ನವದೆಹಲಿ: SEBI Made DDP Mandatory For Top 1000 Listed Companies - ಒಂದು ವೇಳೆ ನೀವೂ ಕೂಡ ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡುವವರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಕಂಪನಿಗಳ ಕಾರ್ಯಾಚರಣೆ ಅಭ್ಯಾಸಗಳ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಮಾಹಿತಿಯನ್ನು ಬಹಿರಂಗಪಡಿಸುವ ಗುರಿಯನ್ನು ಹೊಂದಿರುವ ನಿಟ್ಟಿನಲ್ಲಿ ಕೆಲವು ಹೊಸ ನಿಯಮಗಳನ್ನು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ತಿಳಿಸಿದೆ. ಇವುಗಳ ಪ್ರಕಾರ ಪಟ್ಟಿ  ಮಾಡಲಾದ ಅಗ್ರ 1,000 ಕಂಪನಿಗಳು (Top Listed 1000 Companies) ತಮ್ಮ ಲಾಭಾಂಶ ವಿತರಣಾ ನೀತಿಯನ್ನು (Dividend Distribution Policy) ರೂಪಿಸಬೇಕು ಎಂದು ಹೇಳಲಾಗಿದೆ,  ಮೇ 5 ರಂದು ಸೆಬಿ ಹೊರಡಿಸಿರುವ ಅಧಿಸೂಚನೆಯಲ್ಲಿ, ಪ್ರಾಯೋಜಕತ್ವದ ಅನ್ವಯಿಸುವಿಕೆ, ಸಂವಿಧಾನ ಮತ್ತು ಅಪಾಯ ನಿರ್ವಹಣಾ ಸಮಿತಿಯ (RMC) ಪಾತ್ರವನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಷೇರುದಾರರಾಗಿ ಪ್ರವರ್ತಕನ ಮರು ವರ್ಗೀಕರಣಕ್ಕೆ ಹೊಸ ನೀತಿಯನ್ನು ರೂಪಿಸಿದೆ.


COMMERCIAL BREAK
SCROLL TO CONTINUE READING

ಸಭೆಗಳ ರಿಕಾರ್ಡಿಂಗ್ ಸೈಟ್ ಮೇಲೆ ಹಾಕುವುದು ಅನಿವಾರ್ಯ
ಇದಲ್ಲದೆ ವಿಶ್ಲೇಷಕರು ಹಾಗೂ ಹೂಡಿಕೆದಾರರ (Investor) ನಡುವೆ ನಡೆಸಲಾಗುವ ಸಭೆಗಳ ಆಡಿಯೋ ಹಾಗೂ ವಿಡಿಯೋ ರಿಕಾರ್ಡಿಂಗ್ ಅನ್ನು ಕಂಪನಿಯ ವೆಬ್ ಸೈಟ್ ಗೆ ಅಪ್ಲೋಡ್ ಮಾಡುವುದನ್ನು ಅನಿವಾರ್ಯಗೊಳಿಸಿದೆ.  ಮುಂದಿನ ವಹಿವಾಟಿನ ದಿನ ಅಥವಾ 24 ಗಂಟೆಗಳ ಒಳಗೆ ಈ ರಿಕಾರ್ಡಿಂಗ್ ಅನ್ನು ಷೇರು ಮಾರುಕಟ್ಟೆಗೂ ಕೂಡ ಸಲ್ಲಿಸಬೇಕು. ವೃತ್ತಿಪರ ಜವಾಬ್ದಾರಿ ಹಾಗೂ ನಿರಂತರತೆಯ ವರದಿಯ ಬಗೆಗಿನ ನಿಮಯವನ್ನು ಕೂಡ ಅಧಿಸೂಚನೆಯಲ್ಲಿ ತಿಳಿಸಿದೆ.


ಇದನ್ನೂ ಓದಿ- TVS XL100 Offer: ದಿನವೊಂದಕ್ಕೆ ಕೇವಲ 51 ರೂ. ಪಾವತಿಸಿ TVS ಕಂಪನಿಯ ಈ ದ್ವಿಚಕ್ರ ವಾಹನ ಮನೆಗೆ ತನ್ನಿ


ವಾಸ್ತವಿಕವಾಗಿ SEBI (Security And Exchange Board Of India) ಪಟ್ಟಿಮಾಡುವಿಕೆ ಹಾಗೂ ಬಹಿರಂಗಪಡಿಸುವಿಕೆಯ ತನ್ನ ಅಗತ್ಯ ನಿಯಮಗಳಲ್ಲಿ ತಿದ್ದುಪಡಿ ತಂದಿದೆ. ಈ ನೂತನ ನಿಯಮಗಳು ಮೇ 5 ರಿಂದ ಜಾರಿಗೆ ಬಂದಿವೆ. ಮಾರುಕಟ್ಟೆಯಲ್ಲಿ ಬಂಡವಾಳದ ದೃಷ್ಟಿಯಿಂದ ಪಟ್ಟಿಮಾಡಲಾದ ಆಗ್ರ 1000 ಕಂಪನಿಗಳಿಗೆ ಲಾಭಾಂಶ ವಿತರಣಾ ನೀತಿ ರೂಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು SEBI ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇದಕ್ಕೂ ಮೊದಲು ಕೇವಲ ಟಾಪ್ 500 ಕಂಪನಿಗಳಿಗೆ ಈ ನಿಯಮ ಅನ್ವಯಿಸುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ- SBI ಡೆಬಿಟ್ ಕಾರ್ಡ್ EMI ಸೌಲಭ್ಯದ ಬಗ್ಗೆ ತಿಳಿದಿದೆಯಾ? ಗ್ರಾಹಕರಿಗೆ ಸಿಗಲಿದೆ ಭಾರೀ ಲಾಭ


Risk Management Committee (RMC)ಯಲ್ಲಿ ಕನಿಷ್ಠ ಮೂವರು ಸದಸ್ಯರಿರಬೇಕು
ಇದಲ್ಲದೆ ಇತರ ಪಟ್ಟಿಮಾಡಲಾಗಿರುವ ಕಂಪನಿಗಳು ಸ್ವಯಂಪ್ರೇರಣೆಯ ಆಧಾರದ ಮೇಲೆ ತಮ್ಮ ಲಾಭಾಂಶ ವಿತರಣಾ ನೀತಿಯನ್ನು ಕಂಪನಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಬಹುದು ಅಥವಾ ಅದಕ್ಕಾಗಿ ವಾರ್ಷಿಕ ವರದಿಯಲ್ಲಿ ವೆಬ್ ಲಿಂಕ್ ನೀಡಬಹುದು ಎಂದು SEBI ಹೇಳಿದೆ. ಇದರ ಜೊತೆಗೆ ಅಪಾಯ ನಿರ್ವಹಣಾ ಸಮಿತಿ ರಚನೆಯ ಅವಶ್ಯಕತೆಯನ್ನು ಪ್ರಸ್ತುತ ಇರುವ 500 ಪಟ್ಟಿಮಾಡಲಾಗಿರುವ ಕಂಪನಿಗಳಿಂದ ಅಗ್ರ 1000 ಕಂಪನಿಗಳಿಗೆ ಅನಿವಾರ್ಯಗೊಳಿಸಿದೆ. ಈ RMCನಲ್ಲಿ ಕನಿಷ್ಠ ಅಂದರೆ ಮೂವರು ಸದಸ್ಯರಿರಬೇಕು ಮತ್ತು ಅವರಲ್ಲಿ ಒಬ್ಬರು ಸ್ವತಂತ್ರ ನಿರ್ದೇಶಕರಾಗಿರಬೇಕು. ಸಮೀತಿಯ ಬಹುತೇಕ ಸದಸ್ಯರು ಕಂಪನಿಯ ನಿರ್ದೇಶಕ ಮಂಡಳಿಯ ನಿರ್ದೇಶಕರಾಗಿರಬೇಕು ಎಂದು SEBI ಸೂಚಿಸಿದೆ. SEBIಯ ಈ ಅಧಿಸೂಚನೆಯಲ್ಲಿ ಇನ್ನೂ ಹಲವು ರೀತಿಯ ಬದಲಾವಣೆಗಳ ಉಲ್ಲೇಖ ಮಾಡಲಾಗಿದೆ.


ಇದನ್ನೂ ಓದಿ-SIP Plus Insurance: SIP ಮೂಲಕ ಹೂಡಿಕೆ ಮಾಡುವವರಿಗೆ ಸಿಗುತ್ತೆ 50 ಲಕ್ಷ ರೂ.ಗಳ ಉಚಿತ Life Insurance! ಹೇಗೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.