ಹಬ್ಬದ ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆ ! ದಾಖಲೆ ಮಟ್ಟದಲ್ಲಿ ಕುಸಿಯಿತು ಬಂಗಾರದ ಬೆಲೆ

Gold Price : ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಪ್ರಕಾರ ಚಿನ್ನ ಮತ್ತು ಬೆಳ್ಳಿ ದರ ಅಗ್ಗವಾಗಿದೆ.

Written by - Ranjitha R K | Last Updated : Oct 25, 2022, 01:04 PM IST
  • ಚಿನ್ನದ ಬೆಲೆಯಲ್ಲಿ ಇಳಿಕೆ
  • ಬೆಳ್ಳಿ ಕೂಡಾ ಅಗ್ಗ
  • ಇಂದಿನ ದರ ಎಷ್ಟು ತಿಳಿಯಿರಿ
ಹಬ್ಬದ ವೇಳೆ  ಚಿನ್ನದ ಬೆಲೆಯಲ್ಲಿ ಇಳಿಕೆ ! ದಾಖಲೆ ಮಟ್ಟದಲ್ಲಿ  ಕುಸಿಯಿತು ಬಂಗಾರದ ಬೆಲೆ  title=
Gold price today (file photo)

Gold Price : ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಇಂಡು ಕೂಡಾ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ  ಇಳಿಕೆ ಕಂಡು ಬಂದಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ಪ್ರಕಾರ ಚಿನ್ನ ಮತ್ತು ಬೆಳ್ಳಿ ದರ ಅಗ್ಗವಾಗಿದೆ.

ಚಿನ್ನ ಮತ್ತು ಬೆಳ್ಳಿ ಎಷ್ಟು ಅಗ್ಗವಾಗಿದೆ?
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಶೇಕಡಾ 0.08 ರಷ್ಟು ಕುಸಿದು 10 ಗ್ರಾಂಗೆ 50,540 ರೂ. ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಕೂಡಾ ಶೇಕಡಾ 0.10 ರಷ್ಟು ಇಳಿಕೆ ಕಂಡು ಬಂದಿದೆ. ಈ ಇಳಿಕೆ ನಂತರ ಪ್ರತಿ 10 ಗ್ರಾಂ . ಬೆಳ್ಳಿ ಬೆಲೆ 57691 ರೂ.ಯಷ್ಟಾಗಿದೆ.   

ಇದನ್ನೂ ಓದಿ : ಕಾರು ಖರೀದಿ ವೇಳೆ ಮಾಡುವ ಈ ತಪ್ಪಿನಿಂದ ಜೇಬಿಗೆ ಬೀಳುವುದು ಕತ್ತರಿ

ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಿ :
ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ಚಿನ್ನವನ್ನೇ ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ಚಿನ್ನದ ಶುದ್ಧತೆಯನ್ನು ಪರೀಕ್ಷಿಸಬಹುದು. ಈ ಆಪ್ ಮೂಲಕ ದೂರು ಕೂಡಾ ಸಲ್ಲಿಸಬಹುದು. 

ದರಗಳನ್ನು ಪರಿಶೀಲಿಸಿ :
ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು  ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ  ಮಿಸ್ ಕಾಲ್ ನೀಡುತ್ತಿರೋ, ಅದೇ ಸಂಖ್ಯೆಗೆ ಸಂದೇಶ ಬರುತ್ತದೆ. 

ಇದನ್ನೂ ಓದಿ : Aadhaar Card Update: ಫ್ರೀ ರೇಷನ್ ಪಡೆಯುವವರಿಗೆ UIDAI ನೀಡಿದೆ ಗುಡ್ ನ್ಯೂಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

 

Trending News