ಡಿ.1ರೊಳಗೆ ಈ ಮಹತ್ವದ ಕೆಲಸ ಪೂರ್ಣಗೊಳಿಸಿ: ಸರ್ಕಾರದಿಂದ 7 ಲಕ್ಷ ರೂ. ಸಿಗಲಿದೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಡಿಸೆಂಬರ್ 31ರ ಮೊದಲು ಇ-ನಾಮನಿರ್ದೇಶನ ಮಾಡಲು ಸಲಹೆ ನೀಡಿದೆ.
ನವದೆಹಲಿ: ನೀವೂ ಉದ್ಯೋಗದಲ್ಲಿದ್ದರೆ 7 ಲಕ್ಷ ರೂ.ಗಳ ಬಂಪರ್ ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ EPFO ನಿಂದ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಡಿ ಈಗ EPFO ನಿಮಗೆ ಸಂಪೂರ್ಣ 7 ಲಕ್ಷ ರೂ.ಗಳ ಪ್ರಯೋಜನವನ್ನು ನೀಡುತ್ತಿದೆ. ನೀವು EPFO ಚಂದಾದಾರರಾಗಿದ್ದರೆ ಇದರ ಲಾಭವನ್ನು ಸುಲಭವಾಗಿ ಪಡೆಯಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ ಡಿಸೆಂಬರ್ 31ರ ಮೊದಲು ಇ-ನಾಮನಿರ್ದೇಶನ ಮಾಡಲು ಸಲಹೆ ನೀಡಿದೆ. ನೀವು ಇದನ್ನು ಮಾಡದಿದ್ದರೆ ನಿಮಗೆ 7 ಲಕ್ಷ ರೂ. ನಷ್ಟವಾಗಬಹುದು. ಇದಕ್ಕಾಗಿ ನೀವು ಕೇವಲ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅದರ ನಂತರ ಮಾತ್ರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಮಾಡಿರುವ ತಪ್ಪೇನು ಗೊತ್ತಾ?
ಪಿಂಚಣಿ ಹೊರತಾಗಿ ಜೀವ ವಿಮೆಯ ಪ್ರಯೋಜನ
ಪಿಎಫ್ ಮತ್ತು ಪಿಂಚಣಿಯ ಹೊರತಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಜೀವ ವಿಮೆಯ ಪ್ರಯೋಜನವನ್ನು ಸಹ ನೀಡುತ್ತದೆ. ಇದರಡಿ ನೀವು 7 ಲಕ್ಷ ರೂ. ಲಾಭವನ್ನು ಪಡೆಯುತ್ತೀರಿ. ವಿಶೇಷವೆಂದರೆ ಈ ಸೌಲಭ್ಯ ಗ್ರಾಹಕರಿಗೆ ಉಚಿತವಾಗಿ ದೊರೆಯುತ್ತದೆ. ಇದಕ್ಕೆ ಯಾವುದೇ ಕೊಡುಗೆ ಅಗತ್ಯವಿಲ್ಲ.
ಇಪಿಎಫ್‌ಒ ಟ್ವೀಟ್ ಮಾಡಿದೆ
ಇಪಿಎಫ್‌ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. EPFನ ಎಲ್ಲಾ ಚಂದಾದಾರರು ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್, 1976 (EDLI) ಅಡಿಯಲ್ಲಿ ಒಳಗೊಳ್ಳುತ್ತಾರೆ ಎಂದು EPFO ಟ್ವೀಟ್‌ನಲ್ಲಿ ಬರೆದಿದೆ. EDLI ಯೋಜನೆಯಡಿ ಪ್ರತಿ EPF ಖಾತೆಯಲ್ಲಿ 7 ಲಕ್ಷ ರೂ.ವರೆಗೆ ಉಚಿತ ವಿಮಾ ರಕ್ಷಣೆ ಲಭ್ಯವಿದೆ. ಯಾವುದೇ ನಾಮನಿರ್ದೇಶನವಿಲ್ಲದೆ ಸದಸ್ಯರು ಮರಣಹೊಂದಿದರೆ ನಂತರ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಕಷ್ಟವಾಗುತ್ತದೆ. ಹೀಗಾಗಿ ಆನ್‌ಲೈನ್ ಮಾಧ್ಯಮದ ಮೂಲಕ ನೀವು ನಾಮಿನೇಷನ್ ವಿವರಗಳನ್ನು ಭರ್ತಿ ಮಾಡಬೇಕು.
EDLI ಅಡಿ ಪ್ರಯೋಜನಗಳು ಲಭ್ಯವಿದೆ
ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್, 1976 (EDLI) ಅಡಿಯಲ್ಲಿ ಎಲ್ಲಾ EPF ಖಾತೆಗಳಲ್ಲಿ EPFನ ಎಲ್ಲಾ ಚಂದಾದಾರರಿಗೆ ಸಂಪೂರ್ಣ 7 ಲಕ್ಷ ರೂ.ಗಳ ಪ್ರಯೋಜನವನ್ನು ಉಚಿತ ವಿಮೆಯಾಗಿ ನೀಡಲಾಗುತ್ತದೆ.
ಇದನ್ನೂ ಓದಿ: ITR ದಾಖಲಿಸಿ Royal Enfield Bullet ಗೆಲ್ಲಿ, ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ
ಇ-ನಾಮನಿರ್ದೇಶನವನ್ನು ಹೇಗೆ ಮಾಡುವುದು..?
1) ನೀವು ಮೊದಲು EPFO ನ ಅಧಿಕೃತ ವೆಬ್‌ಸೈಟ್ https://www.epfindia.gov.in/ ಗೆ ಹೋಗಬೇಕು.
2) ಇಲ್ಲಿ ನೀವು ಮೊದಲು ‘Services’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3) ಇದರ ನಂತರ ನೀವು ಇಲ್ಲಿ ‘For Employees’ ಕ್ಲಿಕ್ ಮಾಡಬೇಕು.
4) ಈಗ ‘Member UAN/Online Service (OCS/OTCP)’ ಮೇಲೆ ಕ್ಲಿಕ್ ಮಾಡಿ.
5) ಈಗ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗಿನ್ ಮಾಡಿ.
6) ಇದರ ನಂತರ ‘Manage’ ಟ್ಯಾಬ್‌ನಲ್ಲಿ ‘e-Nomination’ ಆಯ್ಕೆಮಾಡಿ.
7) ಇದರ ನಂತರ ‘Provide Details’ ಟ್ಯಾಬ್ ಪರದೆಯ ಮೇಲೆ ಕಾಣಿಸುತ್ತದೆ, ‘Save’ ಕ್ಲಿಕ್ ಮಾಡಿ.
8) family declaration ನವೀಕರಿಸಲು ‘Yes’ ಕ್ಲಿಕ್ ಮಾಡಿ.
9) ಈಗ ‘Add Family Details’ ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಕೂಡ ಸೇರಿಸಬಹುದು.
10) ಯಾವ ನಾಮಿನಿಯ ಪಾಲು ಎಷ್ಟು ಮೊತ್ತ ಬರುತ್ತದೆ ಎಂಬುದನ್ನು ಪ್ರಕಟಿಸಲು ‘Nomination Details’ ಕ್ಲಿಕ್ ಮಾಡಿ. ವಿವರಗಳನ್ನು ನಮೂದಿಸಿದ ನಂತರ ‘Save’ ಮಾಡಿ
11) ‘EPF Nomination’ ಕ್ಲಿಕ್ ಮಾಡಿ
13) OTP ರಚಿಸಲು ‘e-Sign’ ಮೇಲೆ ಕ್ಲಿಕ್ ಮಾಡಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
14) ನಿರ್ದಿಷ್ಟಪಡಿಸಿದ ಜಾಗದಲ್ಲಿ OTP ಅನ್ನು ನಮೂದಿಸಿ ಮತ್ತು ‘Submit’ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.