ITR ದಾಖಲಿಸಿ Royal Enfield Bullet ಗೆಲ್ಲಿ, ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ

ITR Filing: ಆದಾಯ ತೆರಿಗೆ ರಿಟರ್ನ್ ಅಂದರೆ ITR ದಾಖಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ITR ದಾಖಲಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಕೂಡ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಲ್ಲುತ್ತಿದೆ. ಇಂತಹುದೇ ಒಂದು ವಿಧಾನವನ್ನು ಘಾರತ ಸರ್ಕಾರದ ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಳವಡಿಸಿಕೊಂಡಿದೆ. 

Written by - Nitin Tabib | Last Updated : Dec 25, 2021, 11:55 AM IST
  • ಆದಾಯ ತೆರಿಗೆ ದಾಖಲಾತಿಗೆ ಡಿ.31 ಕೊನೆಯ ದಿನಾಂಕ.
  • ಪ್ರಕ್ರಿಯೆ ವೇಗಗೊಳಿಸಲು ಕೊಡುಗೆಗಳ ಘೋಷಣೆ.
  • 1000 ITR ಫೈಲ್ ಪೂರ್ಣಗೊಳಿಸಿ ರಾಯಲ್ ಎನ್ಫಿಲ್ದ್ ಬುಲೆಟ್ ಗೆಲ್ಲಿ
ITR ದಾಖಲಿಸಿ Royal Enfield Bullet ಗೆಲ್ಲಿ, ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ title=
ITR Filing (File Photo)

ITR Filing: ಆದಾಯ ತೆರಿಗೆ ರಿಟರ್ನ್ ಅಂದರೆ ITR ದಾಖಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಆಗಿದೆ. ITR ದಾಖಲಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಕೂಡ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಲ್ಲುತ್ತಿದೆ. ಇಂತಹುದೇ ಒಂದು ವಿಧಾನವನ್ನು ಘಾರತ ಸರ್ಕಾರದ ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಳವಡಿಸಿಕೊಂಡಿದೆ. 

ಈ ಸಚಿವಾಲಯದ ಅಡಿ ಬರುವ ಸಾಮಾನ್ಯ ಸೇವಾ ಕೇಂದ್ರಗಳು (Common Services Centres) ಕೊಡುಗೆಯೊಂದನ್ನು ಆರಂಭಿಸಿದೆ. ಈ ಕೊಡುಗೆಯ ಅಡಿಯಲ್ಲಿ, ಡಿಸೆಂಬರ್ 31, 2021 ರೊಳಗೆ 1000 ಗ್ರಾಮ ಮಟ್ಟದ ಉದ್ಯಮಿಗಳಿಗೆ ಅಥವಾ VLEಗಳಿಗೆ (Village Level Entrepreneur) ITR ದಾಖಲಿಸಲು ಸೂಚಿಸಲಾಗಿದೆ. 

ಇದನ್ನೂ ಓದಿ-Harbhajan Singh: ಕ್ರಿಕೆಟ್‌ನಿಂದ ನಿವೃತ್ತಿಯ ಬಳಿಕ ಹರ್ಭಜನ್ ಸಿಂಗ್ ರಾಜಕೀಯಕ್ಕೆ ಬರುತ್ತಾರಾ?

ಯಾವ VLE ಈ ಗುರಿಯನ್ನು ಸಾಧಿಸಲು ಯಶಸ್ವಿಯಾಗುತ್ತದೆಯೋ ಅವುಗಳಿಗೆ ಲಕ್ಕಿ ಡ್ರಾ ನಡೆಸಿ ಎನ್ಫಿಲ್ದ್ ಬುಲೆಟ್ ಗೆಲ್ಲುವ ಸುವರ್ಣಾವಕಾಶ ಕಲ್ಪಿದಲಾಗಿದೆ. ಕಾಮನ್ ಸರ್ವಿಸ್ ಸೆಂಟರ್ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಈ ಮಾಹಿತಿಯನ್ನು ನೀಡಿದೆ. ಇದಲ್ಲದೆ VLEಗಳಿಗೆ 1 ಲಕ್ಷ ರೂ.ಗಳವರೆಗೆ ಕಮಿಷನ್ ಕೂಡ ನೀಡಲಾಗುವುದು ಎಂದು ಹೇಳಲಾಗಿದೆ. 

ಇದನ್ನೂ ಓದಿ-‘ಇಮ್ರಾನ್ ಖಾನ್ ಆತ್ಮಹತ್ಯೆಗಾಗಿ ನಾನು ಕಾಯುತ್ತಿದ್ದೇನೆ’: ಹೀಗೆ ಹೇಳಿದ್ಯಾರು?

ಡೆಡ್ ಲೈನ್ ವಿಸ್ತರಣೆಯಾಗುವ ಸಾಧ್ಯತೆ
ITR ಸಲ್ಲಿಕೆಗೆ ಡಿಸೆಂಬರ್ 31, 2021 ಕೊನೆಯ ದಿನಾಂಕವಾಗಿದೆ. ಆದರೂ ಕೂಡ ಈ ಗಡುವು ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ನಿರೀಕ್ಷೆಗಿಂತ ಕಡಿಮೆ ITR ಸಲ್ಲಿಕೆಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಪ್ರಕಾರ ಡಿಸೆಂಬರ್ 23ರವರೆಗೆ ಒಟ್ಟು 4,20,29,919 ಐಟಿಆರ್‌ಗಳು ಸಲ್ಲಿಕೆಯಾಗಿವೆ. ಈ ಪೈಕಿ 10,96,557 ಐಟಿಆರ್‌ಗಳನ್ನು ಡಿಸೆಂಬರ್ 23 ರಂದು ಮಾತ್ರ ಸಲ್ಲಿಸಲಾಗಿದೆ. ಒಂದು ವರ್ಷದ ಹಿಂದೆ ಇದೆ ಅವಧಿಯಲ್ಲಿ ದಾಖಲಾದ ITRಗಿಂತ ಈ ಸಂಖ್ಯೆ ಕಡಿಮೆಯಾಗಿದೆ. 

ಇದನ್ನೂ ಓದಿ-MiG21 Crash: ಜೈಸಲ್ಮೇರ್ ಬಳಿ ಭಾರತೀಯ ವಾಯುಸೇನೆಯ MiG-21 ಫೈಟರ್ ಜೆಟ್ ಕ್ರ್ಯಾಶ್, ಪೈಲೆಟ್ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News