TRAI ನಿಂದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿ ಬಿಡುಗಡೆ

TRAI Norms On Bulk SMS - ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ SEBI ಕೂಡ ಕಂಪನಿಗಳು ಹಾಗೂ ಇತರೆ ವ್ಯಾಪಾರಿ ಸಂಘಟನೆಗಳಿಗೆ ಬಲ್ಕ್ SMS ನಿಯಮಗಳ ಪಾಲನೆ ಮಾಡಲು ಸೂಚಿಸಿದೆ. ಹೀಗ ಮಾಡದೆ ಹೋದಲ್ಲಿ ಗ್ರಾಹಕರಿಗೆ OTP ಸಿಗುವಲ್ಲಿ ಅಡಚಣೆ ಎದುರಾಗಲಿದೆ ಎಂದು ಸೇಬಿ ಹೇಳಿದೆ.

Written by - Nitin Tabib | Last Updated : Mar 29, 2021, 06:26 PM IST
  • ಬಲ್ಕ್ SMS ನಿಯಮಗಳಿಗೆ ಸಂಬಂಧಿಸಿದಂತೆ ತನ್ನ ನಿಲುವು ಬಿಗಿಗೊಳಿಸಿದ TRAI.
  • 40 ಡಿಫಾಲ್ಟರ್ ಪಟ್ಟಿ ಬಿಡುಗಡೆಗೊಳಿಸಿದ TRAI.
  • ಈ ಡಿಫಾಲ್ಟರ್ ಗಳಿಗೆ ಸೂಚನೆ ಜಾರಿಗೊಳಿಸಿದ SEBI.
TRAI ನಿಂದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿ ಬಿಡುಗಡೆ title=
TRAI Norms On Bulk SMS (File Photo)

ನವದೆಹಲಿ:  TRAI Norms On Bulk SMS - ಗ್ರಾಹಕರಿಗೆ ಬ್ಯಾಂಕ್ ಗಳಿಂದ ಸಿಗುವ  ಎಸ್‌ಎಂಎಸ್ ವಿಷಯಕ್ಕೆ ಸಂಬಂಧಪಟ್ಟಂತೆ  TRAI ತನ್ನ ನಿಲುವನ್ನು ಬಿಗಿಗೊಳಿಸಿದೆ ಮತ್ತು ಬ್ಯಾಂಕ್ ಸೇರಿದಂತೆ ಎಲ್ಲಾ ವ್ಯಾಪಾರ ಸಂಘಟನೆಗಳಿಗೆ ಅದಕ್ಕೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಮಾರ್ಚ್ 31, 2021 ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.  ಇದರಿಂದ ಗ್ರಾಹಕರಿಗೆ OTP ಸಿಗುವಲ್ಲಿ ಯಾವುದೇ ರೀತಿಯ ವಿಳಂಬವಾಗುವುದಿಲ್ಲ ಎಂದು ಹೇಳಿದೆ.  ಒಂದು ವೇಳೆ ಈ ನಿಯಮವನ್ನು ಪಾಲಿಸದಿದ್ದರೆ, ಏಪ್ರಿಲ್ 1 ರಿಂದ ವ್ಯಾಪಾರ ಸಂಘಟನೆಗಳು ಹಾಗೂ ಗ್ರಾಹಕರನ ನಡುವಿನ ಸಂವಹನದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಈ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಕಂಪನಿ ಹಾಗೂ ಸಂಸ್ಥೆಗಳ ಪಟ್ಟಿ ಬಿಡುಗಡೆ
TRAI ಈ ಕುರಿತಾದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ HDFC BANK, ICICI BANK, SBI ಕೂಡ ಶಾಮೀಲಾಗಿವೆ. ಪದೇ ಪದೇ ಎಚ್ಚರಿಕೆ ನೀಡಿದರೂ ಕೂಡ ಈ ಸಂಸ್ಥೆಗಳು ಕಂಪ್ಲೈನ್ಸ್ ಪೂರ್ಣಗೊಳಿಸಿಲ್ಲ ಎಂದು ಟ್ರೈ ಹೇಳಿದೆ. ಗ್ರಾಹಕರೊಂದಿಗಿನ ಸಂವಹನದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಿರಲು ಈ ಡಿಫಾಲ್ಟರ್ ಸಂಸ್ಥೆಗಳು ಮಾರ್ಚ್ 31ರವರೆಗೆ ತಮ್ಮ ಕಂಪ್ಲೈನ್ಸ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದೆ.

SMS ಕಂಪ್ಲೈನ್ಸ್ ಪ್ರಕ್ರಿಯೆ ಪೂರ್ಣಗೊಳಿಸಲು SEBI ಸೂಚನೆ
ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ SEBI ಕೂಡ ಗ್ರಾಹಕರಿಗೆ ಸೇವೆ ಒದಗಿಸಲು  TRAI ಜಾರಿಗೊಳಿಸಿರುವ ಬಲ್ಕ್ SMS ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಸುನಿಶ್ಚಿತಗೊಳಿಸಲು ಈ ಸಂಘಟನೆಗಳಿಗೆ ಸೂಚಿಸಿದೆ. ಅನುಚಿತ ಹಾಗೂ ಭ್ರಾಂತಿ ಹುಟ್ಟಿಸುವ ವಾಣಿಜ್ಯಾತ್ಮಕ SMSಗಳಿಗೆ ಕಡಿವಾಣ ಹಾಕುವುದು TRAIನ ಈ ನಿಯಮದ ಉದ್ದೇಶವಾಗಿದೆ ಎಂದು ಸೇಬಿ ಹೇಳಿದೆ. 

ಇದನ್ನೂ ಓದಿ- New PPF Investment Rule - PPF ಸೇರಿದಂತೆ ಈ ಯೋಜನೆಗಳಿಂದ ಹಣ ಹಿಂಪಡೆದರೆ, TDS ನಿಂದ ಶೇ.5 ರಷ್ಟು ಕಡಿತವಾಗಲಿದೆ

TRAIನ ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಷನ್ಸ್ ಗ್ರಾಹಕ ಆದ್ಯತೆಯ ನಿಯಮಗಳು, 2018 ಅನ್ನು ಉಲ್ಲೇಖಿಸಿರುವ ಸೇಬಿ, ನಿಬಂಧನೆಗಳನ್ನು ಪಾಲಿಸದಿರುವುದು ಹೂಡಿಕೆದಾರರಿಗೆ ಸಂದೇಶಗಳ ವಿತರಣೆಯಲ್ಲಿ ಅಡಚಣೆ ಉಂಟುಮಾಡಬಹುದು ಎಂದಿದೆ.

ಇದನ್ನೂ ಓದಿ- PVC Aadhar Card: 'PVC ಆಧಾರ್ ಕಾರ್ಡ್': ಅಪ್ಲಿಕೇಶನ್ ಹಾಕುವುದು ಹೇಗೆ? ಇಲ್ಲಿದೆ ಮಾಹಿತಿ

SMS ಸ್ಕ್ರಬ್ಬಿಂಗ್ ಪಾಲಸಿ ಜಾರಿಯಿಂದ ಎದುರಾಗಿದೆ ಈ ಸಮಸ್ಯೆ
SMS Scrubbing Policy ಜಾರಿಯಾದ ಬಳಿಕ ಈ ತಿಂಗಳ ಆರಂಭದಲ್ಲಿ ಹಲವು ಗ್ರಾಹಕರಿಗೆ ಮೊಬೈಲ್ ವಹಿವಾಟಿನಲ್ಲಿ ಅಡಚಣೆ ಎದುರಾಗಿತ್ತು. ಇದರಿಂದ ಇ-ಕಾಮರ್ಸ್ ಕಂಪನಿಗಳು ಹಾಗೂ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ OTP ಬರುವಲ್ಲಿ ವಿಳಂಬವಾಗುತ್ತಿತ್ತು. ಈ ಹಿನ್ನೆಲೆ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳು ನಡೆದಿರಲಿಲ್ಲ. TRAI ಜಾರಿಗೊಳಿಸಿರುವ ನೂತನ SMS ನಿಯಮಗಳ ಹಿನ್ನೆಲೆ ಈ ಸಮಸ್ಯೆ ಎದುರಾಗಿತ್ತು. ಈ ಮಾರ್ಗಸೂಚಿಗಳ ಹಿನ್ನೆಲೆ ಪರೀಶೀಲನೆ ನಡೆಯದ ಹಾಗೂ ನೊಂದಣೆಯಾಗದ SMSಗಳು ಕಳುಹಿಸಲಾಗಿರಲಿಲ್ಲ.

ಇದನ್ನೂ ಓದಿ-Recharge Plan:ಕೇವಲ ರೂ.108ಕ್ಕೆ 60 ದಿನಗಳವರೆಗೆ ಅನಿಯಮಿತ ಕಾಲಿಂಗ್, ನಿತ್ಯ 1 GB ಡೇಟಾ ಉಚಿತ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News