ಬೆಂಗಳೂರು : ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕ ಹತ್ತಿರವಾಗುತ್ತಿದೆ. ಏಪ್ರಿಲ್ ತಿಂಗಳಿನಿಂದ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ತೆರಿಗೆದಾರರು 2022-23  ವರ್ಷಕ್ಕೆ ತೆರಿಗೆ ಸಲ್ಲಿಸುವುದು ಸಾಧ್ಯವಾಗುತ್ತದೆ.  ಈ ಹಣಕಾಸು ವರ್ಷದಲ್ಲಿ ಮಾಡಿದ ಹೂಡಿಕೆಯ ಮೇಲೆ ವಿನಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. ಆದರೆ, ಮಾರ್ಚ್ ತಿಂಗಳಿನಲ್ಲಿಯೇ ಒಂದು ಪ್ರಮುಖ ವಿಷಯವನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಈ ತಿಂಗಳ ಅಂತ್ಯದೊಳಗೆ ಈ ಕೆಲಸವನ್ನು ಮಾಡಿ ಮುಗಿಸಿದರೆ ಆದಾಯ ತೆರಿಗೆಯನ್ನು ಸಲ್ಲಿಸುವಾಗ ಅದರ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುತ್ತದೆ.


COMMERCIAL BREAK
SCROLL TO CONTINUE READING

ಮಾರ್ಚ್ 31ರೊಳಗೆ ಮಾಡಿ ಮುಗಿಸಿ ಈ ಕೆಲಸ :


ಪ್ರಸಕ್ತ ಹಣಕಾಸು ವರ್ಷವು ಮಾರ್ಚ್ 31, 2023 ರಂದು  ಕೊನೆಯಾಗುತ್ತಿದೆ. ತೆರಿಗೆದಾರರು ಮುಂದಿನ ಹಣಕಾಸು ವರ್ಷಕ್ಕೆ ಹೂಡಿಕೆಗಳನ್ನು ಮಾಡುವ ಸಿದ್ದತೆಯಲ್ಲಿದ್ದಾರೆ. ಭವಿಷ್ಯದ ತೆರಿಗೆ ಯೋಜನೆ ಇಲ್ಲಿ ಬಹಳ ಮುಖ್ಯವಾಗಿದೆ.  ಈ ತಿಂಗಳ ಅಂತ್ಯಕ್ಕೂ ಮೊದಲು ಕೆಲವು ಸರಳ ಕಾರ್ಯವಿಧಾನಗಳನ್ನು ಪೂರೈಸಿಕೊಳ್ಳುವುದರಿಂದ ತೆರಿಗೆಯನ್ನು ಉಳಿಸುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : DA Arrears ನಿರೀಕ್ಷಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಭಾರೀ ಹೊಡೆತ: ಇನ್ಮುಂದೆ ಈ ಹಣ ಬರಲ್ವಂತೆ…!!


ತೆರಿಗೆ ವಿನಾಯಿತಿಗಳ ಲಾಭ ​ :
2022-23 ರ ಹಣಕಾಸು ವರ್ಷವು ಅಂತ್ಯಗೊಳ್ಳುತ್ತಿದ್ದಂತೆ, ತೆರಿಗೆದಾರರಿಗೆ ತೆರಿಗೆ ವಿನಾಯಿತಿಗಳ ಲಾಭ ಪಡೆಯುವ ಸಮಯ ಕೂಡಾ ಮೀರುತ್ತಿದೆ. ಹೂಡಿಕೆಯಂತಹ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಬಹಳಷ್ಟು ಹಣವನ್ನು ಉಳಿಸುವುದು ಸಾಧ್ಯವಾಗುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಇದರ ಲಾಭ ಪಡೆಯಬೇಕಾದರೆ  ಸಮಯಕ್ಕೆ ಮುನ್ನವೇ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅವಶ್ಯಕ. 


ಆದಾಯ ತೆರಿಗೆ ಉಳಿಸುವ ಸುಲಭ ಮಾರ್ಗ :
ಈ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬೇಕಾದರೆ ಮಾರ್ಚ್ 31, 2023 ರ ಮೊದಲು ಹೂಡಿಕೆ ಮಾಡಬೇಕು. ಆಗ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಹೂಡಿಕೆಯ ದಾಖಲೆಯನ್ನು ತೋರಿಸಬಹುದು. ಹೂಡಿಕೆಯ ಆಧಾರದ ಮೇಲೆ ತೆರಿಗೆಯನ್ನು ಉಳಿಸಬಹುದು. ಸರ್ಕಾರದ ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡುವುದರಿಂದ ಲಕ್ಷಾಂತರ ರೂಪಾಯಿಗಳನ್ನು ಉಳಿಸಬಹುದು.


ಇದನ್ನೂ ಓದಿ : ಪಡಿತರ ವಿತರಣೆಯ ನಿಯಮ ಬದಲಾಯಿಸಿದ ಸರ್ಕಾರ! ಪ್ರತಿ ತಿಂಗಳು ಉಚಿತವಾಗಿ ಸಿಗಲಿದೆ ವಿಶೇಷ ರೀತಿಯ ಅಕ್ಕಿ


ರಾಷ್ಟ್ರೀಯ ಪಿಂಚಣಿ ಯೋಜನೆ  :
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ತೆರಿಗೆ ಉಳಿಸಲು ಇರುವ ಮತ್ತೊಂದು ಉತ್ತಮ ಮಾರ್ಗವಾಗಿದೆ. ತೆರಿಗೆದಾರರು ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದ ಮಿತಿಯನ್ನು ಹೊರತು ಪಡಿಸಿ ಹೆಚ್ಚಿನ  50,000 ರೂ.ಗಳ  ವಿನಾಯಿತಿಯನ್ನು ಪಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಯ ಮೂಲಕ ಲಕ್ಷಾಂತರ ರೂಪಾಯಿ ತೆರಿಗೆ ಉಳಿಸುವುದು ಸಾಧ್ಯವಾಗುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.