Bike: ಇದು ಬೈಕ್ ಅಲ್ಲ ದ್ವಿಚಕ್ರ ಕಾರ್!

Adiva AD 200: ಒಂದಕ್ಕಿಂತ ಹೆಚ್ಚು ಅದ್ಬುತ ವೈಶಿಷ್ಟ್ಯಗಳಿರುವ ಬೈಕ್ ಅನ್ನು ನೀವು ನೋಡಿರಬಹುದು. ಆದರೆ ಕಾರಿನ ಎಲ್ಲಾ ವೈಶಿಷ್ಟ್ಯಗಳನ್ನೂ ಹೊಂದಿರುವ ದ್ವಿಚಕ್ರ ವಾಹನವನ್ನು ಎಂದಾದರೂ ನೋಡಿದ್ದೀರಾ...! ಈ ದ್ವಿಚಕ್ರ ವಾಹನವು ಕಾರಿನ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. 

Written by - Yashaswini V | Last Updated : Mar 23, 2022, 12:08 PM IST
  • ವಾಹನ ಯಾವುದೇ ಆಗಿರಲಿ ಅಂದರೆ ಅದು 2-ಚಕ್ರ ಅಥವಾ 4-ಚಕ್ರದ ವಾಹನವಾಗಿರಲಿ, ಮೊದಲನೆಯದಾಗಿ ಅದರ ಎಂಜಿನ್ ಬಗ್ಗೆ ಚರ್ಚೆ ಮಾಡಲಾಗುತ್ತದೆ.
  • ಆದಿವಾ AD 200 (Adiva AD 200) 171cc ಸಿಂಗಲ್ ಸಿಲಿಂಡರ್ 4-ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.
  • ಇದು 15.8hp ಪವರ್ ಮತ್ತು 15.3 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
Bike: ಇದು ಬೈಕ್ ಅಲ್ಲ ದ್ವಿಚಕ್ರ ಕಾರ್!  title=
Adiva AD 200: Bike Like a car

Adiva AD 200: ಹೊಸ ಫೀಚರ್‌ಗಳಿರುವ ಬೈಕ್‌ಗಳನ್ನು ಪಡೆಯಲು ಹಲವರು ಒಲವು ತೋರುತ್ತಾರೆ. ಆದರೆ, ಇನ್ನೂ ಕೆಲವರು ಹಳೆ ಬೈಕ್‌ನ ಮಾರ್ಪಾಡು ಮಾಡುವ ಮೂಲಕ ಅದಕ್ಕೆ ಹೊಸ ಲುಕ್ ನೀಡುವ ಬಗ್ಗೆ ಚಿಂತಿಸುತ್ತಾರೆ. ಸೌಕರ್ಯಗಳ ವಿಷಯದಲ್ಲಿ, ನಿಮ್ಮ ಮೋಟಾರ್‌ಸೈಕಲ್‌ಗೆ ಎಸಿ, ಮ್ಯೂಸಿಕ್ ಸಿಸ್ಟಮ್, ವಿಂಡ್‌ಸ್ಕ್ರೀನ್ ಮತ್ತು ರೂಫ್ ಇರಬೇಕು ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಆದರೆ ಇಂತಹ ಬೈಕ್ ಜಗತ್ತಿನಲ್ಲಿ ಬಹಳ ವರ್ಷಗಳ ಹಿಂದೆಯೇ ಬಂದಿದೆ. ಇರ ಹೆಸರು ಆದಿವ AD 200 (Adiva AD 200).

ಶಕ್ತಿಯುತ ಎಂಜಿನ್ ಮತ್ತು ಉತ್ತಮ ವೈಶಿಷ್ಟ್ಯಗಳು:
ವಾಹನ ಯಾವುದೇ ಆಗಿರಲಿ ಅಂದರೆ ಅದು 2-ಚಕ್ರ ಅಥವಾ 4-ಚಕ್ರದ ವಾಹನವಾಗಿರಲಿ, ಮೊದಲನೆಯದಾಗಿ ಅದರ ಎಂಜಿನ್ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಆದಿವಾ AD 200 (Adiva AD 200) 171cc ಸಿಂಗಲ್ ಸಿಲಿಂಡರ್ 4-ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 15.8hp ಪವರ್ ಮತ್ತು 15.3 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಈ ಕಾರಿನಂತಹ ಬೈಕ್ ತೂಕ 172 ಕೆ.ಜಿ. ಎಂದರೆ ನಿಮಗೆ ಅಚ್ಚರಿ ಆಗಬಹುದು.

ಇದನ್ನೂ ಓದಿ- Activa ಸ್ಕೂಟರ್ ಗೆ ಪರ್ಯಾಯ ಮಾದರಿ ಬಿಡುಗಡೆ ಮಾಡಿದ Honda, ಇಲ್ಲಿದೆ ವೈಶಿಷ್ಟ್ಯಗಳ ಮಾಹಿತಿ

ಫೋಲ್ಡಿಂಗ್ ರೂಫ್:
ಈ 2-ಚಕ್ರ (Two Wheeler) ವಾಹನದಲ್ಲಿ ಕಂಪನಿಯು ಒದಗಿಸಿದ ಮೇಲ್ಛಾವಣಿಯು ಅಂದರೆ ರೂಫ್  ಮಡಚಿಕೊಳ್ಳುತ್ತದೆ ಮತ್ತು ಹಿಂದಿನ ಟ್ರಂಕ್‌ನಲ್ಲಿ ಲಾಕ್ ಆಗುತ್ತದೆ. ಹ್ಯಾಂಡಲ್‌ಬಾರ್‌ನ ಕೆಳಗೆ ಕಾರಿನಂತಹ ಡ್ಯಾಶ್‌ಬೋರ್ಡ್, ಮ್ಯೂಸಿಕ್ ಸಿಸ್ಟಮ್‌ಗೆ ಸ್ಥಳಾವಕಾಶ, ಎರಡೂ ಬದಿಗಳಲ್ಲಿ ಎಸಿ ವೆಂಟ್‌ಗಳು ಮತ್ತು ಸ್ಪೀಕರ್‌ಗಳಿವೆ. ಈ ಕಾರಿನಂತಹ ಬೈಕು ಹಿಂಬದಿ ಸವಾರಿಗಾಗಿ ಕ್ಯಾಪ್ಟನ್ ಸೀಟ್ ಅನ್ನು ಸಹ ಪಡೆಯುತ್ತದೆ, ಇದು ಹೆಡ್ ರೆಸ್ಟ್ ಮತ್ತು ಆರ್ಮ್ ರೆಸ್ಟ್ ಅನ್ನು ಸಹ ಪಡೆಯುತ್ತದೆ. ಇದು ಸಿಗರೇಟ್ ಲೈಟರ್, ವಿಂಡ್ ಸ್ಕ್ರೀನ್ ಮತ್ತು ಕಾರಿನಂತೆ ಸ್ವಚ್ಛಗೊಳಿಸಲು ವೈಪರ್ಗಳನ್ನು ಹೊಂದಿದೆ. ಅದೇನೆಂದರೆ, ಈ ವಿದೇಶಿ ಬೈಕ್‌ನಲ್ಲಿ ಕಾರಿನ ಹಲವು ವೈಶಿಷ್ಟ್ಯಗಳು ಕಂಡು ಬರುತ್ತವೆ.

ಇದನ್ನೂ ಓದಿ- Affordable Bikes: ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ 4 ಬೈಕ್‌ಗಳಿವು

ಈ ಬೈಕು ಹೇಗೆ ಸಿಗುತ್ತದೆ?
ಆದಿವಾ ಈಗ ಬೈಕ್‌ನ ನವೀಕರಿಸಿದ ಆವೃತ್ತಿಯಾದ ಆದಿವಾ AD1 200 ಅನ್ನು ಸಹ ಬಿಡುಗಡೆ ಮಾಡಿದೆ. ಇದು ಮುಂಭಾಗದಲ್ಲಿ ಎರಡು ಚಕ್ರಗಳನ್ನು ಮತ್ತು ಹಿಂಭಾಗದಲ್ಲಿ ಒಂದು ಚಕ್ರವನ್ನು ಹೊಂದಿದೆ. ಇದರ ಮಾರಾಟ ಭಾರತದಲ್ಲಿ ಲಭ್ಯವಿಲ್ಲದ ಕಾರಣ ನೀವು ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ಮಾದರಿಯು ಯುರೋಪ್ ಮತ್ತು ಜಪಾನೀಸ್ ವಾಹನ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News