ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ನಿಮಗಾಗಿ ಇಲ್ಲಿದೆ ಬಿಗ್ ಅಪ್‌ಡೇಟ್

ಪಿಪಿಎಫ್‌ ಒಂದು ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು ದೀರ್ಘಾವಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆ ಆಗಿದೆ. ಇಂತಹ ಪಿಪಿಎಫ್‌ ಯೋಜನೆಗೆ ಸಂಬಂಧಿಸಿದಂತ ಕೆಲವು ಮಹತ್ವದ ಮಾಹಿತಿಗಳು ಇಲ್ಲಿವೆ.

Written by - Yashaswini V | Last Updated : Mar 14, 2023, 01:04 PM IST
  • ದೀರ್ಘಾವಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಸಾರ್ವಜನಿಕ ಭವಿಷ್ಯ ನಿಧಿ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು
  • ಪಿಪಿಎಫ್‌ನಲ್ಲಿ ವಾರ್ಷಿಕವಾಗಿ 7.1 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ.
  • ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೊದಲು ಈ ಅಂಶಗಳ ಬಗ್ಗೆ ಗಮನಹರಿಸಿ
ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ? ನಿಮಗಾಗಿ ಇಲ್ಲಿದೆ ಬಿಗ್ ಅಪ್‌ಡೇಟ್ title=
PPF Latest Update

ಬೆಂಗಳೂರು: ನೀವು ವಿಶ್ವಾಸಾರ್ಹ ದೀರ್ಘಾವಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ  ಸಾರ್ವಜನಿಕ ಭವಿಷ್ಯ ನಿಧಿ-ಪಿಪಿಎಫ್ ಅತ್ಯುತ್ತಮ ಯೋಜನೆ ಆಗಿದೆ. ಒಂದೊಮ್ಮೆ ಈಗಾಗಲೇ ನೀವು ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ದರೆ ಅಥವಾ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ.

ಈ ಯೋಜನೆಯಲ್ಲಿ ವಾರ್ಷಿಕ ಎಷ್ಟು ಹೂಡಿಕೆ ಮಾಡಬಹುದು? 
ಸಾರ್ವಜನಿಕ ಭವಿಷ್ಯ ನಿಧಿ-ಪಿಪಿಎಫ್ ಯೋಜನೆಯಲ್ಲಿ ಜನರು ವಾರ್ಷಿಕವಾಗಿ ಮಿನಿಮಂ 500ರೂ.ಗಳಿಂದ ಗರಿಷ್ಠ 1,50,000ರೂ.ಗಳವರೆಗೆ ಹೂಡಿಕೆ ಮಾಡಬಹುದು. ಮಾತ್ರವಾಲ್ಲ್, ಈ ಹೂಡಿಕೆಯ ಮೇಲೆ ನೀವು ಫಾರ್ಮ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದಾಗಿದೆ. 

ಬಡ್ಡಿದರ ಎಷ್ಟಿದೆ?
ಪ್ರಸ್ತುತ ಕೇಂದ್ರ ಸರ್ಕಾರವು ಪಿಪಿಎಫ್‌ನಲ್ಲಿ ವಾರ್ಷಿಕವಾಗಿ 7.1 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತಿದೆ. 

ಇದನ್ನೂ ಓದಿ- 12,000 ದಷ್ಟು ಹೆಚ್ಚಾಗುವುದು ಸರ್ಕಾರಿ ನೌಕರರ ವೇತನ ! 24 ಗಂಟೆಯಲ್ಲಿ ನಿರ್ಧಾರ ಪ್ರಕಟ

ಮೆಚ್ಯೂರಿಟಿ ಅವಧಿ:
ಮೊದಲೇ ತಿಳಿಸಿದಂತೆ ಪಿಪಿಎಫ್ ದೀರ್ಘಾವಧಿ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಕನಿಷ್ಠ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅರ್ಥಾತ್ ನೀವು ಪಿಪಿಎಫ್‌ನಲ್ಲಿ ಒಮ್ಮೆ ಹೂಡಿಕೆ ಮಾಡಿದ ಮೇಲೆ ಆ ಹಣವು 15 ವರ್ಷಗಳ ವರೆಗೆ ಲಾಕ್ ಇನ್  ಆಗಿರಲಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. 

ಇದನ್ನೂ ಓದಿ- ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಪಡಿತರ ತೂಕದಲ್ಲಿನ ವಂಚನೆಗೆ ಕಡಿವಾಣ ಹಾಕಲು ಸರ್ಕಾರದ ನ್ಯೂ ಪ್ಲಾನ್

ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೊದಲು ಈ ಅಂಶಗಳ ಬಗ್ಗೆ ಗಮನಹರಿಸಿ:
>> ಪಿಪಿಎಫ್ ದೀರ್ಘಾವಧಿಯ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಆಯ್ಕೆಯೇ ಹೊರತು ಅಲ್ಪಾವಧಿ ಹೂಡಿಕೆಗೆ ಅಲ್ಲ. 
>> ಈ ಯೋಜನೆಯಲ್ಲಿ ಹಣ ಹೂಡುವ ಮುನ್ನ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಲು ಸಿದ್ಧರಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವೇ ನಿರ್ಧರಿಸಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News