IRCTC announces tour packages : ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಇದ್ದಾರೆಯೇ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇ ಬೇಕು. IRCTC ಇದೀಗ 12 ದಿನಗಳ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಅದ್ಭುತ ಪ್ರವಾಸ ಪ್ಯಾಕೇಜ್‌ ಅನ್ನು ಪರಿಚಯಿಸಿದೆ. ಆ ರೀತಿಯಲ್ಲಿ, ಭಾರತ್ ಗೌರವ್ ಟೂರಿಸ್ಟ್ ಟ್ರೈನ್ (EZBG11) ಮೂಲಕ ದಕ್ಷಿಣ ಭಾರತ ದರ್ಶನ್ ಎಂಬ ಈ ಪ್ರವಾಸದ ಪ್ಯಾಕೇಜ್‌ನ ಸಹಾಯದಿಂದ ದೇಶದ ಸುಂದರ  ತಾಣಗಳಿಗೆ ಭೇಟಿ ನೀಡುವ ಅವಕಾಶ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಎಷ್ಟು ದಿನ ಇರುತ್ತದೆ ಈ ಪ್ರವಾಸ ? : 
ಈ ಪ್ರವಾಸವು 12 ಹಗಲು ಮತ್ತು 11 ರಾತ್ರಿಗಳನ್ನು ಒಳಗೊಂಡಿರುತ್ತದೆ. ಪ್ರವಾಸದ ಪ್ಯಾಕೇಜ್ 25.10.2023 ರಿಂದ ಪ್ರಾರಂಭವಾಗಿ  05.11.2023 ರವರೆಗೆ ಇರುತ್ತದೆ. 


ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಯಾವ ಯಾವ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ ? : 
 ರೇಣುಗುಂಟ :  ತಿರುಪತಿ ಏಳು ಮಲಯನ್ ದೇವಸ್ಥಾನ
ಕುಡಾಲ್ ನಗರ: ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ
ರಾಮೇಶ್ವರಂ: ರಾಮನಾಥಸ್ವಾಮಿ ದೇವಸ್ಥಾನ 
ಕನ್ಯಾಕುಮಾರಿ : ಕನ್ಯಾಕುಮಾರಿ ಭಗವತಿ ಅಮ್ಮನ ದೇವಸ್ಥಾನ, ವಿವೇಕಾನಂದ ರಾಕ್
ತಿರುವನಂತಪುರ: ಶ್ರೀ ಪದ್ಮನಾಪಸ್ವಾಮಿ ದೇವಸ್ಥಾನ. 


ಇದನ್ನೂ ಓದಿ ಯಾವುದೇ ಹೂಡಿಕೆ ಇಲ್ಲದೆ ಸರ್ಕಾರ ನೀಡುತ್ತದೆ ಮಾಸಿಕ 3 ಸಾವಿರ ರೂ ಪಿಂಚಣಿ !


ಪ್ರವಾಸದ ಪ್ಯಾಕೇಜ್ ಶುಲ್ಕದ ವಿವರಗಳು:
ಈ ಪ್ರವಾಸದ ಪ್ಯಾಕೇಜ್‌ಗಾಗಿ, ಪ್ರಯಾಣಿಕರು ಎಕಾನಮಿ ಕ್ಲಾಸ್‌ಗೆ  21,300 ರೂಪಾಯಿ, ಸ್ಟ್ಯಾಂಡರ್ಡ್ ಕ್ಲಾಸ್‌ಗೆ  33,300 ರೂಪಾಯಿ, ಮತ್ತು ಕಂಫರ್ಟ್ ಕ್ಲಾಸ್‌ಗಾಗಿ 36,400 ರೂಪಾಯಿ ಪಾವತಿಸಬೇಕಾಗುತ್ತದೆ.


ಭಾರತ್ ಗೌರವ್ ರೈಲು ಯೋಜನೆಯಡಿಯಲ್ಲಿ ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ರೈಲ್ವೇಯು ಸರಿಸುಮಾರು 33% ರಿಯಾಯಿತಿಯನ್ನು ಒದಗಿಸುತ್ತದೆ. ಮೇಲಿನ ಬೆಲೆಯು ರಿಯಾಯಿತಿ ದರವನ್ನು ಒಳಗೊಂಡಿದೆ. 


ಈ ಪ್ಯಾಕೇಜ್‌ನಲ್ಲಿ  ಏನನ್ನು ನೀಡಲಾಗುತ್ತದೆ : 
ರೈಲು ಪ್ರಯಾಣ, ರಾತ್ರಿಯ ತಂಗುವಿಕೆ, ಸಾರಿಗೆಯನ್ನು ಒದಗಿಸಲಾಗುತ್ತದೆ:
*ಬೆಳಿಗ್ಗೆ ಚಹಾ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸಲಾಗುವುದು.
* ಪ್ರಯಾಣಿಕರಿಗೆ ಪ್ರಯಾಣ ವಿಮೆ.
* ನಿಮಗೆ ಸಹಾಯ ಮಾಡಲು ವೃತ್ತಿಪರ ಮತ್ತು ಸ್ನೇಹಪರ ಪ್ರವಾಸ ಗೈಡ್ ಗಳನ್ನೂ ಒದಗಿಸಲಾಗುತ್ತದೆ.
* ಪ್ರಯಾಣದ ಉದ್ದಕ್ಕೂ IRCTC ಟೂರ್ ಮ್ಯಾನೇಜರ್‌ಗಳಿಂದ ನಿರಂತರ ಬೆಂಬಲ ಮತ್ತು ಸಹಾಯ.


ಇದನ್ನೂ ಓದಿ : Great Business Ideas: ಶೂನ್ಯ ಬಂಡವಾಳದಿಂದ ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಗಳಿಸಿ


ಏನನ್ನು ಒದಗಿಸಲಾಗುವುದಿಲ್ಲ:
* ಕೊಠಡಿ ಸೇವೆಯ ವಿನಂತಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
*  ಸೈಟ್ ಸೀಯಿಂಗ್ ವೆಚ್ಚ, ಪ್ರವೇಶ ಶುಲ್ಕಗಳನ್ನು  ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ. 
* ದೇವಸ್ಥಾನದ ವಿಶೇಷ ದರ್ಶನ ಟಿಕೆಟ್‌ಗಳನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿಲ್ಲ.


ಪ್ರವಾಸ ಹೊರಡುವ ಎರಡು ದಿನಗಳ ಮೊದಲು ಆಸನ ವ್ಯವಸ್ಥೆಯನ್ನು  ಕಂಫರ್ಮ್ ಮಾಡಲಾಗುತ್ತದೆ.  ಲೋವರ್ ಬರ್ತ್ ನೀಡಲಾಗುತ್ತದೆ ಎನ್ನುವುದರ ಬಗ್ಗೆ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಒಬ್ಬರೇ ಈ ಟೂರ್ ನಲ್ಲಿ ಹೋಗುವುದಾದರೆ ಇತರ ಅತಿಥಿಗಳೊಂದಿಗೆ ಡಬಲ್ / ಟ್ರಿಪಲ್ ಹಂಚಿಕೆ ಆಧಾರದ ಮೇಲೆ ಕೊಠಡಿ ನಿಯೋಜನೆಯನ್ನು ಮಾಡಲಾಗುತ್ತದೆ. 
ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನೀವು IRCTC ಯ ಅಧಿಕೃತ ಸೈಟ್ ಮೂಲಕ ತಿಳಿದುಕೊಳ್ಳಬಹುದು.


ಇದನ್ನೂ ಓದಿ : ನಿರಂತರವಾಗಿ ಕುಸಿಯುತ್ತಲೇ ಇದೆ ಚಿನ್ನ ಬೆಳ್ಳಿ ಬೆಲೆ ! ಇಂದಿನ ಬೆಲೆ ತಿಳಿದುಕೊಳ್ಳಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.