ನವದೆಹಲಿ : ಕೊರೊನಾ ಸಾಂಕ್ರಾಮಿಕದ (Corona virus) ಪರಿಣಾಮ ಜೂನ್ ತಿಂಗಳ ಜಿಎಸ್‌ಟಿ ಸಂಗ್ರಹದಲ್ಲಿ ಮತ್ತೆ ಭಾರಿ ಕುಸಿತ ಕಂಡಿದೆ. ಜೂನ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಮುಕ್ತಾಯಗೊಂಡಿದ್ದು, ಒಟ್ಟು 92,849 ಕೋಟಿ ರೂ. ಸಂಗ್ರಹವಾಗಿದೆ. ಈ ಮೂಲಕ, ಕಳೆದ 8 ತಿಂಗಳಲ್ಲಿಯೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ನೊಳಗೆ ಜಿಎಸ್‌ಟಿ (GST) ಸಂಗ್ರಹವು ಕುಸಿತ ಕಂಡಂತಾಗಿದೆ. 


COMMERCIAL BREAK
SCROLL TO CONTINUE READING

ಈ ಒಟ್ಟು ಸಂಗ್ರಹದಲ್ಲಿ ಸಿಜಿಎಸ್‌ಟಿಯ (CGST) ಪಾಲು 16,424 ಕೋಟಿ ರೂ. ಆದರೆ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿ (IGST) ಕ್ರಮವಾಗಿ 20,397 ರೂ. ಮತ್ತು 49,079 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 25,762 ಕೋಟಿ ರೂ. ಸೇರಿ) ಹಾಗೂ ಸೆಸ್ 6,949 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ 809 ಕೋಟಿ ರೂ. ಸೇರಿ) ರೂ. ಆಗಿದೆ ಎಂದು  ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಇದನ್ನೂ ಓದಿ: GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ


2021ರ ಜೂನ್ 5 ರಿಂದ ಜುಲೈ 5 ರವರೆಗೆ ಸಂಗ್ರಹಿಸಿರುವ ಜಿಎಸ್‌ಟಿಯನ್ನು (GST) ಈ ಅಂಕಿ-ಅಂಶಗಳು ಹೊಂದಿವೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನಲೆ ಲಾಕ್ ಡೌನ್ (Lockdown) ಪರಿಣಾಮ ತೆರಿಗೆದಾರರಿಗೆ ಹಲವಾರು ಪರಿಹಾರ ಕ್ರಮಗಳನ್ನು ಹಣಕಾಸು ಸಚಿವಾಲಯ ಪ್ರಕಟಿಸಿತ್ತು. ಇದರಲ್ಲಿ ಜಿಎಸ್‌ಟಿ ಮನ್ನಾ ಮತ್ತು ಜಿಎಸ್‌ಟಿ ಕಡಿತ ಒಳಗೊಂಡಿದ್ದು, ಸಂಗ್ರಹದಲ್ಲಿ ಭಾರೀ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.  


ಸರ್ಕಾರವು ಸಿಜಿಎಸ್‌ಟಿಗೆ 19,286 ಕೋಟಿ ರೂ. ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ 16,939 ಕೋಟಿ ರೂ.ವನ್ನು ಹೊಂದಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಜಿಎಸ್‌ಟಿ ಆದಾಯಕ್ಕೆ ಹೋಲಿಸಿದರೆ ಜೂನ್‌ನ ಆದಾಯವು ಶೇ.2 ರಷ್ಟು ಹೆಚ್ಚಾಗಿದೆ.


ಇದನ್ನೂ ಓದಿ: Indian Railways: Confirm ticket ಕಳೆದ ಹೋದರೆ ರೈಲು ಪ್ರಯಾಣ ಮಾಡುವುದು ಹೇಗೆ ತಿಳಿಯಿರಿ


8 ತಿಂಗಳು ನಿರಂತರವಾಗಿ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದ ಬಳಿಕ ಈ 1 ಲಕ್ಷ ಕೋಟಿ ರೂ.ಗಳ ಜಿಎಸ್‌ಟಿ (GST) ಕುಸಿತವು ದಾಖಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.