ಸರ್ಕಾರಿ ನೌಕರರಿಗೆ ಬಂಪರ್ !ತುಟ್ಟಿಭತ್ಯೆಯಲ್ಲಿ 50% ಹೆಚ್ಚಳ!ಈ ದಿನ ಹೊರ ಬೀಳುವುದು ಆದೇಶ
7th pay commission DA Hike: ಮಾರ್ಚ್‌ನಲ್ಲಿಯೇ ಸರ್ಕಾರ ನೌಕರರ ಡಿಎಯನ್ನು ಶೇ 4ರಷ್ಟು ಹೆಚ್ಚಿಸಿತ್ತು. ಈಗ ಮತ್ತೆ ಸರ್ಕಾರಿ ನೌಕರರ ಡಿಎಯಲ್ಲಿ ಹೆಚ್ಚಳವಾಗಲಿದೆ.
7th pay commission DA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಹೆಚ್ಚಿಸಲಿದ್ದು, ನೌಕರರು ಪಡೆಯುವ ಡಿಎ ಶೇ.42ರಿಂದ ಶೇ.50ಕ್ಕೆ ಏರಿಕೆಯಾಗಲಿದೆ. ತುಟ್ಟಿಭತ್ಯೆಯನ್ನು ಸರ್ಕಾರ ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಮಾರ್ಚ್‌ನಲ್ಲಿಯೇ ಸರ್ಕಾರ ನೌಕರರ ಡಿಎಯನ್ನು ಶೇ 4ರಷ್ಟು ಹೆಚ್ಚಿಸಿತ್ತು. ಈಗ ಮತ್ತೆ ಸರ್ಕಾರಿ ನೌಕರರ ಡಿಎಯಲ್ಲಿ ಹೆಚ್ಚಳವಾಗಲಿದೆ.
ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳ :
ಮಾರ್ಚ್‌ನಲ್ಲಿ ಕೇಂದ್ರ ನೌಕರರ ಡಿಎಯನ್ನು ಸರ್ಕಾರವು ಶೇಕಡಾ 4 ರಷ್ಟು ಹೆಚ್ಚಿಸಿದೆ. ಈ ಹೆಚ್ಚಳದೊಂದಿಗೆ ತುಟ್ಟಿ ಭತ್ಯೆಯು ಶೇಕಡಾ 42 ಕ್ಕೆ ಏರಿದೆ. ಈ ಹೆಚ್ಚಳವು ಜನವರಿ 2023 ರ ವೇತನಕ್ಕೆ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಈಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈ 2023 ರಿಂದ ಘೋಷಿಸಲಾಗುವುದು. ಈ ಬಾರಿ ಕೂಡಾ ಡಿಎ ಶೇ.4 ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ : Free.. Free.. Free.. ಗೋಫಸ್ಟ್ ತನ್ನ ಈ ಯಾತ್ರಿಗಳಿಗೆ ನೀಡುತ್ತಿದೆ ಉಚಿತ ಫ್ಲೈಟ್ ಟಿಕೆಟ್!
ವೇತನದಲ್ಲಿ ಆಗುವುದು ಬಂಪರ್ ಹೆಚ್ಚಳ :
ಹಣದುಬ್ಬರ ಏರಿಕೆಯ ನಡುವೆಯೂ ಉದ್ಯೋಗಿಗಳ ಭತ್ಯೆಯಲ್ಲಿ ಉತ್ತಮ ಹೆಚ್ಚಳವಾಗುವುದು ಖಚಿತ. ತುಟ್ಟಿಭತ್ಯೆಯಲ್ಲಿನ ಹೆಚ್ಚಳ ದಿಂದ ಮುಂದಿನ ದಿನಗಳಲ್ಲಿ ನೌಕರರ ವೇತನ ಕೂಡಾ ಹೆಚ್ಚಳವಾಗುವುದು.
50 ರಷ್ಟು ತಲುಪಿದ ನಂತರ ಶೂನ್ಯವಾಗುತ್ತದೆ ಡಿಎ :
ತುಟ್ಟಿ ಭತ್ಯೆಯ ನಿಯಮವೆಂದರೆ 2016 ರಲ್ಲಿ ಸರ್ಕಾರ 7 ನೇ ವೇತನ ಆಯೋಗವನ್ನು ಜಾರಿಗೆ ತಂದ ಸಮಯದಲ್ಲಿ ತುಟ್ಟಿಭತ್ಯೆ ಶೂನ್ಯವಾಗಿತ್ತು. ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ತಲುಪಿದ ತಕ್ಷಣ, ಅದನ್ನು ಶೂನ್ಯಗೊಳಿಸಲಾಗುತ್ತದೆ. ಇದಾದ ನಂತರ ಶೇಕಡಾ 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.
ಇದನ್ನೂ ಓದಿ : plant-based meat: ಹೆಚ್ಚುತ್ತಿದೆ ‘ಸಸ್ಯ ಆಧಾರಿತ ಮಾಂಸ’ದ ಬೇಡಿಕೆ: ಈ ಬೆಳೆಯಿಂದ ತಿಂಗಳಿಗೆ ಗಳಿಸಬಹುದು ಲಕ್ಷ ಲಕ್ಷ ಹಣ!
ವೇತನದಲ್ಲಿ 9000 ರೂ ಹೆಚ್ಚಳ :
ಉದ್ಯೋಗಿಯ ಮೂಲ ವೇತನವು 18000 ರೂ ಆಗಿದ್ದರೆ, 50% ಡಿಎಯ ಪ್ರಕಾರ 9000 ರೂ.ಗಳನ್ನು ಪಡೆಯುತ್ತಾರೆ. ಡಿಎ 50% ಆದ ನಂತರ, ಈ 9000 ರೂ.ಗಳನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ . ಮತ್ತೆ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.