India Forex Reserve: ದೇಶದ ವಿದೇಶಿ ವಿನಿಮಯ ಸಂಗ್ರಹದಲ್ಲಿ ನಿರಂತರ ಇಳಿಕೆಯಾಗುತ್ತಲೇ ಇದೆ. ವಿದೇಶಿ ವಿನಿಮಯ ನಿಧಿಯು ಸತತ ಏಳನೇ ವಾರದಲ್ಲಿ ಕುಸಿತ ಕಂಡಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 16, 2022ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು $ 5.22 ಶತಕೋಟಿಯಷ್ಟು ಕುಸಿದು $ 545.652 ಶತಕೋಟಿಗೆ ತಲುಪಿದೆ. ಸೆಪ್ಟೆಂಬರ್ 9ಕ್ಕೆ ಕೊನೆಗೊಂಡ ವಾರದಲ್ಲಿ ಇದು 550.87 ಬಿಲಿಯನ್ ಡಾಲರ್ ಆಗಿತ್ತು. ಅಕ್ಟೋಬರ್ 2, 2020 ರ ನಂತರ ವಿದೇಶಿ ವಿನಿಮಯ ಮೀಸಲು ಕಡಿಮೆ ಮಟ್ಟದಲ್ಲಿದೆ.


COMMERCIAL BREAK
SCROLL TO CONTINUE READING

ವಿದೇಶಿ ವಿನಿಮಯ ಮೀಸಲು ನಿರಂತರವಾಗಿ ಕುಸಿಯುತ್ತಿದೆ
ವಿದೇಶಿ ಹೂಡಿಕೆದಾರರ ಮಾರಾಟ ಮತ್ತು ಡಾಲರ್ ವಿರುದ್ಧ ರೂಪಾಯಿ ಕುಸಿತವನ್ನು ತಡೆಯಲು ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡಿರುವುದರಿಂದ ವಿದೇಶಿ ವಿನಿಮಯ ಮೀಸಲಿನಲ್ಲಿ ಈ ಕುಸಿತ ಸಂಭವಿಸಿದೆ ಎನ್ನಲಾಗುತ್ತಿದೆ. ಶುಕ್ರವಾರ, ಡಾಲರ್ ಎದುರು ರೂಪಾಯಿ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 81.20 ಕ್ಕೆ ಕುಸಿದಿದೆ, ಇದು 80.99 ಮಟ್ಟದಲ್ಲಿ ಕೊನೆಗೊಂಡಿದೆ. ಎಲ್ಲಾ ಕರೆನ್ಸಿಗಳ ವಿರುದ್ಧ ಡಾಲರ್ ಬಲವರ್ಧನೆಗೊಂಡಿದೆ. ಇದೆ ವೇಳೆ ಆಮದುದಾರರಿಂದ ಡಾಲರ್‌ಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಡಾಲರ್‌ಗಳ ಕೊರತೆಯೂ ಕೂಡ ಎದುರಾಗಲಿದೆ.


ಇದನ್ನೂ ಓದಿ-Alert! ಎಚ್ಚರ..! ಶೀಘ್ರದಲ್ಲಿಯೇ ಜಗತ್ತಿಗಪ್ಪಳಿಸಲಿದೆ ಭಾರಿ ದೊಡ್ಡ ಆರ್ಥಿಕ ಹಿಂಜರಿತ! ಡಾ.ಡೂಮ್ ಅರ್ಥಶಾಸ್ತ್ರಜ್ಞನ ಭವಿಷ್ಯ


ಕಳೆದ ಏಳು ವಾರಗಳಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಫೆಬ್ರವರಿ ಅಂತ್ಯದಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ನಂತರ ವಿದೇಶಿ ವಿನಿಮಯ ಸಂಗ್ರಹವು ಕುಸಿಯುತ್ತಲೇ ಇದೆ. ಮಾರ್ಚ್ ಅಂತ್ಯಕ್ಕೆ ವಿದೇಶಿ ವಿನಿಮಯ ಮೀಸಲು $607 ಶತಕೋಟಿಗಳಷ್ಟು ಇತ್ತು.


ಇದನ್ನೂ ಓದಿ-Black Friday: ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ, 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು


ಪ್ರಸ್ತುತ ವಿದೇಶಿ ವಿನಿಮಯ ಮೀಸಲು ಕುಸಿತದ ಪ್ರವೃತ್ತಿ ಮುಂದುವರಿಯಬಹುದು ಎಂದು ಕರೆನ್ಸಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇದು 510 ಬಿಲಿಯನ್ ಡಾಲರ್‌ಗೆ ಇಳಿಯುವ ಸಾಧ್ಯತೆ ಇದೆ ಎಂದು ಅವರು ಅಂದಾಜಿಸಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.