ನವದೆಹಲಿ: ಟಾಟಾ ಕಂಪನಿಯ ಅತೀ ದೊಡ್ಡ ವೈಯಕ್ತಿಕ ಷೇರುದಾರ ಸೈರಸ್‌ ಮಿಸ್ತ್ರಿಯವರ ತಂದೆ ಪಲ್ಲೊಂಜಿ ಮಿಸ್ತ್ರಿ ನಿಧನರಾಗಿದ್ದಾರೆ. ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಪಲ್ಲೊಂಜಿಯವರು  ಸೋಮವಾರ ರಾತ್ರಿ ಮುಂಬೈನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Health Tips: ಮೊಸರಿನೊಂದಿಗೆ ಅಪ್ಪಿತಪ್ಪಿಯೂ ಕೂಡ ಇವುಗಳನ್ನು ಸೇವಿಸಬೇಡಿ


ಏಷ್ಯಾದಲ್ಲಿಯೇ ಐಷಾರಾಮಿ ಹೋಟೆಲ್‌, ಕ್ರೀಡಾಂಗಣ, ಅರಮನೆ ಸೇರಿದಂತೆ ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿದ ಖ್ಯಾತಿ ಶಾಪೂರ್ಜಿ ಪಲ್ಲೊಂಜಿ ಗ್ರೂಪ್‌ಗೆ ಸೇರುತ್ತದೆ. ಈ ಗ್ರೂಪ್‌ನ ಮುಖ್ಯಸ್ಥರಾಗಿದ್ದ ಪಲ್ಲೊಂಜಿ ಮಿಸ್ತ್ರಿ ಕೊನೆಯುಸಿರೆಳೆದಿದ್ದಾರೆ. ಟಾಟಾ ಗ್ರೂಪ್‌ನಲ್ಲಿ ಶೇ. 18.4ರಷ್ಟು ಷೇರು ಹೊಂದಿದೆ. ಪಲ್ಲೊಂಜಿ ಗ್ರೂಪ್‌ ಟಾಟಾ ಗ್ರೂಪ್‌ನಲ್ಲಿ ಅತೀ ದೊಡ್ಡ ವೈಯಕ್ತಿಕ ಷೇರುದಾರಿಕೆಯನ್ನು ಹೊಂದಿರುವ ಕಂಪನಿಯಾಗಿದೆ.  


ಬರೋಬ್ಬರಿ 150 ವರ್ಷಗಳ ಇತಿಹಾಸವಿರುವ  ಶಾಪೂರ್ಜಿ ಪಲ್ಲೊಂಜಿ ಗ್ರೂಪ್‌ಗೆ ಮುಖ್ಯಸ್ಥರಾಗಿದ್ದ ಅವರು ಕಂಪನಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದ್ದರು. ಕೈಗಾರಿಕೋದ್ಯಮದಲ್ಲಿ ಪಲ್ಲೊಂಜಿಯವರ ಸಾಧನೆಯನ್ನು ಗುರುತಿಸಿದ ಭಾರತ ಸರ್ಕಾರ, 2016ರಲ್ಲಿ 'ಪದ್ಮ ಭೂಷಣ' ನೀಡಿ ಗೌರವಿಸಿದೆ. 


ಫೋರ್ಬ್ಸ್ ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ, ಪಲ್ಲೊಂಜಿ ಅವರ ಆಸ್ತಿ ಮೌಲ್ಯ ಬರೋಬ್ಬರಿ 1 ಲಕ್ಷ ಕೋಟಿಗೂ ಅಧಿಕವಿದೆ. ಇನ್ನು ಟಾಟಾ ಗ್ರೂಪ್ ಮುಖ್ಯಸ್ಥರಾದ ಸೈರಸ್ ಮಿಸ್ತ್ರಿ ಅವರ ತಂದೆ ಪಲ್ಲೊಂಜಿ ಅವರು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 125ನೇ ಸ್ಥಾನದಲ್ಲಿದ್ದರು.


ಆರ್‌ಬಿಐ ಪ್ರಧಾನ ಕಚೇರಿ, ಎಸ್‌ಬಿಐ, ಎಚ್‌ಎಸ್‌ಬಿಸಿ, ಗ್ರಿಂಡ್ಲೇ ಬ್ಯಾಂಕ್, ದಕ್ಷಿಣ ಮುಂಬೈನಲ್ಲಿ ಸೇರಿದಂತೆ ದೇಶ ವಿದೇಶಗಳಲ್ಲಿ ಹಲವಾರು ಹೆಸರಾಂತ ಕಟ್ಟಡಗಳನ್ನು ನಿರ್ಮಿಸಿದ ಕೀರ್ತಿ ಪಲ್ಲೊಂಜಿ ಗ್ರೂಪ್‌ಗೆ ಸೇರುತ್ತದೆ. 


ಸಿನಿಮಾ ಕ್ಷೇತ್ರದಲ್ಲೂ ಸಾಧನೆ: 
ಪಲ್ಲೊಂಜಿ ಗ್ರೂಪ್‌ ಕೇವಲ ಕೈಗಾರಿಕೆ ಮಾತ್ರವಲ್ಲದೆ, ಸಿನಿಮಾ ರಂಗದಲ್ಲೂ ಛಾಪು ಮೂಡಿಸಿದ್ದು, 1960ರಲ್ಲಿ ಬಿಡುಗಡೆಯಾದ 'ಮುಘಲ್-ಎ-ಅಜಮ್' ಸಿನಿಮಾವನ್ನು ನಿರ್ಮಾಣ ಮಾಡಿದೆ. ಇಂದಿಗೂ ಸಹ ಕೆಲ ಸಿನಿಮಾಗಳ ನಿರ್ಮಾಣ ಜವಾಬ್ದಾರಿಯನ್ನು ಈ ಸಂಸ್ಥೆ ಹೊತ್ತಿದೆ.  


ಇದನ್ನೂ ಓದಿ: ಯಾವುದೇ ಖಾತರಿಯಿಲ್ಲದೇ ಪಡೆಯಿರಿ ಕೇಂದ್ರದ ಸಾಲ! ಸಕಾಲಕ್ಕೆ ಮರುಪಾವತಿಸಿದ್ರೆ ಸಿಗುತ್ತೆ 5 ಪಟ್ಟು ಹಣ


ಸುಮಾರು 50 ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಗ್ರೂಪ್‌ ಅನೇಕರಿಗೆ ಸೇವೆಗಳನ್ನೂ ಸಲ್ಲಿಸಿದೆ. ಸಮಾಜ ಸೇವೆಯಲ್ಲೂ ಈ ಗ್ರೂಪ್‌ ಗುರುತಿಸಿಕೊಂಡಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ