Alert! ಎಚ್ಚರ..! ಶೀಘ್ರದಲ್ಲಿಯೇ ಜಗತ್ತಿಗಪ್ಪಳಿಸಲಿದೆ ಭಾರಿ ದೊಡ್ಡ ಆರ್ಥಿಕ ಹಿಂಜರಿತ! ಡಾ.ಡೂಮ್ ಅರ್ಥಶಾಸ್ತ್ರಜ್ಞನ ಭವಿಷ್ಯ

Dr. Doom Economist Prediction: 2008ರ ಆರ್ಥಿಕ ಸಂಕಷ್ಟದ ಕುರಿತು ಭವಿಷ್ಯ ನುಡಿದಿದ್ದ ಅರ್ಥಶಾಸ್ತ್ರಜ್ಞರು ಈ ಭವಿಷ್ಯವಾಣಿಯನ್ನು ಮಾಡಿದ್ದಾರೆ. 2008ರ ಆರ್ಥಿಕ ಹಿಂಜರಿತದ ಬಳಿಕ ವಿಶ್ವಾದ್ಯಂತ ಇರುವ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಅನುಭವಿಸಿದ್ದವು ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಜನರು ತನ್ನ ನೌಕರಿಗಳನ್ನು ಕಳೆದುಕೊಂಡಿದ್ದರು.

Written by - Nitin Tabib | Last Updated : Sep 23, 2022, 08:46 PM IST
  • ಅಮೇರಿಕಾ ಸೇರಿದಂತೆ ಇಡೀ ವಿಶ್ವಾದ್ಯಂತ ಶೀಘ್ರದಲ್ಲಿಯೇ ಆರ್ಥಿಕ ಸಂಕಷ್ಟದ ಕೆಟ್ಟ ಕಾಲ ಬರುವ ಸಾಧ್ಯತೆ ಇದೆ.
  • ಖ್ಯಾತ ಅರ್ಥ ಶಾಸ್ತ್ರಜ್ಞ ನೌರಿಯಲ್ ರೌಬಿನಿ ಈ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
  • ನೌರಿಯಲ್ 2008 ರಲ್ಲಿ ತಲೆದೂರಿದ್ದ ಆರ್ಥಿಕ ಸಂಕಷ್ಟದ ಕುರಿತು ನಿಖರ ಭವಿಷ್ಯ ನುಡಿದಿದ್ದರು.
Alert! ಎಚ್ಚರ..! ಶೀಘ್ರದಲ್ಲಿಯೇ ಜಗತ್ತಿಗಪ್ಪಳಿಸಲಿದೆ ಭಾರಿ ದೊಡ್ಡ ಆರ್ಥಿಕ ಹಿಂಜರಿತ! ಡಾ.ಡೂಮ್ ಅರ್ಥಶಾಸ್ತ್ರಜ್ಞನ ಭವಿಷ್ಯ title=
Nouriel Roubini Prediction

Dr. Doom Economist Prediction: ಅಮೇರಿಕಾ ಸೇರಿದಂತೆ ಇಡೀ ವಿಶ್ವಾದ್ಯಂತ ಶೀಘ್ರದಲ್ಲಿಯೇ ಆರ್ಥಿಕ ಸಂಕಷ್ಟದ ಕೆಟ್ಟ ಕಾಲ ಬರುವ ಸಾಧ್ಯತೆ ಇದೆ. ಖ್ಯಾತ ಅರ್ಥ ಶಾಸ್ತ್ರಜ್ಞ ನೌರಿಯಲ್ ರೌಬಿನಿ ಈ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ನೌರಿಯಲ್ 2008 ರಲ್ಲಿ ತಲೆದೂರಿದ್ದ ಆರ್ಥಿಕ ಸಂಕಷ್ಟದ ಕುರಿತು ನಿಖರ ಭವಿಷ್ಯ ನುಡಿದಿದ್ದರು. ಈ ಆರ್ಥಿಕ ಹಿಂಜರಿತದ ಬಳಿಕ ವಿಶ್ವಾದ್ಯಂತ ಇರುವ ಷೇರು ಮಾರುಕಟ್ಟೆಗಳು ಭಾರಿ ಕುಸಿತ ಅನುಭವಿಸಿದ್ದವು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಜನರು ತಮ್ಮ ನೌಕರಿಗಳನ್ನು ಕಳೆದುಕೊಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ನೌರಿಯಲ್ ರೌಬಿನಿ ಅವರು ಈ ಆರ್ಥಿಕ ಸಂಕಷ್ಟದ ಲಕ್ಷಣಗಳನ್ನು ಊಹಿಸಿದ್ದಾರೆ. 

ನೌರಿಯಲ್ ರೌಬಿನಿ ಹೇಳಿದ್ದೇನು?
ಅಮೇರಿಕಾ ಹಾಗೂ ಜಾಗತಿಕ ಮಟ್ಟದಲ್ಲಿ ಈ ವರ್ಷಾಂತ್ಯಕ್ಕೆ ಆರ್ಥಿಕ ಹಿಂಜರಿತದ ಕಾಲ ಆರಂಭಗೊಳ್ಳಲಿದೆ ಮತ್ತು ಅದು 2023ರವರೆಗೆ ಮುಂದುವರೆಯಲಿದೆ. ಇದೊಂದು ದೀರ್ಘ ಕಾಲದ ಹಿಂಜರಿತವಾಗಿರಲಿದ್ದು, ವಿಶ್ವಾದ್ಯಂತದ ಆರ್ಥಿಕತೆಯಲ್ಲಿ ಭಾರಿ ಕುಸಿತವನ್ನು ಗಮನಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಟ್ಯಾಂಡರ್ಡ್ ಅಂಡ್ ಪುವರ್ಸ್ ನಲ್ಲಿ ಶೇ.40ರಷ್ಟು ಕುಸಿತ
ಇದಲ್ಲದೆ, US ಷೇರು ಮಾರುಕಟ್ಟೆಯ ಪ್ರಮುಖ ಸಂವೇದಿ ಸೂಚ್ಯಂಕವಾಗಿರುವ - ಸ್ಟ್ಯಾಂಡರ್ಡ್ ಮತ್ತು ಪೂವರ್ಸ್ 500 (S&P 500) ನಲ್ಲಿ ಭಾರಿ ನಷ್ಟ ಗಮನಿಸಬಹುದಾಗಿದೆ ಅಂದು ರೌಬಿನಿ ಭವಿಷ್ಯ ನುಡಿದಿದ್ದಾರೆ. S&P 500 30% ರಷ್ಟು ಕುಸಿಯಬಹುದು ಎಂದು ನೌರಿಯಲ್ ರೌಬಿನಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಕುಸಿತ ಮುಂದುವರಿದರೆ, ಸೂಚ್ಯಂಕವು ಶೇ. 40 ರಷ್ಟು ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ಫೆಡ್ ರಿಸರ್ವ್ ಬಳಿ ಪರ್ಯಾಯಗಳ ಕೊರತೆ
ಪ್ರಸ್ತುತ ಹಣದುಬ್ಬರಕ್ಕೆ ಕಡಿವಾಣ ಹಾಕಲು US ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡ್ ರಿಸರ್ವ್ ತನ್ನ ಬಡ್ಡಿದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇದಕ್ಕೆ ನೌರಿಯಲ್ ರೌಬಿನಿ ಅವರು ಫೆಡ್ ರಿಸರ್ವ್ ಬಳಿ ಬೇರೆ ಆಯ್ಕೆಗಳಿಲ್ಲ ಎಂದು ತೋರುತ್ತದೆ ಎಂದಿದ್ದಾರೆ. ಫೆಡರಲ್ ರಿಸರ್ವ್ ಶೇ.2 ರಷ್ಟು ಹಣದುಬ್ಬರ ದರವನ್ನು ಹಾರ್ಡ್ ಲ್ಯಾಂಡಿಂಗ್ ಇಲ್ಲದೆ ಪಡೆಯಲು ಅಸಾಧ್ಯ ಎಂಬಂತೆ ತೋರುತ್ತಿದೆ ಎಂದು ಅವರು ಹೇಳಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಫೆಡ್ ಬಡ್ಡಿದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಳವನ್ನು ರೌಬಿನಿ ನಿರೀಕ್ಷಿಸುತ್ತಾರೆ. ಅನೇಕ ಜೋಂಬಿ ಸಂಸ್ಥೆಗಳು, ಬ್ಯಾಂಕ್‌ಗಳು, ಕಾರ್ಪೊರೇಟ್‌ಗಳು, ಶ್ಯಾಡೋ ಬ್ಯಾಂಕ್‌ಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ ಎಂಬ ಆತಂಕವನ್ನು ರೌಬಿನಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-Free Ration: ಕೋಟ್ಯಾಂತರ ಜನರಿಗೆ ಸಿಹಿ ಸುದ್ದಿ: ಮುಂದಿನ 6 ತಿಂಗಳವರೆಗೆ ಉಚಿತ ಪಡಿತರ ಲಭ್ಯ!

ಸರ್ಕಾರಗಳಿಂದ ಯಾವುದೇ ನಿರೀಕ್ಷೆ ಇಲ್ಲ
ಪ್ರಸ್ತುತ ಇಡೀ ಜಗತ್ತು ಆರ್ಥಿಕ ಹಿಂಜರಿತದ ಕಪಿಮುಷ್ಠಿಗೆ ಸಿಲುಕಿಕೊಳ್ಳುತ್ತಿದೆ ಎಂದು ನೌರಿಲ್ ಹೇಳಿದ್ದಾರೆ. ಆದರೂ ಕೂಡ ಸರ್ಕಾರಗಳಿಂದ ಯಾವುದೇ ಹಣಕಾಸಿನ ಉತ್ತೇಜಕ ಕ್ರಮಗಳ ನಿರೀಕ್ಷೆ ಇಲ್ಲ. ಈಗಾಗಲೇ ಬಹುತೇಕ ಸರ್ಕಾರಗಳು ಹೆಚ್ಚುವರಿ ಸಾಲದಲ್ಲಿ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಪರಿಸ್ಥಿತಿಯನ್ನು ತಾವು 1970ರ ಪರಿಸ್ಥಿತಿಯಂತೆಯೇ ನೋಡುತ್ತಿರುವುದಾಗಿ ರೌಬಿನಿ ಹೇಳಿದ್ದಾರೆ. ದೊಡ್ಡ ಪ್ರಮಾಣದ ಸಾಲದ ಕೊರತೆಯನ್ನು ಕಾಣಬಹುದು ಮತ್ತು ಇದು ಅಲ್ಪಕಾಲಾವಧಿಯ ಆರ್ಥಿಕ ಹಿಂಜರಿತವಾಗಿರುವುದಿಲ್ಲ ಎಂದು ನೌರಿಯಲ್ ಹೇಳಿದ್ದಾರೆ. ಇದೊಂದು ತೀವ್ರ ಮತ್ತು ದೀರ್ಘಕಾಲದ ಹಿಂಜರಿತವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ-PF ಮೇಲಿನ ಬಡ್ಡಿ ದರ ಹೆಚ್ಚಿಸಲು ಮುಂದಾದ ಸರ್ಕಾರ! ಮಹತ್ವದ ಮಾಹಿತಿ ನೀಡಿದ ಕೇಂದ್ರ ಸಚಿವ

ಹೂಡಿಕೆದಾರರಿಗೇನು ಸಲಹೆ?
ಈ ಸಂದರ್ಭದಲ್ಲಿ ರೌಬಿನಿ ಹೂಡಿಕೆದಾರರಿಗೂ ಕೂಡ ಸಲಹೆಯನ್ನು ನೀಡಿದ್ದಾರೆ. ಇದೀಗ ಇಕ್ವಿಟಿಗಳ ಮೇಲೆ ಸಡಿಲಿಕೆ ನೀಡುವ ಅವಶ್ಯಕತೆ ಇದೆ. ನಿಮ್ಮ ಬಳಿ ಅಧಿಕ ನಗದು ಹಣ ಇರುವ ಅವಶ್ಯಕತೆ ಇದೆ. ದೀರ್ಘಾವಧಿಯ ಬಾಂಡ್ ಗಳಿಂದ ದೂರ ಉಳಿಯಬೇಕು ಹಾಗೂ ಶಾರ್ಟ್ ಟರ್ಮ್ ಟ್ರೆಜರಿ ಗಳಂತಹ ಇನಫ್ಲೇಶನ್ ಇಂಡೆಕ್ಸ್ ಬಾಂಡ್ ಗಳಲ್ಲಿ ಹೂಡಿಕೆಗೆ ಅವರು ಸಲಹೆ ನೀಡಿದ್ದಾರೆ. 2007 ಹಾಗೂ 2008ರ ಆರ್ಥಿಕ ಬಿಕ್ಕಟ್ಟಿನ ಕುರಿತು ನೌರಿಯಲ್ ರೌಬಿನಿ ಖಚಿತ ಭವಿಷ್ಯವನ್ನು ನುಡಿದಿದ್ದರು. ಅಂದಿನಿಂದ ಅವರು ಡಾ. ಡೂಮ್ ಹೆಸರಿನಿಂದ ಖ್ಯಾತರಾಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News