TVS XL100 Offer: ದಿನವೊಂದಕ್ಕೆ ಕೇವಲ 51 ರೂ. ಪಾವತಿಸಿ TVS ಕಂಪನಿಯ ಈ ದ್ವಿಚಕ್ರ ವಾಹನ ಮನೆಗೆ ತನ್ನಿ

TVS XL100  Offer - ಭಾರತೀಯ ಮಾರುಕಟ್ಟೆಯಲ್ಲಿ ಮೊಪೆಡ್ ವಿಭಾಗದಲ್ಲಿ TVS Motors ಏಕಾಧಿಪತ್ಯ ಹೊಂದಿದೆ. 

Written by - Nitin Tabib | Last Updated : May 11, 2021, 06:32 PM IST
  • ದ್ವಿಚಕ್ರ ವಾಹನಗಳ ಮೊಪೆಡ್ ವಿಭಾಗದಲ್ಲಿ ಟಿವಿಎಸ್ ಮೋಟರ್ಸ್ ಏಕಾಧಿಪತ್ಯ ಹೊಂದಿದೆ.
  • TVS XL100 ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನವಾಗಿದೆ.
  • ಈ ಮೊಪೆಡ್ ಅನ್ನು ನೀವು ದಿನವೊಂದಕ್ಕೆ ಕೇವಲ ರೂ 51 ಪಾವತಿಸಿ ಮನೆಗೆ ತರಬಹುದು.
TVS XL100 Offer: ದಿನವೊಂದಕ್ಕೆ ಕೇವಲ 51 ರೂ. ಪಾವತಿಸಿ TVS ಕಂಪನಿಯ ಈ ದ್ವಿಚಕ್ರ ವಾಹನ ಮನೆಗೆ ತನ್ನಿ title=
TVS XL100 Offer (Photo Courtesy: TVS Motors)

TVS XL100  Offer - ಭಾರತೀಯ ಮಾರುಕಟ್ಟೆಯಲ್ಲಿ ಮೊಪೆಡ್ ವಿಭಾಗದಲ್ಲಿ TVS Motors ಏಕಾಧಿಪತ್ಯ ಹೊಂದಿದೆ. ಕಂಪನಿಯ ಖ್ಯಾತ ಮೊಪೆಡ್ ಆಗಿರುವ TVS XL100 ಸುದೀರ್ಘ ಅವಧಿಯಿಂದ ಉತ್ತಮ ಪ್ರದರ್ಶನ ನೀಡುತ್ತಿದೆ. ಕಡಿಮೆ ಬೆಲೆ, ಉತ್ತಮ ಮೈಲೇಜ್ ಹಾಗೂ ವ್ಯವಸಾಯದಲ್ಲಿಯೂ ಕೂಡ ಬಳಕೆಯಾಗುವ ಕಾರಣ ಬಹುತೇಕ ಜನರು ಈ ಮೊಪೆಡ್ ಆಯ್ಕೆ ಮಾಡುತ್ತಾರೆ. ಮಾರಾಟದ ವಿಷಯದಲ್ಲಿ ಈ ಮೊಪೆಡ್ ಇತರ ಎಲ್ಲ ಮೊಪೆಡ್ ಗಳನ್ನು ಹಿಂದಿಕ್ಕಿ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ ಇನ್ನೊಂದೆಡೆ ಕಂಪನಿಯೂ ಕೂಡ ಈ ಮೊಪೆಡ್ ಖರೀದಿಗೆ ಅದ್ಭುತ ಕೊಡುಗೆಯೊಂದನ್ನು ನೀಡುತ್ತಿದೆ.

ಟಿವಿಎಸ್ ಮೋಟರ್ನ ಮಾರಾಟದ ಅಂಕಿಅಂಶಗಳನ್ನು ಗಮನಿಸಿದರೆ, ಕಂಪನಿಯು 2020-21ರ ಆರ್ಥಿಕ ವರ್ಷದಲ್ಲಿ ಈ ಮೊಪೆಡ್ನ ಒಟ್ಟು 6,17,247 ಯುನಿಟ್ಗಳನ್ನು ಮಾರಾಟ ಮಾಡಿದೆ. ಆದರೆ, 2019-20ರ ಹಣಕಾಸು ವರ್ಷದಲ್ಲಿ ಮಾರಾಟವಾದ 6,36,812 ಯುನಿಟ್‌ಗಳಿಗೆ ಇದನ್ನು ಹೋಲಿಸಿದರೆ ಈ ಮೊಪೆಡ್‌ನ ಮಾರಾಟವು ಶೇ.3 ರಷ್ಟು ಕುಸಿತ ಕಂಡಿದೆ.  ಇದು ಕಂಪನಿಯ ಬೆಸ್ಟ್ ಸೇಲ್ಲಿಂಗ್ ದ್ವಿಚಕ್ರ ವಾಹನವಾಗಿದೆ (Best Selling Two Wheeler). ಎರಡನೇ ಸ್ಥಾನದಲ್ಲಿ ಕಂಪನಿಯ ಜನಪ್ರೀಯ ವಾಹನಗಳಲ್ಲಿ ಒಂದಾದ ಟಿವಿಎಸ್ ಜುಪಿಟರ್ ಇದೆ.

ಹೇಗಿದೆ ಈ ಮೊಪೆಡ್ ?
TVS XL 100 (ಟಿವಿಎಸ್ ಎಕ್ಸ್‌ಎಲ್ 100) ಮೊಪೆಡ್ (TVS Moped) ವಿಭಾಗದಲ್ಲಿ ಇರುವ ಏಕೈಕ ಮಾದರಿ ಮತ್ತು ಮಾರುಕಟ್ಟೆಯಲ್ಲಿ ಇದಕ್ಕೆ ಯಾವುದೇ ನೇರ ಸ್ಪರ್ಧಿಗಳಿಲ್ಲ. ಕಂಪನಿಯು ಈ ಮೊಪೆಡ್‌ನಲ್ಲಿ 99.7 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಬಳಸಿದ್ದು, ಇದು 4.4 ಪಿಎಸ್ ಶಕ್ತಿ ಮತ್ತು 6.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇತ್ತೀಚೆಗೆ ಕಂಪನಿಯು ಈ ಮೊಪೆಡ್‌ನ ನವೀಕರಿಸಿದ ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದು ಹಿಂದಿನ ಮಾದರಿಗಿಂತ ಶೇ.15 ರಷ್ಟು  ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಮೊಪೆಡ್ ವಾಹನದ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಸೈಲೆಂಟ್ ಸ್ಟಾರ್ಟ್ ಮತ್ತು ಎಂಜಿನ್ ಕಿಲ್ನೊಂದಿಗೆ ಮೊಬೈಲ್ ಫೋನ್ಗಳನ್ನು ಚಾರ್ಜ್ ಮಾಡಲು ಇದು ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ. ಇದು ಒಂದೇ ಪಾಡ್ ಅನಲಾಗ್ ಉಪಕರಣ ಕ್ಲಸ್ಟರ್ ಅನ್ನು ಹೊಂದಿದೆ, ಇದರಲ್ಲಿ ಸ್ಪೀಡೋಮೀಟರ್ ಮತ್ತು ಓಡೋಮೀಟರ್ ಗಳು ಶಾಮೀಲಾಗಿವೆ. ಇದರಲ್ಲಿ ಫ್ಯೂಲ್ ಗೆಜ್ ಬದಲಾಗಿ ನಿಮಗೆ ರಿಸರ್ವ್ ಇಂಡಿಕೇಟರ್ ನೀಡಲಾಗಿದೆ.

ಇದನ್ನೂ ಓದಿ-Cheapest Top 3 e-Bikes: ಇಲ್ಲಿವೆ ದೇಶದ ಅತ್ಯಂತ ಅಗ್ಗದ ಬೆಲೆಯ Top 3 Electric Bikes, ಜಬರ್ದಸ್ತ್ ಡ್ರೈವಿಂಗ್ ರೇಂಜ್

ಈ ದ್ವಿಚಕ್ರವಾಹನದ ಮುಂಭಾಗದಲ್ಲಿ ಟಿಲಿಸ್ಕೊಪಿಕ್ ಫಾರ್ಕ್ ಹಾಗೂ ಹಿಂಭಾಗದಲ್ಲಿ ಶಾಕ್ ಅಬ್ಸರ್ವರ್ ಸಸ್ಪೆನ್ಶೇನ್ ನೀಡಲಾಗಿದೆ. ಎರಡೂ ಚಕ್ರಗಳಿಗೆ ಡ್ರಮ್ ಬ್ರೇಕ್ ನೀಡಲಾಗಿದೆ . 16 ಇಂಚಿನ ಚಕ್ರಗಳ ಜೊತೆಗೆ 4 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಈ ವಾಹನ ಹೊಂದಿದೆ. ಮೊಪೆಡ್ ಕಂಫರ್ಟ್, ಹೆವಿ ಡ್ಯೂಟಿ ಮತ್ತು ಐ-ಟಚ್‌ಸ್ಟಾರ್ಟ್‌ ಗಳಂತಹ ವಿವಿಧ ರೂಪಾಂತರಗಳಲ್ಲಿ ಈ ಮೊಪೆಡ್ ಮಾರುಕಟ್ಟೆಯಲ್ಲಿ ಲಭ್ಯವಿದೆ.  ಇದರ ಬೆಲೆ 41,015 ರೂ.ಗಳಿಂದ 50,126 ರೂ.ನ್ ರೇಂಜ್ ನಲ್ಲಿದೆ.

ಇದನ್ನೂ ಓದಿ- Cheapest 100CC Bikes In India: ಅಗ್ಗದ ಬೆಲೆಯಲ್ಲಿ ಸಿಗುವ ಐದು 100 ಸಿಸಿ ಬೈಕ್ ಗಳು. 49 ಸಾವಿರ ಆರಂಭಿಕ ಬೆಲೆ, ಮೈಲೇಜ್ ಕೂಡ ಉತ್ತಮ

ಕೊಡುಗೆ ಏನು? (TVS XL100 Offer)
ಕಂಪನಿಯ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಗ್ರಾಹಕರು ಈ ಮೊಪೆಡ್ ನ ಫೈನಾನ್ಸ್ ಮಾಡಿಸಲು ಕೇವಲ ರೂ.7,999 ರೂ.ಡೌನ್ ಪೇಮೆಂಟ್ ಮಾಡಬೇಕು. ಇನ್ನೊಂದೆಡೆ ಈ ಮೊಪೆಡ್ ಅನ್ನು ನೀವು ಕನಿಷ್ಠ EMI ಆಧಾರದ ಮೇಲೂ ಕೂಡ ಖರೀದಿಸಬಹುದು. ಇದಕ್ಕಾಗಿ ನೀವು ಪ್ರತಿ ತಿಂಗಳು ರೂ. 1555 ಪಾವತಿಸಬೇಕು. ಅಂದರೆ, ದಿನನಿತ್ಯದ ಲೆಕ್ಕಾಚಾರದಲ್ಲಿ ರೂ.51/ದಿನ ಆಗಿದೆ.

ಇದನ್ನೂ ಓದಿ-Bajaj Chetak Electric Scooter ಬುಕಿಂಗ್ ಆರಂಭ, ಹೊಸ ಅವತಾರದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News