಯಕ ಮಾಹಿತಿ ನಮೂದಿಸುವ ಆಯ್ಕೆ  ಕಾಣಿಸಲಿದೆ.
-ಸಂಪೂರ್ಣ ಮಾಹಿತಿ ತುಂಬಿದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ. ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ. 
-ಈ ವಿಧಾನ ಪೂರ್ಣಗೊಳ್ಳುತ್ತಲೇ ನಿಮ್ಮ ಮುಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆದ ಸೂಚನೆ ಸಿಗುತ್ತದೆ. 


ಇದನ್ನೂ ಓದಿ : TRAI ನಿಂದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿ ಬಿಡುಗಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.