Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ!

8th Pay Commission: ಕೇಂದ್ರ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ಒಂದು ವೇಳೆ ನೀವೂ ಕೂಡ ಸರ್ಕಾರಿ ನೌಕರರಾಗಿದ್ದರೆ, ನಿಮ್ಮ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಬನ್ನಿ ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Apr 27, 2023, 06:33 PM IST
  • 8ನೇ ವೇತನ ಆಯೋಗದ ಬೇಡಿಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ನೌಕರರ ಸಂಘದ ವತಿಯಿಂದ ಹೇಳಲಾಗುತ್ತಿದೆ.
  • ಇದೇ ವೇಳೆ ಸರ್ಕಾರಕ್ಕೆ ಮನವಿ ಪತ್ರವನ್ನೂ ಸಲ್ಲಿಸಲಾಗುವುದು ಎನ್ನಲಾಗುತ್ತಿದೆ.
  • ಸರ್ಕಾರವು ಬೇಡಿಕೆಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಒಕ್ಕೂಟವು ಆಂದೋಲನವನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ,
Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ! title=
8ನೇ ವೇತನ ಆಯೋಗ ಅಪ್ಡೇಟ್!

8th Pay Commission Latest News: ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ವತಿಯಿಂದ ಶೀಘ್ರದಲ್ಲಿಯೇ ಒಂದು ಸಂತಸದ ಸುದ್ದಿ ಹೊರಬೀಳಲಿದೆ. ನೀವೂ ಸಹ ಸರ್ಕಾರಿ ನೌಕರರಾಗಿದ್ದರೆ, ಶೀಘ್ರದಲ್ಲೇ ನಿಮ್ಮ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಸರ್ಕಾರವು ಶೀಘ್ರದಲ್ಲೇ ದೇಶಾದ್ಯಂತ ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 8ನೇ ವೇತನ ಆಯೋಗಕ್ಕೆ ಮೋದಿ ಸರಕಾರ ಶೀಘ್ರದಲ್ಲೇ ಹಸಿರು ನಿಶಾನೆ ತೋರಲಿದೆ ಎಂಬ ವರದಿಗಳು ಕೇಳಿಬಂದಿವೆ . ಎಂಟನೇ ವೇತನ ಆಯೋಗವನ್ನು ಈ ವರ್ಷ ಅಂದರೆ 2023ರಲ್ಲಿಯೇ ರಚಿಸಲಾಗುವುದು ಎಂದೂ ಕೂಡ ಹೇಳಲಾಗುತ್ತಿದೆ.

10 ವರ್ಷಗಳ ನಂತರ ಹೊಸ ವೇತನ ಆಯೋಗದ ಶಿಫಾರಸ್ಸುಗಳು ಅನ್ವಯ
7 ನೇ ವೇತನ ಆಯೋಗವನ್ನು 2013 ರಲ್ಲಿ ರಚಿಸಲಾಗಿತ್ತು ಮತ್ತು ಅದನ್ನು 2016 ರಲ್ಲಿ ಜಾರಿಗೆ ತರಲಾಯಿತು, ನಂತರ ಕೇಂದ್ರ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಉಂಟಾಗಿತ್ತು. ಇದೀಗ ಮತ್ತೊಮ್ಮೆ ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಹೊಸ ವೇತನ ಆಯೋಗದ ಶಿಫಾರಸುಗಳನ್ನು ಪ್ರತಿ 10 ವರ್ಷಗಳ ನಂತರ ಜಾರಿಗೆ ತರಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಲೋಕಸಭೆ ಚುನಾವಣೆಗೂ ಮುನ್ನ ಸಿಗಲಿದೆ ಈ ಸುದ್ದಿ!
ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರ ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು ಪ್ರಕಟಿಸುವ ಸಾಧ್ಯತೆ ಇದೆ. ಮುಂದಿನ ವರ್ಷ ದೇಶಾದ್ಯಂತ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ-Vodafone-Idea ನಿರ್ದೇಶಕರ ಮಂಡಳಿಗೆ ಕುಮಾರ್ ಮಂಗಲಮ್ ಬಿರ್ಲಾ ರೀಎಂಟ್ರಿ

ಪ್ರಸ್ತುತ ಕನಿಷ್ಠ ಮೂಲ ವೇತನ 18,000 ರೂ.
ಪ್ರಸ್ತುತ, ಕೇಂದ್ರ ನೌಕರರ ಕನಿಷ್ಠ ವೇತನವು ತಿಂಗಳಿಗೆ 18,000 ರೂ.ನಿಂದ 56,900 ರೂ.ಗಳಾಗಿದೆ. ಹೊಸ ವೇತನ ಆಯೋಗ ಜಾರಿಯಾದ ನಂತರ ನೌಕರರ ಕನಿಷ್ಠ ವೇತನ ಹೆಚ್ಚಳವಾಗಲಿದೆ. ಇದರೊಂದಿಗೆ ವೇತನ ಆಯೋಗದ ವರದಿಯಲ್ಲಿನ ಫಿಟ್‌ಮೆಂಟ್ ಅಂಶವೂ ಹೆಚ್ಚಾಗಬಹುದು.

ಇದನ್ನೂ ಓದಿ-Appraisal: ತನ್ನ ಆಪ್ರೇಸಲ್ ತಾನೇ ಮಾಡಿಕೊಂಡು 10 ಪಟ್ಟು ವೇತನ ಹೆಚ್ಚಿಸಿಕೊಂಡ ಮಹಿಳಾ ಬಾಸ್

ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ಮುಂದುವರೆದಿದೆ
8ನೇ ವೇತನ ಆಯೋಗದ ಬೇಡಿಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕೇಂದ್ರ ನೌಕರರ ಸಂಘದ ವತಿಯಿಂದ ಹೇಳಲಾಗುತ್ತಿದೆ. ಇದೇ ವೇಳೆ ಸರ್ಕಾರಕ್ಕೆ ಮನವಿ ಪತ್ರವನ್ನೂ ಸಲ್ಲಿಸಲಾಗುವುದು ಎನ್ನಲಾಗುತ್ತಿದೆ. ಸರ್ಕಾರವು ಬೇಡಿಕೆಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಒಕ್ಕೂಟವು ಆಂದೋಲನವನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ, ಇದರಲ್ಲಿ ಕೇಂದ್ರ ನೌಕರರು ಮತ್ತು ಮಾಜಿ ಪಿಂಚಣಿದಾರರು ಭಾಗವಹಿಸುವ ಸಾಧ್ಯತೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

 

Trending News