Diwali 2022ರ ಬಳಿಕ ಎಸ್ಬಿಐ ಗ್ರಾಹಕರಿಗೆ ಬಂಬಾಟ್ ಅವಕಾಶ, ಪ್ರತಿ ತಿಂಗಳಿಗೆ ಬ್ಯಾಂಕ್ ಗ್ರಾಹಕರಿಗೆ ನೀಡಲಿದೆ ಹಣ
SBI Scheme: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಗಳಿಕೆಯ ಉತ್ತಮ ಅವಕಾಶವನ್ನು ನೀಡುತ್ತಿದೆ. ಇಂದು ನಾವು ನಿಮಗೆ ಅಂತಹ ಒಂದು ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ತನ್ಮೂಲಕ ಮೂಲಕ ನೀವು ಪ್ರತಿ ತಿಂಗಳು ಹಣ ಗಳಿಕೆ ಮಾಡಬಹುದು.
State Bank Of India: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಗಳಿಸುವ ಅವಕಾಶವನ್ನು ತಂದಿದೆ. ಇಂದು ನಾವು ನಿಮಗೆ ಅಂತಹ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ತನ್ಮೂಲಕ ನೀವು ಪ್ರತಿ ತಿಂಗಳು ಹಣ ಗಳಿಸುವಿರಿ. ಈ ಯೋಜನೆಯ ವಿಶೇಷತೆಯೆಂದರೆ ಇದರಲ್ಲಿ ನೀವು ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಬೇಕು ಮತ್ತು ನಂತರ ನೀವು ಪ್ರತಿ ತಿಂಗಳು ಆದಾಯವನ್ನು ಪಡೆಯಬಹುದು.
ಪ್ರತಿ ತಿಂಗಳು ಗಳಿಕೆ
SBI ಯ ಈ ಯೋಜನೆಯ ಹೆಸರು SBI ವರ್ಷಾಶನ ಯೋಜನೆ. ಈ ಬ್ಯಾಂಕಿನ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಪ್ರತಿ ತಿಂಗಳು 10000 ರೂ. ಗಳಿಕೆ ಮಾಡಬಹುದು. ಪ್ರತಿ ತಿಂಗಳು ನೀವು ಹೇಗೆ ಗಳಿಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕನಿಷ್ಠ ಠೇವಣಿ ಮಿತಿ ಎಷ್ಟು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ಈ ಯೋಜನೆಯಲ್ಲಿ 36, 60, 84 ಅಥವಾ 120 ತಿಂಗಳುಗಳವರೆಗೆ ಠೇವಣಿ ಇರಿಸಬಹುದು. ನೀವು SBI ಯ ಎಲ್ಲಾ ಶಾಖೆಗಳಿಂದ ಈ ಯೋಜನೆಗೆ ನಿಮ್ಮ ಹೆಸರನ್ನು ನೊಂದಾಯಿಸಬಹುದು. ಪ್ರಸ್ತುತ, ಗರಿಷ್ಠ ಠೇವಣಿ ಮೇಲೆ ಯಾವುದೇ ಮಿತಿಯಿಲ್ಲ. ಇದೇ ವೇಳೆ ಈ ಯೋಜನೆಯ ಕನಿಷ್ಠ ವರ್ಷಾಶನವು ತಿಂಗಳಿಗೆ 1000 ರೂ.ಆಗಿದೆ.
ಇದನ್ನೂ ಓದಿ-PM Kisan: ದೀಪಾವಳಿ ನಂತರ ರೈತರಿಗೆ ಸಿಹಿಸುದ್ದಿ! ನವೆಂಬರ್ 30ರೊಳಗೆ ಇಷ್ಟು ಹಣ ಖಾತೆಗೆ ಬರಲಿದೆ
ಈ ಖಾತೆಯನ್ನು ಯಾರು ತೆರೆಯಬಹುದು
ಇದರಲ್ಲಿ ಯುನಿವರ್ಸಲ್ ಪಾಸ್ ಬುಕ್ ಕೂಡ ಗ್ರಾಹಕರಿಗೆ ನೀಡಲಾಗುತ್ತಿದೆ. ಯಾವುದೇ ಭಾರತೀಯ ಪ್ರಜೆ ಈ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಈ ಖಾತೆಯಲ್ಲಿ ಸಿಂಗಲ್ ಅಥವಾ ಜಾಯಿಂಟ್ ಮೋಡ್ ಎರಡರಲ್ಲೂ ಖಾತೆ ತೆರೆಯಬಹುದು.
ಇದನ್ನೂ ಓದಿ-ಹಬ್ಬದ ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆ ! ದಾಖಲೆ ಮಟ್ಟದಲ್ಲಿ ಕುಸಿಯಿತು ಬಂಗಾರದ ಬೆಲೆ
10,000 ಗಳಿಸಲು ಎಷ್ಟು ಹೂಡಿಕೆ ಮಾಡಬೇಕು?
ಈ ಯೋಜನೆಯಲ್ಲಿ ಯಾರಾದರೂ ತಿಂಗಳಿಗೆ 10 ಸಾವಿರ ರೂಪಾಯಿ ಆದಾಯವನ್ನು ಬಯಸಿದರೆ, ಅವರು 5,07,964 ರೂಪಾಯಿಗಳನ್ನು ಠೇವಣಿ ಇರಿಸಬೇಕಾಗುತ್ತದೆ. ಈ ಅವಧಿಯಲ್ಲಿ, ಗ್ರಾಹಕರು ಠೇವಣಿ ಮೊತ್ತದ ಮೇಲೆ, ಶೇಕಡಾ 7 ರ ಬಡ್ಡಿದರವನ್ನು ಪಡೆಯುತ್ತಾರೆ, ಇದರಿಂದ ಹೂಡಿಕೆದಾರರು ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಗಳಿಸಬಹುದು ಗಳಿಸಬಹುದು (ಈ ಆದಾಯ ಬಡ್ಡಿ ಮತ್ತು ನಿಮ್ಮ ಒಟ್ಟು ಠೇವಣಿಯಿಂದ ಮಾಸಿಕ ಇಎಂಐ ಒಳಗೊಂಡಿರಲಿದೆ).
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.