ನವದೆಹಲಿ: ನೀವೂ ಕೂಡ ಧನತ್ರಯೋದಶಿಯ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಬಯಸುತ್ತಿದ್ದು ಮತ್ತು ಬಜೆಟ್ ಇಲ್ಲದಿದ್ದರೆ ಏನು ಮಾಡಬೇಕು? ಎಂದು ಯೋಚಿಸುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಈ ಸಂದರ್ಭದಲ್ಲಿ ನೀವು ಯಾವುದೇ ಚಿನ್ನದಂಗಡಿಗೆ ಹೋದರೆ 10-15 ಸಾವಿರ ರೂ.ಖರ್ಚಾಗುತ್ತದೆ. ಆದರೆ ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸಲು ಇಂದು ನಾವು ನಿಮಗೆ ಒಂದು ಸುಲಭವಾದ ಮಾರಗವನ್ನು ಹೇಳಿಕೊಡುತ್ತಿದ್ದೇವೆ. ಆನ್‌ಲೈನ್ ಶಾಪಿಂಗ್‌ನ ಈ ಯುಗದಲ್ಲಿ, ನೀವು ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಬಹುದು. ಇಲ್ಲಿ ನೀವು ಕೇವಲ 1 ರೂಪಾಯಿಯ ಬಜೆಟ್‌ನಲ್ಲಿಯೂ ಚಿನ್ನವನ್ನು ಖರೀದಿಸಬಹುದು ಎಂಬುದು ಗಮನಾರ್ಹ. ಬನ್ನಿ, ಪೇಟಿಎಂನಲ್ಲಿ ಚಿನ್ನವನ್ನು ಹೇಗೆ ಖರೀದಿಸಬೇಕು ತಿಳಿದುಕೊಳ್ಳೋಣ ಬನ್ನಿ, (Business News In Kannada)


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ, ದೀಪಾವಳಿಗೂ ಮುನ್ನ ಧನತ್ರಯೋದಶಿಯ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವ ವಾಡಿಕೆ ಇದೆ ಮತ್ತು ಅದನ್ನು ಮಂಗಳಕರ ಎಂದೂ ಕೂಡ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಚಿನ್ನದ ಮಾರಾಟವು ಹೆಚ್ಚಾಗುತ್ತದೆ. ಡಿಜಿಟಲ್ ಪಾವತಿ ಆಪ್ ಪೇಟಿಎಂ ನಿಮಗೆ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿದೆ. ಪೇಟಿಎಂ ಅಪ್ಲಿಕೇಶನ್‌ನಿಂದ ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಲು, ನೀವು ಮೊದಲು ಸರ್ಚ್ ಬಾರ್‌ಗೆ ಹೋಗಿ ಮತ್ತು ಅಲ್ಲಿ ಚಿನ್ನ ಎಂದು ಟೈಪ್ ಮಾಡಬೇಕು. ಅದರ ನಂತರ ಪೇಟಿಎಂ ಗೋಲ್ಡ್ ಆಯ್ಕೆಯು ನಿಮಗೆ ಕಾಣಿಸಲಿದೆ. ಅಲ್ಲಿ ನೀವು 5 ರೂಪಾಯಿಗೂ ಕೂಡ ಪರಿಶುದ್ಧ ಚಿನ್ನವನ್ನು ಖರೀದಿಸಬಹುದು.


ಇದನ್ನೂ ಓದಿ-Diwali 2023 ಗೂ ಮುನ್ನವೇ ಹೊಸ ಪ್ರಿಪೈಡ್ ಯೋಜನೆ ಬಿಡುಗಡೆಗೊಳಿಸಿದ ಜಿಯೋ, ಸಿಗಲಿದೆ 150 ಜಿಬಿಗೂ ಅಧಿಕ ಡೇಟಾ!


ನೀವು 5 ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿದರೆ, ನೀವು 5 ರೂಪಾಯಿ ಮತ್ತು 3 ಶೇಕಡಾ GST ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಸುದ್ದಿ ಬರೆಯುವ ತನಕ, ಪ್ರತಿ ಗ್ರಾಂ ಚಿನ್ನದ ಬೆಲೆ 6210.66 ರೂ., ಈ ಸಂದರ್ಭದಲ್ಲಿ ನೀವು 5 ರೂ.ಗೆ 0.0008 ಗ್ರಾಂ ಚಿನ್ನವನ್ನು ಪಡೆಯುವಿರಿ. ಇದಕ್ಕಾಗಿ ನೀವು ಒಟ್ಟು 5.16 ರೂ. ಪಾವತಿಸಬೇಕು. 


ಇದನ್ನೂ ಓದಿದೇಶಾದ್ಯಂತ 12ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಮುಂದಾದ ಕೇಂದ್ರ ಸರ್ಕಾರ!


ಆನ್ಲೈನ್ ನಲ್ಲಿ ಚಿನ್ನ ಖರೀದಿಸಿದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಡಲಾಗುತ್ತದೆ. ಇದರಿಂದಾಗಿ ನಿಮ್ಮ ಚಿನ್ನವು ಶೇ. 100 ರಷ್ಟು ಸುರಕ್ಷಿತವಾಗಿ ಉಳಿಯುತ್ತದೆ. ಇದಲ್ಲದೆ, ಚಿನ್ನವನ್ನು ಖರೀದಿಸಿದ ನಂತರ ಪೇಟಿಎಂ ಶೇಖರಣಾ ಶುಲ್ಕ ಅಥವಾ ವಿಮೆ ಮುಂತಾದ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಇದಲ್ಲದೆ, ಚಿನ್ನವನ್ನು ಖರೀದಿಸಿದ ನಂತರ ನೀವು ನಿಮ್ಮ ಮನೆಗೆ ಡೆಲಿವರಿ ಪಡೆಯಬಹುದು. ನೀವು Paytm ನಿಂದ ಚಿನ್ನವನ್ನು ಖರೀದಿಸಲು ಬಯಸಿದರೆ, ಮೊದಲನೆಯದಾಗಿ ನೀವು Paytm ನಲ್ಲಿ ನಿಮ್ಮ ಖಾತೆಯನ್ನು ಸುಲಭವಾಗಿ ರಚಿಸಬಹುದು ಮತ್ತು ಚಿನ್ನವನ್ನು ಖರೀದಿಸಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ