ನವದೆಹಲಿ: 7th Pay Commission ಹೊಸ ವರ್ಷವು ಕೇಂದ್ರ ಸರ್ಕಾರಿ ನೌಕರರಿಗೆ ಸಾಕಷ್ಟು ಆನಂದವನ್ನು ನೀಡಲಿದೆ. ಹೌದು, 2021 ರಲ್ಲಿ ಕೇಂದ್ರ ನೌಕರರು ಹೆಚ್ಚಿನ ಸಂಬಳ ಪಡೆಯಲಿದ್ದಾರೆ. ಕೋವಿಡ್ -19 ಕಾರಣ, ಕೇಂದ್ರ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ತುಟ್ಟಿಭತ್ಯೆಯನ್ನು ಈ ವರ್ಷ ನಿಷೇಧಿಸಲಾಗಿದೆ. ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 21 ದರದಲ್ಲಿ ತುಟ್ಟಿ ಭತ್ಯೆ ಸಿಗುತ್ತದೆ. ಆದರೆ ಪ್ರಸ್ತುತ ಇದು ಶೇ.17 ಮಾತ್ರ ಸಿಗುತ್ತಿದೆ.
ಜೂನ್ 2021ರವರೆಗೆ ಇರಲಿದೆ ಈ ವ್ಯವಸ್ಥೆ
ಕೇಂದ್ರ ಸರ್ಕಾರವು ಜೂನ್ 2021 ರವರೆಗೆ ಈ ವ್ಯವಸ್ಥೆಯನ್ನು ಮಾಡಿದೆ. ಕರೋನಾ ಬಿಕ್ಕಟ್ಟಿನ ಹಿನ್ನೆಲೆ ಆರ್ಥಿಕ ಚಟುವಟಿಕೆಗಳು ನಡೆಯದ ಕಾರಣ, ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು (Dearness Allowance) ನಿಲ್ಲಿಸಿದೆ ಎಂಬುದು ಗಮನಾರ್ಹ. ಪ್ರಸ್ತುತ, ಈ ಭತ್ಯೆಯನ್ನು ಶೇಕಡಾ 17 ದರದಲ್ಲಿ ನೀಡಲಾಗುತ್ತಿದೆ ಆದರೆ ಹೆಚ್ಚಳದ ನಂತರ ಅದನ್ನು ಪುನಃ ಶೇಕಡಾ 21 ದರದಲ್ಲಿ ನೀಡಲಾಗುವುದು ಎಂದು ಮೋದಿ ಸರ್ಕಾರ ಸ್ಪಷ್ಟಪಡಿಸಿದೆ.
50 ಲಕ್ಷಕ್ಕೂ ಹೆಚ್ಚು ನೌಕರರ ಮೇಲೆ ಪ್ರಭಾವ
2021 ರ ಜೂನ್ ನಂತರ ಸರ್ಕಾರವು ಡಿಎ ಮೇಲೆ ಪರಿಹಾರ ನೀಡಬಹುದು ಮತ್ತು ಇದು ಸಂಭವಿಸಿದಲ್ಲಿ, ವೇತನ ಮತ್ತು ಪಿಂಚಣಿ ಹೆಚ್ಚಾಗುತ್ತದೆ ಎಂದು ನೌಕರರು ಮತ್ತು ಪಿಂಚಣಿದಾರರು ನಿರೀಕ್ಷಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜನವರಿ 1 ಮತ್ತು ಜುಲೈ 1 ರಂದು ಡಿಎ ಹೆಚ್ಚಿಸುತ್ತದೆ. ಈ ವರ್ಷದ ಜನವರಿಯಲ್ಲಿ ಶೇ 4 ರಷ್ಟು ಹೆಚ್ಚಳ ಮಾದಲಾಗುತ್ತು. ಪ್ರಸ್ತುತ, ಇದು ನೇರವಾಗಿ 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 55 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರುತ್ತಿದೆ.
ಇದನ್ನು ಓದಿ-Coronavirus ಸಂಕಷ್ಟದ ನಡುವೆ ಸರ್ಕಾರಿ ನೌಕರರಿಗೊಂದು ಕಹಿ ಸುದ್ದಿ
ಮಾರ್ಚ್ ನಲ್ಲಿ ಶೇ.4 ರಷ್ಟು ಡಿಎ ಹೆಚ್ಚಳ
ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ಕ್ಯಾಬಿನೆಟ್ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಸಾಮಾನ್ಯವಾಗಿ, ಬೆಲೆ ಹೆಚ್ಚಳಕ್ಕೆ ಸರಿದೂಗಿಸಲು ಸರ್ಕಾರ ವರ್ಷಕ್ಕೆ ಎರಡು ಬಾರಿ ಡಿಎ ಪರಿಷ್ಕರಿಸುತ್ತದೆ.ಇದು ಸರ್ಕಾರದ ಖರ್ಚುಗಳನ್ನು ಕಡಿತಗೊಳಿಸುವ ಮತ್ತೊಂದು ಪ್ರಯತ್ನ. ಈ ಹಿಂದೆ ಸಚಿವರು, ಪ್ರಧಾನಿ, ಅಧ್ಯಕ್ಷರು ಮತ್ತು ಸಂಸತ್ ಸದಸ್ಯರ ವೇತನವನ್ನು 30% ಕಡಿತಗೊಳಿಸುವುದಾಗಿ ಘೋಷಿಸಲಾಗಿದೆ. COVID-19 ರ ವಿರುದ್ಧ ಹೋರಾಡಲು ಹೆಚ್ಚಿನ ಹಣವನ್ನು ಹಂಚಿಕೆ ಮಾಡಲು ಅವರ MPLAD ಯೋಜನೆಯನ್ನು ಸಹ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿ-7th pay commission: ಈಗ ಹೊಸ ಸೂತ್ರದಡಿ ಸರ್ಕಾರಿ ನೌಕರರ DA ಲೆಕ್ಕಾಚಾರ
ಹೊಸ ವರ್ಷದ ಉಡುಗೊರೆ ನೀಡಿದ ದೆಹಲಿ ಸರ್ಕಾರ
ರಾಷ್ಟ್ರ ರಾಜಧಾನಿ ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಈ ವರ್ಷದ ಕೊನೆಯಲ್ಲಿ ಕಾರ್ಮಿಕರಿಗೆ ಉಡುಗೊರೆಯೊಂದನ್ನು ನೀಡಿದೆ. ತನ್ನ ಕೌಶಲ್ಯರಹಿತ, ಅರೆ-ನುರಿತ, ನುರಿತ ಮತ್ತು ಇತರ ವರ್ಗದ ಕಾರ್ಮಿಕರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಮಾಹಿತಿಯನ್ನು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ವತಃ ನೀಡಿದ್ದಾರೆ.