Credit Card: ಕ್ರೆಡಿಟ್ ಕಾರ್ಡ್ನಿಂದಲೂ CIBIL ಸ್ಕೋರ್ ಸುಧಾರಿಸಬಹುದು!
Credit Card: ನಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್‌ಗಳನ್ನು ಅನಗತ್ಯ ವೆಚ್ಚ ಎಂದು ಪರಿಗಣಿಸುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಬಳಸುವುದರಿಂದ ಇದು ತುಂಬಾ ಪ್ರಯೋಜನಕಾರಿ ಆಗಿದೆ.
Credit Card: ಹಣಕಾಸಿನ ಅಗತ್ಯವಿದ್ದಾಗ ಸಾಲ ತೆಗೆದುಕೊಳ್ಳಲು CIBIL ಸ್ಕೋರ್ ತುಂಬಾ ಅಗತ್ಯ. ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗುತ್ತದೆ. ಆದರೆ, CIBIL ಸ್ಕೋರ್ ಕೆಟ್ಟದಾಗಿದ್ದರೆ ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯುವುದು ಅಷ್ಟು ಸುಲಭವಲ್ಲ. ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಲು ಕ್ರೆಡಿಟ್ ಕಾರ್ಡ್ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?
ನಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್‌ಗಳನ್ನು ಅನಗತ್ಯ ವೆಚ್ಚ ಎಂದು ಪರಿಗಣಿಸುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಬಳಸುವುದರಿಂದ ಇದು ತುಂಬಾ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ.
ಕ್ರೆಡಿಟ್ ಕಾರ್ಡ್ ಪ್ರಯೋಜನ:
ತಕ್ಷಣದ ವೆಚ್ಚಗಳನ್ನು ಪೂರೈಸಲು:
ತಕ್ಷಣದ ಆವಶ್ಯಕತೆಗಳನ್ನು ಪೂರೈಸಲು ಕೈಯಲ್ಲಿ ಸಾಕಷ್ಟು ಹಣವಿಲ್ಲದಿದ್ದಾಗ ಕ್ರೆಡಿಟ್ ಕಾರ್ಡ್ ಸಹಾಯದಿಂದ ನಿಮ್ಮ ಖರ್ಚು-ವೆಚ್ಚಗಳನ್ನು ಸುಲಭವಾಗಿ ನಿಭಾಯಿಸಬಹುದು. ಇದರ ವೈಶಿಷ್ಟ್ಯವೆಂದರೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಖರೀದಿ ಮತ್ತು ಪಾವತಿಗಳ ಮೇಲೆ ಗ್ರೇಸ್ ಅವಧಿಯನ್ನು ಪಡೆಯಬಹುದು. ಈ ಅವಧಿಯೊಳಗೆ ಪಾವತಿಗಳನ್ನು ಪೂರ್ಣಗೊಳಿಸಿದರೆ ಹಣಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಈ ಗ್ರೇಸ್ ಅವಧಿಯು 18 ದಿನಗಳಿಂದ 55 ದಿನಗಳವರೆಗೆ ಇರಬಹುದು.
ಇದನ್ನೂ ಓದಿ- Goat Bank : ಏನಿದು ಪ್ರಧಾನಿ ಮೋದಿ ಪ್ರಸ್ತಾಪಿಸಿದ ಗೋಟ್ ಬ್ಯಾಂಕ್ ಯೋಜನೆ? ಹೇಗೆ ಕಾರ್ಯ ನಿರ್ವಹಿಸುತ್ತದೆ ?
ರಿಯಾಯಿತಿ ಕೊಡುಗೆಗಳ ಲಾಭ:
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅಗ್ಗದ ದರದಲ್ಲಿ ಶಾಪಿಂಗ್ ಗೆ ಅವಕಾಶ ದೊರೆಯುತ್ತದೆ. ಇದಲ್ಲದೆ, ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ, ನೀವು ರಿವಾರ್ಡ್ ಪಾಯಿಂಟ್‌ಗಳು, ಉಡುಗೊರೆ ಕಾರ್ಡ್‌ಗಳು, ವೋಚರ್‌ಗಳು, ರಿಯಾಯಿತಿಗಳು, ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್‌ಗಳ ಪ್ರಯೋಜನಗಳನ್ನು ಪದೆಯಬಹುದು.
ವಿಮಾ ಸೌಲಭ್ಯ:
ಡೆಬಿಟ್ ಕಾರ್ಡ್‌ನಂತೆ, ಕ್ರೆಡಿಟ್ ಕಾರ್ಡ್‌ನಲ್ಲಿಯೂ ನಿಮಗೆ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಇದರಲ್ಲಿ, ಗ್ರಾಹಕರಿಗೆ ಆಕಸ್ಮಿಕ ಸಾವು ಮತ್ತು ಶಾಶ್ವತ ಸಂಪೂರ್ಣ ಅಂಗವೈಕಲ್ಯದ ವಿರುದ್ಧ ವಿಮೆಯನ್ನು ನೀಡಲಾಗುತ್ತದೆ. ಪ್ರತಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಲ್ಲಿ ಅದರ ವರ್ಗಕ್ಕೆ ಅನುಗುಣವಾಗಿ ಕವರ್ ನೀಡಲಾಗುತ್ತದೆ.
ಇದನ್ನೂ ಓದಿ- Bank Holidays in March : ಮಾರ್ಚ್ ನಲ್ಲಿ 14 ದಿನ ಬ್ಯಾಂಕ್ ಬಂದ್ ! ಇಲ್ಲಿದೆ RBI ಬಿಡುಗಡೆ ಮಾಡಿದ Holiday List
CIBIL ಸ್ಕೋರ್ ಸುಧಾರಿಸಲು ತುಂಬಾ ಪ್ರಯೋಜನಕಾರಿ ಕ್ರೆಡಿಟ್ ಕಾರ್ಡ್:
ಕ್ರೆಡಿಟ್ ಸ್ಕೋರ್ ಅನ್ನು ಎರಡು-ಮೂರು ವಾರಗಳಿಗೊಮ್ಮೆ ನವೀಕರಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿಮ್ಮ ಸಾಲವನ್ನು ಪ್ರಚೋದಿಸುತ್ತದೆ. ಕ್ರೆಡಿಟ್ ಕಾರ್ಡ್‌ಗಳನ್ನು ಸರಿಯಾಗಿ ನಿರ್ವಹಿಸುವುದರಿಂದ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದು. ಕ್ರೆಡಿಟ್ ಕಾಡ್ ಬಳಸಿ ಮತ್ತು ಕ್ರೆಡಿಟ್ ಕಾರ್ಡಿನ ಬಿಲ್ ಅನ್ನು ಸರಿಯಾದ ಸಮಯಕ್ಕೆ ಪಾವತಿಸುವುದರಿಂದ ಇದು ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.