Gold Loan ಕೊಳ್ಳುವಾಗ ಈ ಅಂಶಗಳನ್ನು ಪರಿಗಣಿಸಿ
Gold Loan: ನಮ್ಮಲ್ಲಿ ಕೆಲವರಿಗೆ ಚಿನ್ನ ಎಂದರೆ ಪ್ರಾಣ. ಇನ್ನೂ ಕೆಲವರು ಚಿನ್ನದ ಮೇಲಿನ ಹೂಡಿಕೆ ಆಪತ್ಕಾಲದಲ್ಲಿ ಸಹಾಯಕ್ಕೆ ಬರಲಿದೆ ಎಂಬ ನಂಬಿಕೆಯಿಂದ ಚಿನ್ನವನ್ನು ಕೊಳ್ಳುತ್ತಾರೆ. ಕಾರಣ ಅದೇನೇ ಇರಲಿ, ಕಷ್ಟ ಕಾಲದಲ್ಲಿ ಬೇರೆಯವರ ಮುಂದೆ ಕೈ ಚಾಚುವುದಕ್ಕಿಂತ ನಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಆದರೆ, ನೀವು ಚಿನ್ನದ ಮೇಲೆ ಸಾಲ ಕೊಳ್ಳುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸುವುದು ಬಹಳ ಮುಖ್ಯ.
Gold Loan Latest News: ಕಷ್ಟ ಬಂದಾಗ ಬೇರೆಯವರ ಬಳಿ ಬಡ್ಡಿಗೆ ಸಾಲ ಪಡೆಯುವುದಕ್ಕಿಂತ ನಮ್ಮ ಬಳಿ ಇರುವ ಚಿನ್ನವನ್ನೇ ಆಡುವಿಟ್ಟು ಸಾಲ ಕೊಳ್ಳುವುದು ಖಂಡಿತವಾಗಿಯೂ ತುಂಬಾ ಉತ್ತಮ ಆಯ್ಕೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೂ, ನಮ್ಮಲ್ಲಿ ಕೆಲವರಿಗೆ ಚಿನ್ನವನ್ನು ಆಧಾರವಾಗಿ ಇಟ್ಟು ಹಣ ಪಡೆಯುವುದರಿಂದ ಅಪಾಯಕ್ಕೆ ಸಿಲುಕಬಹುದು ಎಂಬ ಆತಂಕ ಇದ್ದೇ ಇರುತ್ತದೆ. ಇದನ್ನು ತಪ್ಪಿಸಲು ಚಿನ್ನದ ಸಾಲ ಎಂದರೆ ಗೋಲ್ಡ್ ಲೋನ್ ಕೊಳ್ಳುವಾಗ ಕೆಲವು ಅಂಶಗಳನ್ನು ಗಮನಿಸುವುದು ತುಂಬಾ ಅಗತ್ಯ.
ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವಾಗ ಈ ಅಂಶಗಳನ್ನು ಪರಿಗಣಿಸಲು ಮರೆಯದಿರಿ:
ಗೋಲ್ಡ್ ಲೋನ್ ಬಡ್ಡಿದರ:
ವೈಯಕ್ತಿಕ ಸಾಲ, ಹೋಂ ಲೋನ್, ವಾಹನ ಸಾಲಗಳಂತೆಯೇ ಗೋಲ್ಡ್ ಲೋನ್ ಬಡ್ಡಿ ದರವೂ ಕೂಡ ಒಂದು ಬ್ಯಾಂಕ್ ಗಿಂತ ಇನ್ನೊಂದು ಬ್ಯಾಂಕ್ ನಲ್ಲಿ ಭಿನ್ನವಾಗಿರುತ್ತದೆ. ಹಾಗಾಗಿ, ನೀವು ಗೋಲ್ಡ್ ಲೋನ್ ಪಡೆಯುವಾಗ ಸುಮ್ಮನೆ ಕಣ್ಣು ಮುಚ್ಚಿ ಸಾಲ ಕೊಳ್ಳುವ ಬದಲು ವಿವಿಧ ಸಾಲದಾತರ ಬಡ್ಡಿದರಗಳನ್ನು ಪರಿಶೀಲಿಸಲು ಮರೆಯದಿರಿ. ಬಳಿಕ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಸಾಲಧಾತರಿಂದ ಚಿನ್ನದ ಸಾಲವನ್ನು ಪಡೆಯಿರಿ.
ಇದನ್ನೂ ಓದಿ- Business Idea: ಈ ಉದ್ಯಮ ಪ್ರಾರಂಭಿಸುವ ಮೂಲಕ ನೀವು ಶ್ರೀಮಂತರಾಗುತ್ತೀರಿ!
LTV ಅನುಪಾತ:
ಎಲ್‌ಟಿವಿ (LTV) ಅನುಪಾತ ಎಂದರೆ ಲೋನ್ ಟು ವ್ಯಾಲ್ಯೂ ಅನುಪಾತವಾಗಿದೆ. ಎಂದರೆ, ನೀವು ನಿಮ್ಮ ಚಿನ್ನಾಭರಣದ ಮೌಲ್ಯದ ವಿರುದ್ಧ ಪಡೆಯುವ ಗರಿಷ್ಠ ಮೊತ್ತದ ಸಾಲದ ಅನುಪಾತವಾಗಿದೆ. ಇದು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತದೆ. ಹಾಗಾಗಿ, ನಿಮ್ಮ ಚಿನ್ನದ ಮೇಲೆ ಯಾವ ಬ್ಯಾಂಕ್ ಎಷ್ಟು ಸಾಲವನ್ನು ನೀಡಬಹುದು ಎಂಬುದನ್ನು ಪರಿಶೀಲಿಸಿದ ನಂತರವಷ್ಟೆ ಸಾಲವನ್ನು ಪಡೆಯಿರಿ.
ಸಂಸ್ಕಾರಣಾ ಶುಲ್ಕ:
ನೀವು ಯಾವುದೇ ಸಾಲಧಾತರಿಂದ ಗೋಲ್ಡ್ ಲೋನ್ ಪಡೆದರೂ ಕೂಡ ಕೆಲವು ನಿಯಮಗಳನ್ನು ಪಾಲಿಸಬೇಕು. ಆದ್ರಲ್ಲಿ ಸಂಸ್ಕಾರಣಾ ಶುಲ್ಕವೂ ಕೂಡ ಒಂದು. ಆದರೆ, ಗೋಲ್ಡ್ ಲೋನ್ ಪಡೆಯುವಾಗ ಕಡಿಮೆ ಸಂಸ್ಕಾರಣಾ ಶುಲ್ಕವನ್ನು ಪಡೆಯುವ ಬ್ಯಾಂಕ್ ನಲ್ಲಿ ನೀವು ಸಾಲ ಪಡೆಯುವುದರಿಂದ ನಿಮಗೆ ಅನುಕೂಲವಾಗಲಿದೆ.
ಇದನ್ನೂ ಓದಿ- Government Portal: ಆಧಾರ್-ಪ್ಯಾನ್ ಲಿಂಕ್, ಜನ್ಮ ಪ್ರಮಾಣಪತ್ರ ಒಂದೇ ವೆಬ್‌ಸೈಟ್‌ನಲ್ಲಿ ಲಭ್ಯ!
ಮರುಪಾವತಿ ಆಯ್ಕೆ:
ಗೋಲ್ಡ್ ಲೋನ್ ಮರು ಪಾವತಿ ಬಗ್ಗೆಯೂ ಕೂಡ ಒಂದೊಂದು ಬ್ಯಾಂಕ್ ಒಂದೊಂದು ಆಯ್ಕೆಯನ್ನು ಹೊಂದಿರುತ್ತದೆ. ಹಾಗಾಗಿ, ನಿಮಗೆ ಅನುಕೂಲ ಎಂದು ಭಾವಿಸುವ ಮರುಪಾವತ್ ಆಯ್ಕೆಯನ್ನು ಹೊಂದಿರುವ ಬ್ಯಾಂಕ್ ನಿಂದ ಮಾತ್ರವೇ ಗೋಲ್ಡ್ ಲೋನ್ ಪಡೆಯಿರಿ.
ವಿಶ್ವಾಸಾರ್ಹತೆ:
ಸಂಘಟಿತ ವಲಯದ ಸಾಲದಾತರು ನೀವು ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ ನಂತರ ನಿಮ್ಮ ಚಿನ್ನವನ್ನು ಅದರ ನಿಖರವಾದ ಶುದ್ಧತೆಯಲ್ಲಿ ಸ್ವೀಕರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಆದರೆ, ಅಸಂಘಟಿತ ವಲಯದ ಸಾಲದಾತರಿಂದ ನೀವು ಸಾಲ ಪಡೆದರೆ ನಿಮ್ಮ ಚಿನ್ನ ಮತ್ತೆ ನಿಮ್ಮ ಕೈ ಸೇರುತ್ತದೋ ಅಥವಾ ಇಲ್ಲವೋ ಎಂಬ ನಂಬಿಕೆಯೇ ಇರುವುದಿಲ್ಲ. ಇದರಿಂದ ಪಾರಾಗಲು ಸದಾ ಸಂಘಟಿತ ವಲಯದ ಸಾಲದಾತರಿಂದ ಮಾತ್ರವೇ ಗೋಲ್ಡ್ ಲೋನ್ ಪಡೆಯುವುದು ಉತ್ತಮ ಆಯ್ಕೆ ಆಗಿದೆ.
ಇದನ್ನೂ ಓದಿ- Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ!
ಬ್ಯಾಂಕಿನ ಹೆಸರು | ಗೋಲ್ಡ್ ಲೋನ್ ಬಡ್ಡಿ ದರ |
ಆಕ್ಸಿಸ್ ಬ್ಯಾಂಕ್ | 13.50% ನಿಂದ 16.95% (ವಾರ್ಷಿಕ ಬಡ್ಡಿ ದರ) |
ಎಚ್‌ಡಿಎಫ್‌ಸಿ | 11% ನಿಂದ16% (ವಾರ್ಷಿಕ ಬಡ್ಡಿ ದರ) |
ಕೆನರಾ ಬ್ಯಾಂಕ್ | 7.35% (ವಾರ್ಷಿಕ ಬಡ್ಡಿ ದರ) |
ಮುತ್ತೂಟ್ ಗೋಲ್ಡ್ ಲೋನ್ | 12% ನಿಂದ 26%(ವಾರ್ಷಿಕ ಬಡ್ಡಿ ದರ) |
ಎಸ್‌ಬಿಐ | 7% (ವಾರ್ಷಿಕ ಬಡ್ಡಿ ದರ) |
ಕೋಟಕ್ ಮಹೀಂದ್ರ | 10% ನಿಂದ 17% (ವಾರ್ಷಿಕ ಬಡ್ಡಿ ದರ) |
ಇಂಡಸ್‌ಇಂಡ್ ಬ್ಯಾಂಕ್ | 11.50% ನಿಂದ 16% (ವಾರ್ಷಿಕ ಬಡ್ಡಿ ದರ) |
ಮಣಪ್ಪುರಂ | 9.90% ನಿಂದ 24% (ವಾರ್ಷಿಕ ಬಡ್ಡಿ ದರ) |
ಬ್ಯಾಂಕ್ ಆಫ್ ಮಹಾರಾಷ್ಟ್ರ | 7.10% (ವಾರ್ಷಿಕ ಬಡ್ಡಿ ದರ) |
ಪಿಎನ್‌ಬಿ | 7.70% ನಿಂದ 8.75% (ವಾರ್ಷಿಕ ಬಡ್ಡಿ ದರ) |
ಬ್ಯಾಂಕ್ ಆಫ್ ಬರೋಡಾ | 8.85% (ವಾರ್ಷಿಕ ಬಡ್ಡಿ ದರ) |
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.