Harley-Davidson Electric Bicycle: ಶೀಘ್ರದಲ್ಲಿಯೇ ಮಾರುಕಟ್ಟೆಗಿಳಿಯಲಿದೆ ಹಾರ್ಲೆ ಡೇವಿಡ್ ಸನ್ ಕಂಪನಿಯ ಈ e-Bicycle

Harley-Davidson Electric Bicycle: ಹಾರ್ಲೆ ಡೇವಿಡ್ಸನ್ ತನ್ನ ಮೊದಲ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಇಳಿಸುವ ನಿರೀಕ್ಷೆ ಇದೆ.

Written by - Nitin Tabib | Last Updated : Sep 20, 2021, 10:25 PM IST
  • ಶೀಘ್ರದಲ್ಲಿಯೇ Harley-Davidson Electric Bicycle ಮಾರುಕಟ್ಟೆಗೆ ಇಳಿಯಲಿದೆ.
  • ಈ ವರ್ಷಾಂತ್ಯದೊಳಗೆ ಈ ಇ-ಬೈಸಿಕಲ್ ಮಾರುಕಟ್ಟೆಗೆ ಬರಲಿದೆ.
  • ಇದರ ವೈಶಿಷ್ಟ್ಯ ಮಾರುಕಟ್ಟೆ ಬೆಲೆ ತಿಳಿಯಲು ವರದಿ ಓದಿ.
Harley-Davidson Electric Bicycle: ಶೀಘ್ರದಲ್ಲಿಯೇ ಮಾರುಕಟ್ಟೆಗಿಳಿಯಲಿದೆ ಹಾರ್ಲೆ ಡೇವಿಡ್ ಸನ್ ಕಂಪನಿಯ ಈ e-Bicycle title=
Harley-Davidson Electric Bicycle (File Photo)

Harley-Davidson Electric Bicycle: ಹಾರ್ಲೆ ಡೇವಿಡ್ಸನ್ ಕಳೆದ ವರ್ಷ ತನ್ನ ಮೊದಲ ಎಲೆಕ್ಟ್ರಿಕ್ ಸೈಕಲ್ ಸೀರಿಯಲ್ 1 ಅನ್ನು ಪರಿಚಯಿಸಿತ್ತು. ಇದು 1903 ರಲ್ಲಿ ಬಿಡುಗಡೆಯಾದ ಹಾರ್ಲೆ-ಡೇವಿಡ್‌ಸನ್‌ನ ಮೊದಲ ಮೋಟಾರ್‌ಸೈಕಲ್‌ನಿಂದ ಸ್ಫೂರ್ತಿ ಪಡೆದಿದೆ. ಕಂಪನಿಯು ತನ್ನ ಮಾರಾಟವನ್ನು ಈ ವರ್ಷದ ಅಂತ್ಯದ ವೇಳೆಗೆ ಆರಂಭಿಸಬಹುದು ಎಂದು ಹೇಳಿದೆ.

ಕಂಪನಿ ಕೇವಲ 650 ಯುನಿಟ್ ಸೈಕಲ್ ಗಳನ್ನು ಉತ್ಪಾದಿಸಲಿದೆ
ಹಾರ್ಲೆ-ಡೇವಿಡ್ಸನ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಸಿಕಲ್ (Harley-Davidson e Bicycle) ನ ಕೇವಲ 650 ಘಟಕಗಳನ್ನು ಮಾತ್ರ ಉತ್ಪಾದಿಸುವುದಾಗಿ ಹೇಳಿದೆ. ಅದರಲ್ಲಿ ಅರ್ಧದಷ್ಟು ಯುಎಸ್ ನಲ್ಲಿ ಖರೀದಿಗೆ ಲಭ್ಯವಿರಲಿವೆ ಎಂದು ಹೇಳಲಾಗಿದೆ. ಸುದ್ದಿ ಸಂಸ್ಥೆ IANS ನ ಸುದ್ದಿಯ ಪ್ರಕಾರ, ಗ್ರಾಹಕರು ಕಂಪನಿಯ ವೆಬ್‌ಸೈಟ್‌ನಲ್ಲಿ ಇದಕ್ಕಾಗಿ ಪೂರ್ವ-ಆದೇಶಿಸಬಹುದು. ಇದರ ವಿತರಣೆಗಳು ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

Serial 1 ಕುರಿತು ಹೇಳಿಕೆ ನೀಡಿರುವ ಕಂಪನಿಯ ಬ್ರಾಂಡ್ ನಿರ್ದೇಶಕ ಆರೋನ್ ಫ್ರ್ಯಾಂಕ್, ಸಿರಿಯಲ್ 1 ಹಾರ್ಲೆ ಡೇವಿಡ್ ಸನ್ ಮೊಬಿಲಿಟಿ ರೀವ್ಯಾಲ್ಯೂಯೆಶನ್ ನಲ್ಲಿ ಒಂದು ಮಹತ್ವದ ಪಾತ್ರ ನಿರ್ವಹಿಸಲಿದೆ. ಸಿರಿಯಲ್ 1 ವಿಶೇಷವಾಗಿಇಲೆಕ್ಟ್ರಿಕ್ ಸೈಕಲ್ ಗ್ರಾಹಕರ ಮೇಲೆ ತನ್ನ ಗಮನ ಕೆಂದ್ರೀಕರಿಸಲು ಹಾಗೂ ಒಂದು ಬಜೆಟ್ ರೈಡಿಂಗ್ ಎಕ್ಸ್ಪೀರಿಯನ್ಸ್ ಗಾಗಿ ಸಿದ್ಧಗೊಳಿಸಲಾಗುತ್ತಿದೆ.

ಹೇಗಿದೆ ಇದರ ಲುಕ್?
ಹಾರ್ಲೆ ಡೇವಿಡ್ ಸನ್ ಈ ಸೈಕಲ್ ಲುಕ್ ಕುರಿತು ಹೇಳುವುದಾದರೆ, ಈ ಇ-ಸೈಕಲ್  ಬಿಳಿ ಬಣ್ಣದ ಟೈಯರ್, ಲೆದರ್ ಸ್ಯಾಂಡಲ್, ಹ್ಯಾಂಡ್ ಗ್ರಿಪ್ ಹಾಗೂ ಒಂದು ತ್ರಿಕೋನಾಕಾರದ ಕೊನ್ ಫ್ರೇಮ್ ಹೊಂದಿದೆ . ಆದರೆ, ಇದುವರೆಗೆ ಈ ಸೈಕಲ್ ನ ಬೆಲೆಯನ್ನು ಘೋಶಿಸಲಾಗಿಲ್ಲ. 

ಇದನ್ನೂ ಓದಿ-Harley Davidson ಆಗಿ ಮಾರ್ಪಟ್ಟ Royal Enfield...! ಖರ್ಚಾಗಿದ್ದು ಎಷ್ಟು ಗೊತ್ತಾ?

2019 ರಲ್ಲಿ ಜಾಗತಿಕ ಇ-ಬೈಸಿಕಲ್ ಮಾರುಕಟ್ಟೆ $ 15 ಬಿಲಿಯನ್‌ಗಿಂತಲೂ ಹೆಚ್ಚು ಎಂದು ಹಾರ್ಲೆ-ಡೇವಿಡ್ಸನ್ ಹೇಳಿದೆ. ಇದರ ನಂತರ, ಒಂದು ಅಂದಾಜಿನ ಪ್ರಕಾರ, 2020 ರಿಂದ 2025 ರವರೆಗೆ, ಇದು ವಾರ್ಷಿಕವಾಗಿ ಶೇ.6 ​​ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ-Honda CB 350 RS ಬೈಕ್ ಬುಕಿಂಗ್ ಪ್ರಾರಂಭ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ

ಈ ಕಂಪನಿಗಳು ಕೂಡ ರೆಸ್ ನಲ್ಲಿವೆ
ಹಾರ್ಲೆ-ಡೇವಿಡ್ಸನ್ ಹೊರತುಪಡಿಸಿ, ಆಟೋ ಉದ್ಯಮದ ಇತರ ದಿಗ್ಗಜರು ಎಲೆಕ್ಟ್ರಿಕ್ ವಾಹನಗಳ (e-Vehicles) ರೇಸ್‌ನಲ್ಲಿದ್ದಾರೆ. BMW ಈಗಾಗಲೇ ಇದರಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಮೋಟಾರ್ ಸೈಕಲ್ ಗಳನ್ನು ತಯಾರಿಸುತ್ತಿದೆ. Audi ಎಲೆಕ್ಟ್ರಿಕ್ ಮೌಂಟೇನ್ ಬೈಕ್ ಗಳನ್ನು ತಯಾರಿಸುತ್ತಿದೆ.  Mercedes-Benz ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಮತ್ತೊಂದೆಡೆ, Ford ಇ-ಸ್ಕೂಟರ್ ಸ್ಟಾರ್ಟ್ಅಪ್ ಸ್ಪಿನ್ ಅನ್ನು ಸ್ವಾಧೀನಪಡಿಸಿಕೊಂಡಿದೆ  ಮತ್ತು Jeep ಇತ್ತೀಚೆಗೆ ಹೈ ಪವರ್ ಎಲೆಕ್ಟ್ರಿಕ್ ಮೌಂಟೇನ್ ಬೈಕ್ ಅನ್ನು ಪರಿಚಯಿಸಿದೆ.

ಇದನ್ನೂ ಓದಿ-ಮೊಬೈಲ್‌ನಿಂದ ಬೈಕ್‌ಗಳನ್ನು ಖರೀದಿಸಲು ಈ ಕಂಪನಿಯ ಹೊಸ ವೈಶಿಷ್ಟ್ಯವನ್ನು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News