ಯಾವುದೇ ಖಾತರಿಯಿಲ್ಲದೇ ಪಡೆಯಿರಿ ಕೇಂದ್ರದ ಸಾಲ! ಸಕಾಲಕ್ಕೆ ಮರುಪಾವತಿಸಿದ್ರೆ ಸಿಗುತ್ತೆ 5 ಪಟ್ಟು ಹಣ!!

ನಿರುದ್ಯೋಗ ಸಮಸ್ಯೆಯ ಹಿನ್ನೆಲೆ ಅನೇಕ ಜನರು ಬ್ಯುಸಿನೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದೇಶದಲ್ಲಿ ಸಣ್ಣ ವ್ಯಾಪಾರ ಮಾಡುವವರಿಗೆ ನೆರವಾಗಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. 

Written by - Chetana Devarmani | Last Updated : Jun 28, 2022, 03:58 PM IST
  • ಯಾವುದೇ ಖಾತರಿಯಿಲ್ಲದೇ ಪಡೆಯಿರಿ ಕೇಂದ್ರದ ಸಾಲ
  • ಸಕಾಲಕ್ಕೆ ಮರುಪಾವತಿಸಿದ್ರೆ ಸಿಗುತ್ತೆ 5 ಪಟ್ಟು ಹಣ
  • ಈ ಯೋಜನೆಯನ್ನ ಕೇಂದ್ರ ಸರ್ಕಾರ 2024 ರ ವರೆಗೆ ವಿಸ್ತರಿಸಿದೆ
ಯಾವುದೇ ಖಾತರಿಯಿಲ್ಲದೇ ಪಡೆಯಿರಿ ಕೇಂದ್ರದ ಸಾಲ! ಸಕಾಲಕ್ಕೆ ಮರುಪಾವತಿಸಿದ್ರೆ ಸಿಗುತ್ತೆ 5 ಪಟ್ಟು ಹಣ!!  title=
ಸಾಲ

ನಿರುದ್ಯೋಗ ಸಮಸ್ಯೆಯ ಹಿನ್ನೆಲೆ ಅನೇಕ ಜನರು ಬ್ಯುಸಿನೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದೇಶದಲ್ಲಿ ಸಣ್ಣ ವ್ಯಾಪಾರ ಮಾಡುವವರಿಗೆ ನೆರವಾಗಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸ್ಕೀಮ್‌ ಅಡಿಯಲ್ಲಿ, ಹೊಸ ಉದ್ಯೋಗವನ್ನ ಪ್ರಾರಂಭಿಸಲು 10,000 ರೂಪಾಯಿವರೆಗಿನ ಸಾಲವನ್ನ ಯಾವುದೇ ಗ್ಯಾರೆಂಟಿಯಿಲ್ಲದೇ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಸಾಲ ಸೌಲಭ್ಯವನ್ನು ನೀಡುತ್ತಿದೆ. ಕೊರೊನಾ ಸಮಯದಲ್ಲಿ ಕಂಗೆಟ್ಟ ಬೀದಿ ವ್ಯಾಪಾರಿಗಳಿಗೆ ಈ ಯೋಜನೆ ಸಹಾಯಕವಾಗಿದೆ. ಈ ಯೋಜನೆಯನ್ನ ಕೇಂದ್ರ ಸರ್ಕಾರ 2024 ರ ವರೆಗೆ ವಿಸ್ತರಿಸಿದೆ.

ಇದನ್ನೂ ಓದಿ: Income Tax Return: ಜುಲೈ 31ರೊಳಗೆ ಈ ಕೆಲಸ ಮುಗಿಸಲು ಮರೆಯಬೇಡಿ, ಇಲ್ದಿದ್ರೆ ದಂಡ ಗ್ಯಾರಂಟಿ

ಈ ಯೋಜನೆ ಅಡಿಯಲ್ಲಿ, ಬೀದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ. ಸಾಲದ ಬಡ್ಡಿಗೆ ಸಬ್ಸಿಡಿ ಜೊತೆಗೆ ಮೊದಲ ಬಾರಿಗೆ ಪಡೆದ ಸಾಲವನ್ನ ಮರುಪಾವತಿಸಿದರೆ, ಅವರು ಎರಡನೇ ಬಾರಿಗೆ 20 ಸಾವಿರ ರೂಪಾಯಿ ಮತ್ತು ಮೂರನೇ ಬಾರಿ 50 ಸಾವಿರ ರೂಪಾಯಿ ಸಾಲಕ್ಕೆ ಅರ್ಹರಾಗಿರುತ್ತಾರೆ. 

ಕೇಂದ್ರ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನ ಪಡೆಯಲು, ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು. ಮತ್ತೊಂದು ಪ್ರಮುಖ ಮಾಹಿತಿ ಎಂದರೆ ಈ ಸಾಲಕ್ಕೆ ಯಾವುದೇ ಗ್ಯಾರಂಟಿ ನೀಡುವ ಅಗತ್ಯವಿಲ್ಲ. ಈ ಸಾಲದ ಹಣವನ್ನು ಒಂದು ವರ್ಷದ ಅವಧಿಯಲ್ಲಿ ಪ್ರತಿ ತಿಂಗಳು ಕಂತುಗಳಲ್ಲಿ ಮರುಪಾವತಿ ಮಾಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಯಾವುದೇ ಸರ್ಕಾರಿ ಬ್ಯಾಂಕ್‌ನಲ್ಲಿ ಈ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು. ಎಲ್ಲಾ ಸರ್ಕಾರಿ ಬ್ಯಾಂಕ್‌ಗಳಲ್ಲಿ ಈ ಯೋಜನೆಯ ರೂಪವನ್ನ ತೆಗೆದುಕೊಂಡು ಭರ್ತಿ ಮಾಡಿ. ಇದರೊಂದಿಗೆ, ನಿಮ್ಮ ಆಧಾರ್ ಕಾರ್ಡ್‌ನ ಜೆರಾಕ್ಸ್‌ ಅನ್ನು ಲಗತ್ತಿಸಬೇಕು. ಅರ್ಜಿಯನ್ನು ಅನುಮೋದಿಸಿದ ನಂತರ, ಮೊದಲ ತಿಂಗಳ ಕಂತು ನಿಮ್ಮ ಖಾತೆಗೆ ಜಮೆಯಾಗುತ್ತದೆ.

ಇದನ್ನೂ ಓದಿ: Mutual Funds ಗಳಿಗೆ ಅಂತಾರಾಷ್ಟ್ರೀಯ ಸ್ಟಾಕ್ ಗಳಲ್ಲಿ ಹೂಡಿಕೆಗೆ ಅನುಮತಿ ನೀಡಿದ SEBI, ಹೂಡಿಕೆದಾರರಿಗೇನು ಲಾಭ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News