DA Hike: ರಕ್ಷಾಬಂಧನದ ಬಳಿಕ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ LPG ಗ್ಯಾಸ್ ಸಿಲಿಂಡರ್ ಮೇಲೆ 100 ರೂ ಹೆಚ್ಚುವರಿ ಸಬ್ಸಿಡಿ ಘೋಷಿಸಿದೆ. ಈ ಹೆಚ್ಚುವರಿ 100 ರೂ.ಗಳನ್ನು ಸರ್ಕಾರವು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡಲಿದೆ. ಇದಾದ ಬಳಿಕ ಇದೀಗ ಸರ್ಕಾರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಡಿಎ/ಡಿಆರ್ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ವರ್ಷದ ದ್ವಿತೀಯಾರ್ಧದಲ್ಲಿ ಅಂದರೆ ಜುಲೈ 1 ರಿಂದ ಡಿಎ ಹೆಚ್ಚಳದ ಲಾಭವನ್ನು ಪಡೆಯಲಿದ್ದಾರೆ


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ಕೇಂದ್ರ ಸಚಿವ ಸಂಪುಟ ನವರಾತ್ರಿ ಸಂದರ್ಭದಲ್ಲಿ ಸರ್ಕಾರಿ ನೌಕರರ ಡಿಎ ಮತ್ತು ಡಿಆರ್ ಬಗ್ಗೆ ಘೋಷಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಕಳೆದ ಕೆಲವು ವರ್ಷಗಳನ್ನು ನೋಡಿದರೆ, ನವರಾತ್ರಿಯ ಸಮಯದಲ್ಲಿ ಕೇಂದ್ರ ಸಂಪುಟವು ಡಿಎ ಮತ್ತು ಡಿಆರ್ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಟೋಬರ್ 15 ರ ನಂತರ ಯಾವುದೇ ದಿನ ಸರ್ಕಾರಿ ನೌಕರರಿಗೆ ಸರ್ಕಾರ ಶುಭ ಸುದ್ದಿಯನ್ನು ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಅಧಿಸೂಚನೆ ಕೂಡ ಹೊರಬೀಳಲಿದೆ.


ಅಧಿಸೂಚನೆ ಹೊರಡುವ ಮುನ್ನವೇ ಡಿಎ ಹೆಚ್ಚಳ!
ಐದು ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದರೆ, ಸರ್ಕಾರದಿಂದ ಡಿಎ ಹೆಚ್ಚಳದ ಘೋಷಣೆ ಮತ್ತೆ ಒಂದು ಸವಾಲಾಗೇ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಸೂಚನೆ ಹೊರಬೀಳುವ ಮುನ್ನವೇ ಡಿಎ ಘೋಷಿಸಲು ಸರ್ಕಾರ ಯತ್ನಿಸುತ್ತಿದೆ. ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಡಿಎ ಬಗ್ಗೆ ಘೋಷಣೆ ಮಾಡುತ್ತದೆ. ಮೊದಲ ಘೋಷಣೆಯನ್ನು ಮಾರ್ಚ್‌ನಲ್ಲಿ ನಡೆಸಲಾಗುತ್ತದೆ ಮತ್ತು ಉದ್ಯೋಗಿಗಳಿಗೆ ಜನವರಿ 1 ರಿಂದ ನೌಕರರಿಗೆ ಅದರ ಪ್ರಯೋಜನ ಸಿಗುತ್ತದೆ. ಡಿಎಗೆ ಸಂಬಂಧಿಸಿದಂತೆ ಎರಡನೇ ಘೋಷಣೆಯನ್ನು ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುತ್ತದೆ, ಜುಲೈ 1 ರಿಂದ ನೌಕರರು ಅದರ ಪ್ರಯೋಜನಗಳನ್ನು ಪಡೆಯುತ್ತಾರೆ.


ಇದನ್ನೂ ಓದಿ-ಕೋಟ್ಯಾಧಿಪತಿಯಾಗಬೇಕೆ? ಇಂದಿನಿಂದಲೇ ಈ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅನುಸರಿಸಲು ಆರಂಭಿಸಿ!


ಪ್ರಸ್ತುತ ಶೇ. 42 ರಷ್ಟು ದರದಲ್ಲಿ ಡಿಎ ಸಿಗುತ್ತಿದೆ
ಪ್ರಸ್ತುತ ಕೇಂದ್ರದ ನೌಕರರು ಮತ್ತು ಪಿಂಚಣಿದಾರರಿಗೆ ಶೇ.42 ದರದಲ್ಲಿ ಡಿಎ ನೀಡಲಾಗುತ್ತಿದೆ. ಈ ಬಾರಿ ಶೇ.45ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಆದರೆ, ನೌಕರರ ಸಂಘವು ಶೇ.4ರಷ್ಟು ಡಿಎ ಹೆಚ್ಚಳಕ್ಕೆ ಒತ್ತಾಯಿಸುತ್ತಿದೆ. ಡಿಎ ಅನ್ನು ಶೇ.3 ರಷ್ಟು ಹೆಚ್ಚಿಸಿದರೆ, ಜುಲೈ 1 ರಿಂದ ಕೇಂದ್ರದ 47 ಲಕ್ಷ ಉದ್ಯೋಗಿಗಳಿಗೆ ಅದರ ಲಾಭ ಸಿಗಲಿದೆ. ಅದೇ ರೀತಿ 68 ಲಕ್ಷ ಪಿಂಚಣಿದಾರರಿಗೂ ಜುಲೈ 1 ರಿಂದ ಹೆಚ್ಚಾಗಳಿರುವ ಡಿಆರ್ ಬಾಕಿಯನ್ನು ಪಾವತಿಸಲಾಗುವುದು.


ಇದನ್ನೂ ಓದಿ-ಸ್ಥಿರ ಠೇವಣಿ ವಿಷಯದಲ್ಲಿ ಗ್ರಾಹಕರ ನೆಚ್ಚಿನ ಬ್ಯಾಂಕ್ ಗಳು ಯಾವುವು ಗೊತ್ತಾ?


603 ರೂ.ಗಳಿಗೆ ಗ್ಯಾಸ್ ಸಿಲಿಂಡರ್ 
ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1103 ರೂ. ಗಲಾಗಿತ್ತು. ಇದರ ಮೇಲೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸರಕಾರದಿಂದ 200 ರೂ.ಗಳ ಸಹಾಯಧನವನ್ನು ಘೋಷಿಸಲಾಯಿತು. ಸಬ್ಸಿಡಿ ನಂತರ ಸಿಲಿಂಡರ್ ಬೆಲೆ 903 ರೂ.ಗೆ ತಲುಪಿದೆ. ಆದರೆ ರಕ್ಷಾಬಂಧನದ ಸಂದರ್ಭದಲ್ಲಿ ಸರ್ಕಾರವು ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತವನ್ನು ಘೋಷಿಸಿತು. ಸರ್ಕಾರದ ಈ ಕ್ರಮದಿಂದ ಸಾಮಾನ್ಯ ಸಿಲಿಂಡರ್ ಬೆಲೆ 903 ರೂ. ಉಜ್ವಲ ಫಲಾನುಭವಿಗಳಿಗೆ ಸಬ್ಸಿಡಿ ನಂತರ ಸಿಲಿಂಡರ್ ಬೆಲೆ 703 ರೂ.ಗಳಿಗೆ ತಲುಪಿತ್ತು ಇದೀಗ ಮತ್ತೆ 100 ರೂ.ಗಳ ಹೆಚ್ಚುವರಿ ಸಬ್ಸಿಡಿ ದೊರೆತ ಬಳಿಕ ಸಿಲಿಂಡರ್ ನ ವಾಸ್ತವಿಕ ಬೆಲೆ 603 ರೂ.ಗೆ ಇಳಿಕೆಯಾದಂತಾಗಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ