Bank Holidays in March 2024 : ಇನ್ನೆರಡು ದಿನಗಳು ಫೆಬ್ರವರಿ ತಿಂಗಳು ಕೊನೆಯಾಗುತ್ತದೆ. ವರ್ಷದ ಮೂರನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಪ್ರತಿ ತಿಂಗಳು ನಮಗೆ ಬ್ಯಾಂಕ್ ಗೆ ಸಂಬಂಧ ಪಟ್ಟ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಹಾಗೆಯೇ ಮಾರ್ಚ್‌ನಲ್ಲಿಯೂ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳು ಬಾಕಿಯಿದ್ದರೆ ಬ್ಯಾಂಕ್ ಗೆ ತೆರಳುವ ಮುನ್ನ ಬ್ಯಾಂಕ್ ಹಾಲಿ ಡೇ ಲಿಸ್ಟ್ (Bank Holiday List) ಅನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ. ಮುಂದಿನ ತಿಂಗಳು ಅಂದರೆ ಮಾರ್ಚ್‌ನಲ್ಲಿ ದೇಶದಾದ್ಯಂತ ಕನಿಷ್ಠ 14 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಮಾರ್ಚ್ ನಲ್ಲಿ ಶಿವರಾತ್ರಿಯ ಜೊತೆಗೆ ಹೋಳಿ ಹಬ್ಬವೂ ಇರುತ್ತದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳ ಹೊರತಾಗಿ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಕೂಡಾ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಇನ್ನು ಪ್ರತಿ ಭಾನುವಾರವೂ ಬ್ಯಾಂಕ್ ರಜೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡುತ್ತದೆ.
ಮಾರ್ಚ್ ತಿಂಗಳ ರಜಾದಿನಗಳ ಪಟ್ಟಿ :
> ಮಾರ್ಚ್ 1: ಚಾಪ್ಚಾರ್ ಕುಟ್ (ಮಿಜೋರಾಂ)
> ಮಾರ್ಚ್ 3: ಭಾನುವಾರದ ರಜೆ
> ಮಾರ್ಚ್ 8: ಮಹಾಶಿವರಾತ್ರಿ (ತ್ರಿಪುರ, ಮಿಜೋರಾಂ, ತಮಿಳುನಾಡು, ಸಿಕ್ಕಿಂ, ಅಸ್ಸಾಂ, ಮಣಿಪುರ, ಇಟಾನಗರ, ರಾಜಸ್ಥಾನ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳ, ನವದೆಹಲಿ, ಗೋವಾ, ಬಿಹಾರ , ಮೇಘಾಲಯ ಹೊರತುಪಡಿಸಿ)
> 9 ಮಾರ್ಚ್: ತಿಂಗಳ ಎರಡನೇ ಶನಿವಾರ
> 10 ಮಾರ್ಚ್: ಭಾನುವಾರದ ರಜೆ
> 17 ಮಾರ್ಚ್: ಭಾನುವಾರದ ರಜೆ
> 22 ಮಾರ್ಚ್: ಬಿಹಾರ ದಿನ (ಬಿಹಾರ)
> 23 ಮಾರ್ಚ್: ತಿಂಗಳ ನಾಲ್ಕನೇ ಶನಿವಾರ
> 24 ಮಾರ್ಚ್: ಭಾನುವಾರದ ರಜೆ
> ಮಾರ್ಚ್ 25: ಹೋಳಿ (ಕರ್ನಾಟಕ, ಒಡಿಶಾ, ತಮಿಳುನಾಡು, ಮಣಿಪುರ, ಕೇರಳ, ನಾಗಾಲ್ಯಾಂಡ್, ಬಿಹಾರ, ಶ್ರೀನಗರ ಹೊರತುಪಡಿಸಿ)
> ಮಾರ್ಚ್ 26: ಯೋಸಾಂಗ್ 2 ನೇ ದಿನ/ಹೋಳಿ (ಒರಿಸ್ಸಾ, ಮಣಿಪುರ, ಬಿಹಾರ)
> ಮಾರ್ಚ್ 27: ಹೋಳಿ (ಬಿಹಾರ)
> ಮಾರ್ಚ್ 29: ಶುಭ ಶುಕ್ರವಾರ (ತ್ರಿಪುರಾ, ಅಸ್ಸಾಂ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹೊರತುಪಡಿಸಿ)
> ಮಾರ್ಚ್ 31: ಭಾನುವಾರದ ರಜೆ
ಇದನ್ನೂ ಓದಿ : Credit Card ನಿಂದ ಈ ಮೂರು ಕೆಲಸ ಮಾಡುವವರೆ ಹೆಚ್ಚು ತೊಂದರೆ ಅನುಭವಿಸುತ್ತಾರೆ! ಪಾರಾಗುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ
ಆನ್‌ಲೈನ್ ಬ್ಯಾಂಕಿಂಗ್ ವಹಿವಾಟು ಮಾಡಬಹುದು :
ಮಾರ್ಚ್‌ನಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ (Bank Holidays in March 2024) ಇದ್ದರೂ ನೀವು ಚಿಂತಿಸಬೇಕಾಗಿಲ್ಲ. ಹೌದು, ಬ್ಯಾಂಕ್ ರಜಾದಿನಗಳಲ್ಲಿಯೂ ಆನ್‌ಲೈನ್ ಬ್ಯಾಂಕಿಂಗ್ (Online banking) ಮೂಲಕ ನಿಮ್ಮ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು.ಆದರೆ ಬ್ಯಾಂಕ್ ರಜಾ ದಿನಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದರಿಂದ ನಿಮ್ಮ ಕೆಲಸವನ್ನು ಸುಲಭವಾಗಿ ಯೋಜಿಸಲು ಅನುಕೂಲವಾಗುತ್ತದೆ. ಮೇಲಿನ ಬ್ಯಾಂಕ್ ರಜಾದಿನಗಳ ಪಟ್ಟಿಯಲ್ಲಿ ಸಾಮಾನ್ಯ ಮಾಹಿತಿಯನ್ನು ನಿಮಗೆ ನೀಡಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ರಜೆಯ ದಿನಾಂಕದಲ್ಲಿ ಬದಲಾವಣೆ ಇರಬಹುದು. ಆದ್ದರಿಂದ, ಬ್ಯಾಂಕ್ ರಜೆಯ (Bank Holiday) ಬಗ್ಗೆ ನಿಖರವಾದ ಮಾಹಿತಿಗಾಗಿ ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಶಾಖೆಯನ್ನು ಸಂಪರ್ಕಿಸಬಹುದು.
ಆರ್‌ಬಿಐ ಅಧಿಕೃತ ಪಟ್ಟಿ :
ಭಾರತೀಯ ರಿಸರ್ವ್ ಬ್ಯಾಂಕ್ (RBI) ವರ್ಷವಿಡೀ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪಟ್ಟಿಯು ರಾಷ್ಟ್ರೀಯ/ರಾಜ್ಯ ರಜಾದಿನಗಳು, ಧಾರ್ಮಿಕ ಹಬ್ಬಗಳು, ಬ್ಯಾಂಕ್‌ಗಳ ಅಗತ್ಯತೆಗಳು ಮತ್ತು ಸರ್ಕಾರದ ಪ್ರಕಟಣೆಗಳು ಹಾಗೂ ಇತರ ಬ್ಯಾಂಕ್‌ಗಳೊಂದಿಗಿನ ಸಮನ್ವಯದಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ರಜಾದಿನಗಳ ಪಟ್ಟಿಯನ್ನು ಆರ್‌ಬಿಐ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ : Arecanut Rate Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.