ನವದೆಹಲಿ: ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆ ಮತ್ತೊಮ್ಮೆ ಹೆಚ್ಚಾಗಲಿದೆ. ಆದರೆ, ಇನ್ನೊಂದು ವಿಷಯದಲ್ಲಿಯೂ ಕೂಡ ಕೇಂದ್ರ ನೌಕರರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಮೊದಲು ತುಟ್ಟಿಭತ್ಯೆಯ ಬಗ್ಗೆ ಚರ್ಚೋಸೋಣ. ಎಐಸಿಪಿಐ ಸೂಚ್ಯಂಕ 139.1 ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆ ಶೇ 4ರಷ್ಟು ಹೆಚ್ಚಳವಾಗುವುದು ಬಾಹುತಕ ಖಚಿತ ಎಂದು ಹೇಳಲಾಗುತ್ತಿದೆ. ಇದು ನೌಕರರ ವೇತನವನ್ನು ಭಾರಿ ಹೆಚ್ಚಿಸಲಿದೆ.  1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಇದರ ನೇರ ಲಾಭ ಸಿಗಲಿದೆ. (Business News In Kannada)


COMMERCIAL BREAK
SCROLL TO CONTINUE READING

ಡಿಎ 50% ತಲುಪಲಿದೆ
ಕೇಂದ್ರದ ಮೋದಿ ಸರ್ಕಾರವು ಹೊಸ ವರ್ಷಕ್ಕೆ ಅಂದರೆ ಜನವರಿ 2024 ಕ್ಕೆ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಮತ್ತೊಮ್ಮೆ 4% ಹೆಚ್ಚಿಸಲಿದೆ ಎಂಬುದು ಬಹುತೇಕ ಖಚಿತವಾಗಿದೆ. ಆದರೆ ಈ ಹೆಚ್ಚಳ,  ಮಾರ್ಚ್ನಲ್ಲಿ ಸಂಭವಿಸಲಿದೆ. ನವೆಂಬರ್ 2023 ರವರೆಗಿನ AICPI ಅಂಕಿಅಂಶಗಳು ಪ್ರಕಟಗೊಂಡಿವೆ, ಅವು ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳವನ್ನು ಸೂಚಿಸುತ್ತಿವೆ. ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಾದರೆ ನೌಕರರ ಒಟ್ಟು ತುಟ್ಟಿಭತ್ಯೆ 50% ತಲುಪಲಿದೆ.


ಎರಡನೇ ಸಂತಸದ ಸುದ್ದಿ
ಈಗ ಎರಡನೇ ಒಳ್ಳೆಯ ಸುದ್ದಿಯ ಬಗ್ಗೆ ಹೇಳುವುದಾದರೆ. ಕೇಂದ್ರೀಯ ಉದ್ಯೋಗಿಗಳು ಫಿಟ್‌ಮೆಂಟ್ ಅಂಶದ ಉಡುಗೊರೆಯನ್ನು ಸಹ ಪಡೆಯಬಹುದು. ಈ ಬೇಡಿಕೆ ದೀರ್ಘಕಾಲದಿಂದ ಸರ್ಕಾರದ ಮುಂದೆ ಇಡಲಾಗುತ್ತಿದೆ. ಇದೀಗ  ಈ ವರ್ಷದಲ್ಲಿ ಅದು  ಹೆಚ್ಚಾಗುವ ಮಾತುಗಳು ಕೇಳಿ ಬರುತ್ತಿವೆ. ಇದು ಸಂಭವಿಸಿದಲ್ಲಿ, ನೌಕರರ ವೇತನದಲ್ಲಿ ಭಾರಿ ಏರಿಕೆ ಕಂಡುಬರಲಿದೆ.  7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್‌ಮೆಂಟ್ ಅಂಶ ಹೆಚ್ಚಳದಿಂದಾಗಿ ಕೇಂದ್ರ ನೌಕರರ ಮೂಲ ವೇತನ 8,860 ರೂ.ಗಳಷ್ಟು ಹೆಚ್ಚಾಗಲಿದೆ ಡಿಎ ಹೆಚ್ಚಳದ ನಂತರ ಈ ಹೆಚ್ಚಳವನ್ನು ಕೂಡ ಸರ್ಕಾರ ನೀಡಬಹುದು. ಪ್ರಸ್ತುತ, ಫಿಟ್‌ಮೆಂಟ್ ಅಂಶವು 2.57 ರಷ್ಟಿದೆ. ಮುಂದಿನ ದಿನಗಳಲ್ಲಿ ಇದು 3.68 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾದರೆ ಲೆವೆಲ್-3ರ ಮೂಲ ವೇತನ 18000 ರೂ.ನಿಂದ 26000 ರೂ.ಗೆ ಏರಿಕೆಯಾಗಲಿದೆ. ನೌಕರರ ವೇತನದಲ್ಲಿ ನೇರವಾಗಿ 8000 ರೂ. ಏರಿಕೆ ಕಂಡುಬರಲಿದೆ. ಇದಲ್ಲದೆ, ಇದು ಡಿಎ ಪಾವತಿಯ ಮೇಲೂ ಪರಿಣಾಮ ಬೀರುತ್ತದೆ.


ಇದನ್ನೂ ಓದಿ-Good News! ಹೊಸ ವರ್ಷದಲ್ಲಿ ಎಫ್ಡಿ ಹೂಡಿಕೆ ಮೇಲೆ ಬಂಪರ್ ರೀಟರ್ನ್ ಪಡೆಯಿರಿ, ಬಡ್ಡಿ ದರ ಹೆಚ್ಚಿಸಿದ 4 ಬ್ಯಾಂಕುಗಳು!


X ವರ್ಗ ಮತ್ತು TPTA - ತಿಂಗಳಿಗೆ ಮೂಲ ವೇತನ ರೂ 18000
ಮೂಲ ವೇತನ: ರೂ 18,000
ತುಟ್ಟಿಭತ್ಯೆ (46%): ರೂ 8,280
ಮನೆ ಬಾಡಿಗೆ ಭತ್ಯೆ (27%): ರೂ 5,400
ಸಾರಿಗೆ ಭತ್ಯೆ: 1,350 ರೂ
ಸಾರಿಗೆ ಭತ್ಯೆಯ ಮೇಲಿನ ಡಿಎ: ರೂ 621
ಒಟ್ಟು ವೇತನ: ರೂ 33,651


ಇದನ್ನೂ ಓದಿ-ವರ್ಷ 2024ರಲ್ಲಿ ಬಂಬಾಟ್ ರೀಟರ್ನ್ ನೀಡಲಿದೆ ಈ ಸರ್ಕಾರಿ ಯೋಜನೆ, ನಿಯಮಿತ 4 ಸಾವಿರ ರೂ.ಗಳ ಹೂಡಿಕೆ 22 ಲಕ್ಷ ರೂ.ಗಳಾಗಲಿದೆ!


ಫಿಟ್‌ಮೆಂಟ್ ಫ್ಯಾಕ್ಟರ್‌ನಿಂದಾಗಿ 49,420 ರೂ.ಗಳಷ್ಟು ಸಂಬಳ ಹೆಚ್ಚಾಗುತ್ತದೆ
ಹಂತ-3 ರಲ್ಲಿ ಕೇಂದ್ರ ಉದ್ಯೋಗಿಯ ಮೂಲ ವೇತನವು 18,000 ರೂ ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ ಅವರ ವೇತನವು ರೂ 18,000 X 2.57 = ರೂ 46,260 ಆಗಿರುತ್ತದೆ. ಫಿಟ್‌ಮೆಂಟ್ ಅಂಶವನ್ನು 3.68 ಪಟ್ಟು ಹೆಚ್ಚಿಸಿದರೆ ಸಂಬಳವು 26000X3.68= ರೂ 95,680 ತಲುಪುತ್ತದೆ. ಇದರಲ್ಲಿ ಉದ್ಯೋಗಿಗಳಿಗೆ ಬಂಪರ್ ಲಾಭ ಸಿಗಲಿದೆ. ಅಂದರೆ ಒಟ್ಟಾರೆ ನೌಕರರಿಗೆ ಅವರ ಪ್ರಸ್ತುತ ವೇತನಕ್ಕೆ ಹೋಲಿಸಿದರೆ 49,420 ರೂ. ಲಾಭ ಸಿಗಲಿದೆ. ಈ ಲೆಕ್ಕಾಚಾರವು ಕನಿಷ್ಠ ಮೂಲ ವೇತನದಲ್ಲಿರಲಿದೆ. ಗರಿಷ್ಠ ಸಂಬಳ ಹೊಂದಿರುವವರು ಇದಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವರು. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ