ನವದೆಹಲಿ : ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮಕ್ಕಾಗಿ ಡಿಜಿ ಲಾಕರ್ ವೇದಿಕೆಯನ್ನು ವಿದೇಶಾಂಗ ಸಚಿವಾಲಯ ಉದ್ಘಾಟಿಸಿದೆ. ಈ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ, ಪಾಸ್‌ಪೋರ್ಟ್ (Passport) ತಯಾರಕರು ಅರ್ಜಿಯ ಸಮಯದಲ್ಲಿ ಎಲ್ಲಾ ಮೂಲ ದಾಖಲೆಗಳನ್ನು ತೋರಿಸಬೇಕಾಗಿಲ್ಲ. ಬದಲಿಗೆ ಡಿಜಿ ಲಾಕರ್ ಕಾರ್ಯಕ್ರಮದ ಮೂಲಕ ಇಡೀ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಪಾಸ್‌ಪೋರ್ಟ್  ತಯಾರಕರ ಸಂಖ್ಯೆಯಲ್ಲಿ ಹೆಚ್ಚಳ :
ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮವು ದೇಶದಲ್ಲಿ ಪಾಸ್‌ಪೋರ್ಟ್  ಸೇವೆಗಳ ವಿಸ್ತರಣೆಯಲ್ಲಿ ಪ್ರಮುಖ ಬದಲಾವಣೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಳೀಧರನ್ ಹೇಳಿದ್ದಾರೆ. ಇದು ಪಾಸ್‌ಪೋರ್ಟ್ (Passport) ತಯಾರಕರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ. ವಿದೇಶಾಂಗ ಸಚಿವಾಲಯದ ಪ್ರಕಾರ, ಕಳೆದ 6 ವರ್ಷಗಳಲ್ಲಿ ಪಾಸ್‌ಪೋರ್ಟ್ ತಯಾರಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ತಿಂಗಳು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಿದೆ. 2017 ರಲ್ಲಿ ಮೊದಲ ಬಾರಿಗೆ ಒಂದು ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದರು.


ಇದನ್ನೂ ಓದಿ - ಸಖತ್ ಪವರ್ ಫುಲ್ ಈ ದೇಶದ ಪಾಸ್‌ಪೋರ್ಟ್


ಪಾಸ್‌ಪೋರ್ಟ್ ನಿಯಮಗಳ ಸರಳೀಕರಣ :
ನಾಗರಿಕರ ಅನುಕೂಲಕ್ಕಾಗಿ ವಿದೇಶಾಂಗ ಸಚಿವಾಲಯವು (Ministry of External Affairs) ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಒಂದೆಡೆ ಪಾಸ್‌ಪೋರ್ಟ್ ನಿಯಮಗಳನ್ನು ಬಹಳ ಸರಳೀಕರಿಸಲಾಗಿದೆ; ಮತ್ತೊಂದೆಡೆ, ಅವರ ಮನೆಯ ಸಮೀಪವೂ ಪಾಸ್‌ಪೋರ್ಟ್‌ಗಳನ್ನು ಹೊಂದಲು ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು (Passport Seva Kendras) ಪ್ರಾರಂಭಿಸಲಾಗಿದೆ. ಮಾಹಿತಿಯ ಪ್ರಕಾರ, 426 ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (ಪಿಒಪಿಎಸ್‌ಕೆ) ಕಾರ್ಯರೂಪಕ್ಕೆ ಬಂದಿದ್ದು, ಇನ್ನೂ ಹಲವು ಶೀಘ್ರದಲ್ಲೇ ಬರಲಿವೆ. 


ಪ್ರಸ್ತುತ, 366 ಪಾಸ್‌ಪೋರ್ಟ್‌ ಕಚೇರಿಗಳು ಮತ್ತು ಅಸ್ತಿತ್ವದಲ್ಲಿರುವ 93 ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳೊಂದಿಗೆ 426 ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳಿಂದ ಪಾಸ್‌ಪೋರ್ಟ್‌ಗಳನ್ನು ತಯಾರಿಸಲಾಗುತ್ತಿದೆ. ಈ ರೀತಿಯಾಗಿ, ದೇಶದಲ್ಲಿ ಒಟ್ಟು 555 ಸ್ಥಳಗಳಿಂದ ಪಾಸ್‌ಪೋರ್ಟ್‌ಗಳನ್ನು ತಯಾರಿಸಲಾಗುತ್ತಿದೆ.


ಇದನ್ನೂ ಓದಿ - ಕೇವಲ 10 ದಿನಗಳಲ್ಲಿ ಮನೆಯಲ್ಲಿಯೇ ಕುಳಿತು ನಿಮ್ಮ ಪಾಸ್‌ಪೋರ್ಟ್ ಪಡೆಯಿರಿ


ಇ-ಪಾಸ್‌ಪೋರ್ಟ್‌ನಲ್ಲೂ ಕೆಲಸ ನಡೆಯುತ್ತಿದೆ :
ಕರೋನಾ ಅವಧಿಯಲ್ಲಿ ನಾಗರಿಕರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ದೇಶದಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ತಯಾರಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಶೀಘ್ರದಲ್ಲೇ ಇ-ಪಾಸ್ಪೋರ್ಟ್ ಸೌಲಭ್ಯವನ್ನು ಪರಿಚಯಿಸಲಾಗುವುದು. ಇದಲ್ಲದೆ ಇ-ಪಾಸ್ಪೋರ್ಟ್ (e-passport) ಮೂಲಕ ಮಾಹಿತಿಯನ್ನು ಮತ್ತಷ್ಟು ರಕ್ಷಿಸಲಾಗುವುದು. ಡಿಜಿಟಲ್ ಇಂಡಿಯಾ (Digital India) ಮಿಷನ್ ಅಡಿಯಲ್ಲಿ, ಪ್ರತಿಯೊಂದು ಸೇವೆಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ, ಇದರಿಂದ ಜನರು ಮನೆಯಲ್ಲಿಯೇ ಇದ್ದು ಹಲವು ಅನುಕೂಲ ಪಡೆಯುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.