CNG-PNG Price Hike: ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಶ್ರೀಸಾಮಾನ್ಯನ ಜೇಬಿಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ದೇಶದಲ್ಲಿ ಮೊದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಯಲ್ಲಿ ಏರಿಕೆಯ ಶಾಕ್ ನೀಡಲಾಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಬುಧವಾರ ತಡರಾತ್ರಿ ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ಮತ್ತು ಪಿಎನ್‌ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿತು. ಸಿಎನ್‌ಜಿ ದರ ಪ್ರತಿ ಕೆಜಿಗೆ 50 ಪೈಸೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಪಿಎನ್‌ಜಿಯ ಬೆಲೆಯನ್ನು ಪ್ರತಿ ಎಸ್‌ಸಿಎಂಗೆ 1 ರೂ. ಹೆಚ್ಚಿಸಲಾಗಿದೆ. ಹೊಸ ದರಗಳು ಬುಧವಾರ ತಡರಾತ್ರಿಯಿಂದ ಜಾರಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಪಿಎನ್‌ಜಿ ಬೆಲೆ ಏರಿಕೆ:
ಈ ಬಗ್ಗೆ ಐಜಿಎಲ್ ಗ್ರಾಹಕರಿಗೆ ಸಂದೇಶ ರವಾನಿಸುವ ಮೂಲಕ ಮಾಹಿತಿ ನೀಡಿದೆ. ಗ್ರಾಹಕರಿಗೆ ಕಳುಹಿಸಿದ ಸಂದೇಶದ ಪ್ರಕಾರ, ಮಾರ್ಚ್ 24 ರಿಂದ, ಗೌತಮ್ ಬುದ್ಧ ನಗರ ಮತ್ತು ನೋಯ್ಡಾದಲ್ಲಿ ಪಿಎನ್‌ಜಿ ಬೆಲೆ (PNG Price) 35.86/SCM ಆಗಿರುತ್ತದೆ. ಅದೇ ಸಮಯದಲ್ಲಿ, ದೆಹಲಿ ಗ್ರಾಹಕರಿಗೆ, ಈ ದರವು 36.61/SCM ನಿಂದ 37.61/SCM ಗೆ ಹೆಚ್ಚಾಗುತ್ತದೆ.


ಇದನ್ನೂ ಓದಿ- Bike: ಇದು ಬೈಕ್ ಅಲ್ಲ ದ್ವಿಚಕ್ರ ಕಾರ್!


ಸಿಎನ್‌ಜಿಗೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ :
ಇದಲ್ಲದೆ, ದೆಹಲಿಯಲ್ಲಿ ಜನರು ಈಗ ಸಿಎನ್‌ಜಿ (CNG) ಗ್ಯಾಸ್‌ಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ದೆಹಲಿಯಲ್ಲಿ, ಗುರುವಾರದಿಂದ ಜನರು ಸಿಎನ್‌ಜಿಗಾಗಿ 59.01 ರೂ ಬದಲಿಗೆ, ಈಗ 59.51 ರೂ. ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ- Indian Railways: ಚಾರ್ಟ್ ಸಿದ್ಧಪಡಿಸಿದ ನಂತರವೂ ಕ್ಯಾನ್ಸಲ್ ಮಾಡಿದ ಟಿಕೆಟ್‌ಗಳಿಗೆ ಆಗಲಿದೆ ರೀ ಫಂಡ್


ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ:
ಸರ್ಕಾರಿ ತೈಲ ಕಂಪನಿಗಳು ಗುರುವಾರ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ಸತತ ಎರಡು ದಿನಗಳಿಂದ ಬೆಲೆ ಏರಿಕೆಯ ನಂತರ ಇಂದು ಪರಿಹಾರ ನೀಡಿದ್ದು, ಬೆಲೆ ಸ್ಥಿರವಾಗಿದೆ. ಸರ್ಕಾರಿ ತೈಲ ಕಂಪನಿಗಳು ಈ ಹಿಂದೆ ಸತತ ಎರಡು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 80 ಪೈಸೆಗಿಂತ ಹೆಚ್ಚು ಹೆಚ್ಚಿಸಿದ್ದವು. ಈ ಎರಡು ದಿನಗಳಲ್ಲಿ ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ಬೆಲೆ 1.60 ರೂ. ಹೆಚ್ಚಾಗಿದೆ. ವಾಸ್ತವವಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆಯ ಹೊರೆಯನ್ನು ಕಡಿಮೆ ಮಾಡಲು, ಕಂಪನಿಗಳು ತೈಲದ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಲು ಪ್ರಾರಂಭಿಸಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.