Bankನ ಈ SMS ಅಪ್ಪಿ-ತಪ್ಪಿಯೂ ಕೂಡ IGNORE ಮಾಡ್ಬೇಡಿ, ಇಲ್ದಿದ್ರೆ ಬೀಳುತ್ತೆ 1000 ರೂ. ದಂಡ
Do Not Ignore This Bank SMS - ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೋಡಣೆ ಮಾಡಿದ್ದೀರಾ? ಇಲ್ಲ ಎಂದಾದರೆ ಇಂದೇ ಆ ಕೆಲಸ ಪೂರ್ಣಗೊಳಿಸಿ. ಈ ಕುರಿತಾದ ಗಡುವು ವಿಸ್ತರಣೆ ಇನ್ಮುಂದೆ ಸಾಧ್ಯವಿಲ್ಲ ಎನ್ನಲಾಗುತ್ತಿದ್ದು, ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಣೆಯಾಗದ ಸಂದರ್ಭದಲ್ಲಿ ನೀವು ಜುರ್ಮಾನೆ ಪಾವತಿಸಬೇಕಾಗಲಿದೆ.
ನವದೆಹಲಿ: Do Not Ignore This Bank SMS - ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೋಡಣೆ ಮಾಡಿದ್ದೀರಾ? ಇಲ್ಲ ಎಂದಾದರೆ ಇಂದೇ ಆ ಕೆಲಸ ಪೂರ್ಣಗೊಳಿಸಿ. ಈ ಕುರಿತಾದ ಗಡುವು (Deadline To Link PAN-Aadhaar Card) ವಿಸ್ತರಣೆ ಇನ್ಮುಂದೆ ಸಾಧ್ಯವಿಲ್ಲ ಎನ್ನಲಾಗುತ್ತಿದ್ದು, ಪ್ಯಾನ್ ಕಾರ್ಡ್ ಗೆ ಆಧಾರ್ ಜೋಡಣೆಯಾಗದ ಸಂದರ್ಭದಲ್ಲಿ ನೀವು ಜುರ್ಮಾನೆ ಪಾವತಿಸಬೇಕಾಗಲಿದೆ. ಇದೀಗ ಬ್ಯಾಂಕುಗಳು ಕೂಡ ಈ ಕುರಿತು ತಮ್ಮ ಗ್ರಾಹಕರಿಗೆ SMS ಹಾಗೂ ಮೇಲ್ ಗಳನ್ನು ಕಳುಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ನಿಮ್ಮ ಬ್ಯಾಂಕು ಕೂಡ ನಿಮಗೆ ಈ ರೀತಿಯ SMS ಅಥವಾ ಮೇಲ್ ಕಳುಹಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಇನ್ಮುಂದೆ ನಿಯಮ ಕಠಿಣವಾಗತೊಡಗಿದೆ. ಏಕೆಂದರೆ ಈ ಕೆಲಸ ನೀವು ಮಾಡದೆ ಹೋದಲ್ಲಿ ದಂಡಪಾವತಿಸಬೇಕಾಗಲಿದೆ.
[[{"fid":"207901","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೆಸ್ (CBDT) ಪ್ಯಾನ್(PAN Card)-ಆಧಾರ್ (Aadhaar Card) ಜೋಡಣೆಯ ಅಂತಿಮ ಗಡುವನ್ನು ಜೂನ್ 30, 2021 ರವರೆಗೆ ವಿಸ್ತರಿಸಿದೆ. ಆದರೆ, ತೆರಿಗೆ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, ಇಲಾಖೆಯವತಿಯಿಂದ ನೀಡಲಾಗುತ್ತಿರುವ ಅಂತಿಮ ಗಡುವು ಇದಾಗಿದ್ದು, ಪ್ಯಾನ್ ಕಾರ್ಡ್ ಗೆ ಯಾರು ತಮ್ಮ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡುವುದಿಲ್ಲವೋ ಅವರಿಗೆ ಭಾರಿ ದಂಡ ವಿಧಿಸುವ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ತೆರಿಗೆ ಪಾವತಿದಾರರಿಗೆ ಪದೇ ಪದೇ ಆಧಾರ್-ಪ್ಯಾನ್ ಜೋಡಣೆಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಇನ್ನೂ ಹಲವು ತೆರಿಗೆ ಪಾವತಿದಾರರು ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೂ.1000 ದಂಡ ಪಾವತಿಸಬೇಕಾಗಲಿದೆ
ಒಂದು ವೇಳೆ ತೆರಿಗೆ ಪಾವತಿದಾರರು ಜೂನ್ 30, 2021ರವರೆಗೆ ತಮ್ಮ ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಹೋದಲ್ಲಿ ಅವರಿಗೆ ರೂ.1000 ದಂಡ ವಿಧಿಸಲಾಗುವುದು ಎನ್ನಲಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಆದಾಯ ತೆರಿಗೆ ಕಾಯ್ದೆ 1961 ರಲ್ಲಿ ತಿದ್ದುಪಡಿಗಳನ್ನು ಮಾಡುವ ಮೂಲಕ ದಂಡದ ನಿಯಮ ರೂಪಿಸಿದೆ. ಪ್ಯಾನ್ ಹಾಗೂ ಆಧಾರ್ ಕಾರ್ಡ್ ಜೋಡಣೆ ಮಾಡದವರಿಗೆ ದಂಧ ವಿಧಿಸಲು ಸರ್ಕಾರ ಆದಾಯ ತೆರಿಗೆ ಕಾಯ್ದೆಯಲ್ಲಿ ಸೆಕ್ಷನ್ 234H ಜೋಡಿಸಿದೆ.
ಆಧಾರ್ ಕಾರ್ಡ್- ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? (How To Link PAN-Aadhaar Card)
ವಿಧಾನ 1 - ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ (Aadhaar Card) ಗೆ ಲಿಂಕ್ ಮಾಡಲು ನೀವು ಇ-ಮಿತ್ರ ಅಥವಾ ಯಾವುದಾದರೊಂದು ಅಂಗಡಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಈ ಕೆಲಸವನ್ನು ನೀವು ಮನೆಯಿಂದಲೇ ಮಾಡಬಹುದು. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಈ ಕೆಲಸವನ್ನು ಮಾಡಬಹುದು. ಇದಲ್ಲದೆ ಇಲಾಖೆ ಜಾರಿಗೊಳಿಸಿರುವ ಸಂಖ್ಯೆಗೆ SMS ಮಾಡುವ ಮೂಲಕ ಕೂಡ ನೀವು ಈ ಕೆಲಸ ಮಾಡಬಹುದು.
ಇದನ್ನೂ ಓದಿ-DDP Mandatory: ಹೂಡಿಕೆದಾರರಿಗೊಂದು ಸಂತಸದ ಸುದ್ದಿ, ತನ್ನ ಈ ನಿಯಮದಲ್ಲಿ ಬದಲಾವಣೆ ತಂದ SEBI
ವಿಧಾನ 2 - ಒಂದು ವೇಳೆ ನೀವು ನಿಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು SMS ಕಳುಹಿಸುವ ಮೂಲಕ ಲಿಂಕ್ ಮಾಡಲು ಬಯಸುತ್ತಿದ್ದರೆ, ಇದಕ್ಕಾಗಿ ನೀವು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ UIDPAN <12-digit Aadhaar> <10-digit PAN> ಟೈಪ್ ಮಾಡಿ 567678 ಅಥವಾ 561561 ಸಂಖ್ಯೆಗೆ ಸಂದೇಶ ಕಳುಹಿಸಿ. ಬಳಿಕ ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಆಧಾರ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರುವ ಸೂಚನೆ ನಿಮಗೆ ಸಿಗಲಿದೆ.
ಇದನ್ನೂ ಓದಿ- TVS XL100 Offer: ದಿನವೊಂದಕ್ಕೆ ಕೇವಲ 51 ರೂ. ಪಾವತಿಸಿ TVS ಕಂಪನಿಯ ಈ ದ್ವಿಚಕ್ರ ವಾಹನ ಮನೆಗೆ ತನ್ನಿ
ವಿಧಾನ 3 - (Process To Link PAN-Aadhaar Card)
>>ಇದಕ್ಕಾಗಿ ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://incometaxindiaefiling.gov.in ಭೇಟಿ ನೀಡಬೇಕು. ಇಲ್ಲಿ ನಿಮ್ಮ ಮುಂದೆ ಹೋಮ್ ಪೇಜ್ ತೆರೆದುಕೊಳ್ಳಲಿದೆ.
>>ಈ ಹೋಮ್ ಪೇಜ್ ನಲ್ಲಿ ನಿಮಗೆ Link Aadhaar ಆಯ್ಕೆ ಕಾಣಿಸಿಕೊಳ್ಳಲಿದೆ. ಆದರ ಮೇಲೆ ಕ್ಲಿಕ್ಕಿಸಿ.
>>ಇದಾದ ಬಳಿಕ ನಿಮಗೆ ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಇತರೆ ಆವಶ್ಯಕ ಮಾಹಿತಿ ನಮೂದಿಸುವ ವಿಕಲ್ಪ ಕಾಣಿಸಲಿದೆ.
>>ಸಂಪೂರ್ಣ ಮಾಹಿತಿ ತುಂಬಿದ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ. ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ.
>>ಈ ವಿಧಾನ ಪೂರ್ಣಗೊಳ್ಳುತ್ತಲೇ ನಿಮ್ಮ ಮುಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆದ ಸೂಚನೆ ಪ್ರಕಟವಾಗಲಿದೆ.
ಇದನ್ನೂ ಓದಿ- Aadhaar Card : 'ಆಧಾರ್ ಕಾರ್ಡ್'ನಲ್ಲಿ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು; ಹೇಗೆ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.