ಮಾರ್ಚ್ ತಿಂಗಳಲ್ಲಿ ದಾಖಲೆಯ 1.23 ಲಕ್ಷ ಕೋಟಿ ರೂ GST ಸಂಗ್ರಹ

ಮಾರ್ಚ್‌ ತಿಂಗಳಲ್ಲಿ ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ 1.23 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ 27 ರಷ್ಟು ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

Last Updated : Apr 1, 2021, 08:41 PM IST
  • ಮಾರ್ಚ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯವು 1,23,902 ಕೋಟಿ ರೂ.ಗಳಾಗಿದ್ದು, ಅದರಲ್ಲಿ ಸಿಜಿಎಸ್ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ.,ಐಜಿಎಸ್‌ಟಿ 62,842 ಕೋಟಿ ರೂ. (31,097 ಕೋಟಿ ರೂ. ಸರಕುಗಳು) ಮತ್ತು ಸೆಸ್ 8,757 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 935 ಕೋಟಿ ರೂ. ಸೇರಿದಂತೆ) ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ದಾಖಲೆಯ 1.23 ಲಕ್ಷ ಕೋಟಿ ರೂ GST ಸಂಗ್ರಹ title=
ಸಾಂದರ್ಭಿಕ ಚಿತ್ರ

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ 1.23 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ, ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ 27 ರಷ್ಟು ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.

ಮಾರ್ಚ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯವು 1,23,902 ಕೋಟಿ ರೂ.ಗಳಾಗಿದ್ದು, ಅದರಲ್ಲಿ ಸಿಜಿಎಸ್ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ.,ಐಜಿಎಸ್‌ಟಿ 62,842 ಕೋಟಿ ರೂ. (31,097 ಕೋಟಿ ರೂ. ಸರಕುಗಳು) ಮತ್ತು ಸೆಸ್ 8,757 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 935 ಕೋಟಿ ರೂ. ಸೇರಿದಂತೆ) ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: HD Kumaraswamy: 'ಕೇಂದ್ರ ಸರ್ಕಾರದ ಈ ನಿರ್ಧಾರ ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ'

ಜಿಎಸ್ಟಿ ಪರಿಚಯಿಸಿದ ನಂತರದ ಇದೆ ಮೊದಲ ಬಾರಿಗೆ ಜಿಎಸ್ಟಿ (GST) ಅತಿ ಹೆಚ್ಚಿನ ಪ್ರಮಾಣದ ಏರಿಕೆಯನ್ನು ಕಂಡಿದೆ. ಕಳೆದ ಐದು ತಿಂಗಳುಗಳಲ್ಲಿ ಜಿಎಸ್ಟಿ ಆದಾಯದಲ್ಲಿ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, ಮಾರ್ಚ್ 2021 ರ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಜಿಎಸ್ಟಿ ಆದಾಯಕ್ಕಿಂತ 27% ಹೆಚ್ಚಾಗಿದೆ. ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು 70% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 17% ಹೆಚ್ಚಾಗಿದೆ.

ಇದನ್ನೂ ಓದಿ:RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel

ಜಿಎಸ್ಟಿ ಆದಾಯವು ಈ ಹಣಕಾಸು ವರ್ಷದ ಮೊದಲ, ಎರಡನೇ, ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿ ಕ್ರಮವಾಗಿ (-) 41%, (-) 8%, 8% ಮತ್ತು 14% ನಷ್ಟು ಬೆಳವಣಿಗೆಯ ದರವನ್ನು ಕಂಡಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಜಿಎಸ್ಟಿ ಆದಾಯ ಮತ್ತು ಒಟ್ಟಾರೆ ಆರ್ಥಿಕತೆಯ ಚೇತರಿಕೆಯ ಪ್ರವೃತ್ತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News