Detel Easy Plus: DL ಅವಶ್ಯಕತೆ ಬೀಳದ ಅಗ್ಗದ ಬೆಲೆಯ Electric Moped ಲಾಂಚ್, ಬೆಲೆ ಎಷ್ಟು ಗೊತ್ತಾ?
Detel Easy Plus - ಇಂದು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle) ವಿಭಾಗದಲ್ಲಿ ಮತ್ತೊಂದು ಹೊಸ ಮಾದರಿಯನ್ನು ಪರಿಚಯಿಸಲಾಗಿದೆ. ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಡೆಟೆಲ್ (Detel) ಇಂದು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಂತ ಮಿತವ್ಯಯದ ಎಲೆಕ್ಟ್ರಿಕ್ ಮೊಪೆಡ್ ಅನ್ನು ಬಿಡುಗಡೆ ಮಾಡಿದೆ.
Detel Easy Plus - ಇಂದು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle) ವಿಭಾಗದಲ್ಲಿ ಮತ್ತೊಂದು ಹೊಸ ಮಾದರಿಯನ್ನು ಪರಿಚಯಿಸಲಾಗಿದೆ. ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ ಡೆಟೆಲ್ (Detel) ಇಂದು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಂತ ಮಿತವ್ಯಯದ ಎಲೆಕ್ಟ್ರಿಕ್ ಮೊಪೆಡ್ ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ ಲುಕ್ ಮತ್ತು ಶಕ್ತಿಯುತ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಮೊಪೆಡ್‌ನ (Electric Moped) ಬೆಲೆಯನ್ನು ಕೇವಲ 39,999 ರೂಗಳಿಗೆ ನಿಗದಿಪಡಿಸಲಾಗಿದೆ. ಈ ಬೆಲೆ GST ಅನ್ನು ಒಳಗೊಂಡಿಲ್ಲ.
ಮಾಹಿತಿಯ ಪ್ರಕಾರ, ಆಸಕ್ತಿ ಹೊಂದಿರುವ ಗ್ರಾಹಕರು ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಕೇವಲ 1,999 ರೂಗಳಿಗೆ (Token Amount) ಬುಕ್ ಮಾಡಬಹುದು. ಈ ವಾಹನವು ದೇಶಾದ್ಯಂತ ಮಾರಾಟಕ್ಕೆ ಲಭ್ಯವಿದೆ. ಈ ವಾಹನವನ್ನು ಬುಕ್ ಮಾಡಿದ ನಂತರ, ಬಾಕಿ ಮೊತ್ತವನ್ನು ಮುಂದಿನ 7 ದಿನಗಳಲ್ಲಿ ಜಮಾ ಮಾಡಬೇಕು. ಈ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಹೇಗಿದೆ ನೂತನ Detel Easy Plus ಇಲೆಕ್ಟ್ರಿಕ್ ಮೊಪೆಡ್?
ಈ ಎಲೆಕ್ಟ್ರಿಕ್ ಮೊಪೆಡ್ 170 ಎಂಎಂನ ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. 48V ಮತ್ತು 20Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಬ್ಯಾಟರಿಯನ್ನು ಸೀಟ್ ಕೆಳಗೆ ಅಳವಡಿಸಲಾಗಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ವಾಹನವು ಒಂದು ಚಾರ್ಜ್‌ನಲ್ಲಿ 60 ಕಿಮೀ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತದೆ.
ಭಾರ ಹೊತ್ತೊಯ್ಯುವ ವಿಷಯದಲ್ಲಿಯೂ ಕೂಡ ಈ ಎಲೆಕ್ಟ್ರಿಕ್ ಮೊಪೆಡ್ ತುಂಬಾ ವಿಶಿಷ್ಟವಾಗಿದೆ, ಕಂಪನಿ ನೀಡಿರುವ ಹೇಳಿಕೆಯ ಪ್ರಕಾರ ಈ ಮೊಪೆಡ್ 170 ಕಿಲೋ ಗ್ರಾಂವರೆಗೆ ಭಾರ ಹೊರಬಲ್ಲದು. ಇದರ ಟಾಪ್ ಸ್ಪೀಡ್ ಕೇವಲ 25 ಕೀಮೀ ಪ್ರತಿ ಗಂಟೆಯಾಗಿದೆ. ಹೀಗಾಗಿ ಇದನ್ನು ಡ್ರೈವ್ ಮಾಡಲು ನಿಮಗೆ ಡ್ರೈವಿಂಗ್ ಲೈಸನ್ಸ್ ಅಗತ್ಯ ಬೀಳುವುದಿಲ್ಲ ಅಥವಾ ವೆಹಿಕಲ್ ರಿಜಿಸ್ಟ್ರೇಷನ್ (DL And RC)ಅವಶ್ಯಕತೆ ಬೀಳುವುದಿಲ್ಲ.
ಇದನ್ನೂ ಓದಿ-ಇಲ್ಲಿ ಟ್ರಕ್ ಚಾಲಕರೂ ಪಡೆಯುತ್ತಾರೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ, 2 ದಿನ ರಜೆ ಮತ್ತು ಬೋನಸ್
ಗುರುಗ್ರಾಮ್ ಮೂಲದ ಇಲೆಕ್ಟ್ರಿಕ್ ವಾಹನ ನಿರ್ಮಾಪಕ ಕಂಪನಿ ದೇಶಾದ್ಯಂತ ತನ್ನ ನೆಟ್ವರ್ಕ್ ವಿಸ್ತರಣೆಯಲ್ಲಿ ತೊಡಗಿದೆ. ಪ್ರಸ್ತುತ ಕಂಪನಿ ದೆಹಲಿ, ಹರಿಯಾಣಾ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಲವು ಟಚ್ ಪಾಯಿಂಟ್ ಗಳನ್ನೂ ಹೊಂದಿದೆ. ಈ ಮೊಪೆಡ್ ಅನ್ನು ಎರಡು ಬಣ್ಣಗಳಲ್ಲಿ ಪ್ರಸ್ತುತ ಪಡಿಸಲಾಗಿದೆ. ಇದರಲ್ಲಿ ಸಿಲ್ವರ್ ಗ್ರೇ ಹಾಗೂ ಮೆಟಾಲಿಕ್ ರೆಡ್ ಶಾಮೀಲಾಗಿವೆ. ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ