ನವದೆಹಲಿ: Dearness Allowance-ನೂತನ ವರ್ಷದ ಆರಂಭದಲ್ಲಿಯೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಂತಸದ ಸುದ್ದಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. 2021 ರಲ್ಲಿ ಅವರ ತುಟ್ಟಿಭತ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಜನವರಿ 2021ರಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ.4 ರಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ. ಇದರಿಂದ ದೇಶದ ಸುಮಾರು ಒಂದೂವರೆ ಕೋಟಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ನೇರ ಲಾಭ ಸಿಗಲಿದೆ. ಈ ಲಾಭ ವಿಭಿನ್ನ ರಾಜ್ಯಗಳ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೂ ಸಹ ಲಭಿಸಲಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಕಾರ್ಮಿಕ ಸಚಿವಾಲಯದ ಪರವಾಗಿ ಲೇಬರ್ ಬ್ಯೂರೋ ಶಿಮ್ಲಾ ಪ್ರತಿತಿಂಗಳು ಸರಾಸರಿ ಹಣದುಬ್ಬರ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ, ಜನವರಿ ಹಾಗೂ ಜುಲೈನಲ್ಲಿ ನಿಗದಿಪಡಿಸಲಾಗುತ್ತದೆ. ಕಳೆದ 12 ತಿಂಗಳ ಗ್ರಾಹಕ ಸೂಚ್ಯಂಕದ ಆಧಾರದ ಮೇಲೆ ಈ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಇದನ್ನು ಕಳೆದ 12 ತಿಂಗಳ ಸರಾಸರಿ ಆಧರಿಸಿ ಲೆಕ್ಕಹಾಕಲಾಗುತ್ತದೆ.


ಇದನ್ನು ಓದಿ- 7th Pay Commission: ಹೊಸ ವರ್ಷದಲ್ಲಿ ಸರ್ಕಾರಿ ನೌಕರರ ವೇತನ ವೃದ್ಧಿ... ಎಷ್ಟು? ಇಲ್ಲಿದೆ ವಿವರ


ವರ್ಷ 2001ರ ಹೋಲಿಕೆಯಲ್ಲಿ ಡಿಸೆಂಬರ್ 2020 ರ ಗ್ರಾಹಕ ಸೂಚ್ಯಂಕದಲ್ಲಿ 8 ಅಂಕಗಳಷ್ಟು ಇಳಿಕೆಯಾದರೆ ಹಣದುಬ್ಬರ ಶೇ. 3ರಷ್ಟು ಹಾಗೂ ಸೂಚ್ಯಂಕದಲ್ಲಿ 24 ಅಂಕಗಳ ವ್ರುದ್ಧಿಯಾದರೆ ತುಟ್ಟಿಭತ್ಯೆ (DA) ಶೇ.5 ರಷ್ಟು ನೀಡಲಾಗುತ್ತದೆ. ಆದರೆ ಒಂದೇ ತಿಂಗಳಿನಲ್ಲಿ ಇಷ್ಟೊಂದು ಇಳಿಕೆ ಅಥವಾ ಏರಿಕೆ ಸಾಧ್ಯವಿಲ್ಲ. ಹೀಗಾಗಿ ತುಟ್ಟಿಭತ್ಯೆ ಶೇ.4 ರಷ್ಟು ನೀಡಲಾಗುವುದು.


ಇದನ್ನು ಓದಿ- 7th Pay Commission: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್


ಡಿಸೆಂಬರ್ 2020ರ ಸೂಚ್ಯಂಕಗಳು ಒಂದು ತಿಂಗಳ ಬಳಿಕ ಜಾರಿಯಾಗಲಿವೆ ಹಾಗೂ ಸೆಪ್ಟೆಂಬರ್ 2020 ರಿಂದ ಔದ್ಯೋಗಿಕ ಕಾರ್ಮಿಕರಿಗಾಗಿ 2016ರ ಹೊಸ ಆಧಾರ ವರ್ಷ ಜಾರಿಗೊಳಿಸಲಾಗುವುದು. ಹೊಸ ಆಧಾರದ ಪ್ರಕಾರ ಜಾರಿಗೊಳಿಸಲಾಗುವ ಸೂಚ್ಯಂಕದಲ್ಲಿ 2.88ರ ಗುಣಿತದಲ್ಲಿ ಹಳೆ ಸೂಚ್ಯಂಕದಲ್ಲಿ ಬದಲಾವಣೆ ಮಾಡಿ ತುಟ್ಟಿಭತ್ಯೆ ಲೆಕ್ಕಹಾಕಲಾಗುತ್ತದೆ. ಈ ತುಟ್ಟಿಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಸೇರಿದಂತೆ ಯುಪಿ  ಹಾಗೂ ವಿಭಿನ್ನ ರಾಜ್ಯಗಳ ನೌಕರರು ಹಾಗೂ ಪಿಂಚಣಿದಾರರಿಗೆ ನೇರ ಲಾಭ ಸಿಗಲಿದೆ.


ಇದನ್ನು ಓದಿ- 7th Pay Commission: ಸರ್ಕಾರಿ ನೌಕರರಿಗೆ ಸಿಗಲಿದೆ ಒಟ್ಟಿಗೆ 3 ಗಿಫ್ಟ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.