ಪಾಸ್ ಪೋರ್ಟ್ ಸೇವಾ ಆಪ್ ಬಿಡುಗಡೆ ಮಾಡಿದ ಸುಷ್ಮಾ ಸ್ವರಾಜ್

     

Last Updated : Jun 26, 2018, 02:03 PM IST
ಪಾಸ್ ಪೋರ್ಟ್ ಸೇವಾ ಆಪ್ ಬಿಡುಗಡೆ ಮಾಡಿದ ಸುಷ್ಮಾ ಸ್ವರಾಜ್  title=

ನವದೆಹಲಿ: ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಪಾಸ್ ಪೋರ್ಟ್ ಸೇವೆಯನ್ನು ಸುಲಭಗೊಳಿಸಲು ಪಾಸ್ ಪೋರ್ಟ್ ಸೇವಾ ಆಪ್ ನ್ನು ಬಿಡುಗಡೆಗೊಳಿಸಿದ್ದಾರೆ.
 
ಪಾಸ್ ಪೋರ್ಟ್ ಸೇವಾ ದಿನದ ಪ್ರಯುಕ್ತ ಪಾಸ್ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವಾಲಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್, ಸರ್ಕಾರದ ಎರಡು ಹೊಸ ಯೋಜನೆಗಳು - ಭಾರತದಲ್ಲಿ ಎಲ್ಲಿಂದಲಾದರೂ ಪಾಸ್ಪೋರ್ಟ್ ಅರ್ಜಿ ಮತ್ತು ಮೊಬೈಲ್ ಫೋನ್ಗಳಿಂದ ಪಾಸ್ಪೋರ್ಟ್ ಅರ್ಜಿ ನಮೂನೆಗಳನ್ನು ಭರ್ತಿ ಮಾಡಬಹುದು  ಎಂದು  ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಸುಷ್ಮಾ ಸ್ವರಾಜ್ ಅವರು "ಮೊದಲ ಎರಡು ಹಂತಗಳಲ್ಲಿ ನಾವು 251 ಪಾಸ್ಪೋರ್ಟ್ಸ್ ನೋಂದಣಿ ಕೇಂದ್ರಗಳನ್ನು ಘೋಷಿಸಿದ್ದೇವೆ, ಅದರಲ್ಲಿ 212 ಕೇಂದ್ರಗಳು ಈಗಾಗಲೇ ಸ್ಥಾಪನೆಯಾಗಿದ್ದು, ಮೂರನೆಯ ಹಂತದಲ್ಲಿ 38 ಹೆಚ್ಚುವರಿ ಕೇಂದ್ರಗಳನ್ನು ಘೋಷಿಸಲಾಗಿದ್ದು, ಇದರಲ್ಲಿ ಎರಡು ಕೇಂದ್ರಗಳು ಕಾರ್ಯಗತಗೊಂಡಿದೆ" ಎಂದು ಅವರು ಹೇಳಿದರು.

ಒಟ್ಟಾರೆಯಾಗಿ ಈಗಾಗಲೇ  260 ಕೆಲಸ ಪಾಸ್ಪೋರ್ಟ್ ಕೇಂದ್ರಗಳಿವೆ ಮುಂದಿನ ದಿನಗಳಲ್ಲಿ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ವಿಸ್ತರಿಸಲಾಗುವುದು ಎಂದು ಸ್ವರಾಜ್ ತಿಳಿಸಿದರು.

Trending News