ವೇತನ ಹೆಚ್ಚಳದ ಜೊತೆಗೆ ಖಾತೆಗೆ ಬೀಳುವುದು ಅರಿಯರ್ಸ್ ! ಸರ್ಕಾರಿ ಉದ್ಯೋಗಿಗಳ ವೇತನದಲ್ಲಿ ಬಂಪರ್ ಹೆಚ್ಚಳ

ಸರ್ಕಾರಿ  ನೌಕರರ ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಅನುಮೋದನೆ ನೀಡಲಿದೆ. ಸೆಪ್ಟೆಂಬರ್ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. 

Written by - Ranjitha R K | Last Updated : Sep 6, 2023, 01:14 PM IST
  • ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಕೊನೆಯಾಗಲಿದೆ.
  • ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಲಿದೆ.
  • ಉದ್ಯೋಗಿಗಳ ವೇತನದಲ್ಲಿ ಭಾರೀ ಏರಿಕೆಯಾಗಲಿದೆ.
ವೇತನ ಹೆಚ್ಚಳದ ಜೊತೆಗೆ ಖಾತೆಗೆ ಬೀಳುವುದು ಅರಿಯರ್ಸ್ ! ಸರ್ಕಾರಿ ಉದ್ಯೋಗಿಗಳ ವೇತನದಲ್ಲಿ ಬಂಪರ್ ಹೆಚ್ಚಳ  title=

 ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಕೊನೆಯಾಗಲಿದೆ.  ಕೇಂದ್ರ ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಲಿದೆ. ಈ ಮೂಲಕ ಉದ್ಯೋಗಿಗಳ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. ಈ ತಿಂಗಳಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ. ಒಟ್ಟಿನಲ್ಲಿ ಕೇಂದ್ರ ಉದ್ಯೋಗಿಗಳಿಗೆ ಈ ತಿಂಗಳು ಶುಭ ಸುದ್ದಿ ಸಿಗುವುದು ಖಚಿತ. ಸರ್ಕಾರಿ  ನೌಕರರ ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಅನುಮೋದನೆ ನೀಡಲಿದೆ. ಸೆಪ್ಟೆಂಬರ್ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. 

ನಾಲ್ಕು ಶೇಕಡಾ ಡಿಎ ಹೆಚ್ಚಳ : 
ಕೇಂದ್ರ ನೌಕರರ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯಲ್ಲಿ ಶೇಕಡ ಮೂರರಿಂದ ನಾಲ್ಕು ಪರ್ಸೆಂಟ್ ಹೆಚ್ಚಳವಾಗಲಿದೆ. ಜನವರಿ-ಜೂನ್ ಹಣದುಬ್ಬರ ಅಂಕಿಅಂಶಗಳ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ. ಆದರೆ, ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯ ಮುದ್ರೆ  ಬೀಳುವುದು ಬಾಕಿ ಇದೆ.  

ಇದನ್ನೂ ಓದಿ PPF-ಸುಕನ್ಯಾ ಸಮೃದ್ದಿ ನಿಯಮಗಳಲ್ಲಿ ಬದಲಾವಣೆ ! ತಿಳಿದುಕೊಳ್ಳದಿದ್ದಲ್ಲಿ ಇದೇ ತಿಂಗಳ ಅಂತ್ಯಕ್ಕೆ ನಿಷ್ಕ್ರಿಯವಾಗುವುದು ಖಾತೆ

ಡಿಎ ಹೆಚ್ಚಳ ಜುಲೈನಿಂದ ಜಾರಿಗೆ  : 
ಜನವರಿ 2023 ರಿಂದ ಜೂನ್ 2023 ರವರೆಗಿನ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ DAಯನ್ನು ನಿರ್ಧರಿಸಲಾಗುತ್ತದೆ. ಆದರೆ, ಈ ಬಗ್ಗೆ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ಸರಕಾರ ಈ ಘೋಷಣೆ ಮಾಡಿದ ನಂತರವಷ್ಟೇ ಡಿಎ ಏರಿಕೆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಈಗ ಕೇಂದ್ರ ನೌಕರರಿಗೆ ಪ್ರಸ್ತುತ ಶೇ 42ರಷ್ಟು  ತುಟ್ಟಿಭತ್ಯೆ  ನೀಡಲಾಗುತ್ತಿದೆ. ನಾಲ್ಕು ಪರ್ಸೆಂಟ್ ಹೆಚ್ಚಳ ಘೋಷಣೆಯ ನಂತರ ಇದು ಶೇ.46ಕ್ಕೆ ಏರಿಕೆಯಾಗಲಿದೆ. ಒಂದು ವೇಳೆ ತುಟ್ಟಿಭತ್ಯೆ ಶೇ. 3 ರಷ್ಟು ಹೆಚ್ಚಳವಾದರೆ 45 ಪ್ರತಿಶತಕ್ಕೆ ಏರುತ್ತದೆ. ಹೆಚ್ಚಳವಾದ ತುಟ್ಟಿಭತ್ಯೆ ಜುಲೈನಿಂದ ಜಾರಿಗೆ ಬರಲಿವೆ. 2 ತಿಂಗಳ ಡಿಎ ಅರಿಯರ್ ಮೊತ್ತವನ್ನು ಸೆಪ್ಟೆಂಬರ್‌ನಲ್ಲಿಯೇ ಖಾತೆಗೆ ಹಾಕುವುದಾಗಿ ಹೇಳಲಾಗುತ್ತಿದೆ.  

ವೇತನ ಎಷ್ಟು ಹೆಚ್ಚಾಗುತ್ತದೆ?
ಕನಿಷ್ಠ ಮೂಲ ವೇತನದಲ್ಲಿ ಹೆಚ್ಚಳ  (46% DA ಹೆಚ್ಚಳ)

ಕನಿಷ್ಠ ಮೂಲ ವೇತನದ ಲೆಕ್ಕಾಚಾರ (ರೂ. 18,000)
1. ಉದ್ಯೋಗಿಯ ಮೂಲ ವೇತನ - ರೂ 18,000
2.  ತುಟ್ಟಿಭತ್ಯೆ  (46%) - ರೂ.8280/ತಿಂಗಳು
3. ಹಿಂದಿನ ತುಟ್ಟಿಭತ್ಯೆ  (42%) - ರೂ.7560/ತಿಂಗಳು
4. ತುಟ್ಟಿಭತ್ಯೆಯಲ್ಲಿ ಹೆಚ್ಚಳ - 8280-7560 = ರೂ 720/ತಿಂಗಳು
5 .ವಾರ್ಷಿಕ ವೇತನ ಹೆಚ್ಚಳ - 720X12 = ರೂ 8640

ಇದನ್ನೂ ಓದಿ : ಸರ್ಕಾರದ ಈ ಯೋಜನೆಯಿಂದ ಕೋಟಿಗಳ ಒಡೆಯರಾಗುವರು ಮಹಿಳೆಯರು ! ಮಹಿಳೆಯರಿಗಾಗಿ ಜಾರಿಗೆ ಬಂದಿರುವ ಸ್ಕೀಮ್ ಇದು

ಗರಿಷ್ಠ ಮೂಲ ವೇತನದ ಲೆಕ್ಕಾಚಾರ (ರೂ. 56,900)
1. ಉದ್ಯೋಗಿಯ ಮೂಲ ವೇತನ - ರೂ 56,900
2. ಹೊಸ ತುಟ್ಟಿಭತ್ಯೆ (46%) - ರೂ 26,174/ತಿಂಗಳು
3. ಇದುವರೆಗೆ ತುಟ್ಟಿಭತ್ಯೆ  (42%) - ರೂ 23,898/ತಿಂಗಳು
4. ತುಟ್ಟಿಭತ್ಯೆಯಲ್ಲಿ ಹೆಚ್ಚಳ - 26,174=26,174-26,828-26 /ತಿಂಗಳು
5. ವಾರ್ಷಿಕ ವೇತನ ಹೆಚ್ಚಳ - 2276X12 = ರೂ 27312

ಅರಿಯರ್ಸ್ ಮೊತ್ತ : 
ತುಟ್ಟಿಭತ್ಯೆ ಹೆಚ್ಚಳವು ಜುಲೈ ತಿಂಗಳಿನಿಂದ ಅನ್ವಯವಾಗುವುದರಿಂದ ಜುಲೈ ಮತ್ತು ಆಗಸ್ಟ್ ತಿಂಗಳ ಬಾಕಿಯನ್ನು ನೌಕರರ ವೇತನದಲ್ಲಿ ಸೇರಿಸಲಾಗುತ್ತದೆ. ಹೆಚ್ಚಿದ ಭತ್ಯೆಯ ಅನ್ವಯ ನೌಕರರ ವೇತನದಲ್ಲಿ ಬಂಪರ್ ಏರಿಕೆಯಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Saving schemes

Trending News