ಟ್ರಾಫಿಕ್ ನಿಯಮಗಳು: ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮಗಳ ಬಗ್ಗೆ ತಿಳಿದಿರುವುದು ಪ್ರತಿಯೊಬ್ಬರಿಗೂ ಅತ್ಯಗತ್ಯ. ಸಾಮಾನ್ಯವಾಗಿ ವಾಹನ ಚಲಾಯಿಸುವಾಗ ಹಲವು ಕಾರಣಗಳಿಂದಾಗಿ ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ನಿಲ್ಲಿಸುತ್ತಾರೆ. ಇದಕ್ಕೆ ಸಂಚಾರ ನಿಯಮವನ್ನು ಅನುಸರಿಸದಿರುವುದು ಪ್ರಮುಖ ಕಾರಣವಾಗಿರುತ್ತದೆ. ಇದಲ್ಲದೆ, ಕೆಲವು ಬಾರಿ ವಾಹನ ಚಾಲಕರೊಂದಿಗೆ ಪೊಲೀಸರ ದುರ್ವರ್ತನೆಯ ಕೆಲವು ಪ್ರಕರಣಗಳೂ ಸಹ ಬೆಳಕಿಗೆ ಬಂದಿವೆ. ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ನಾವು ಸಂಚಾರ ನಿಯಮಗಳು ಮತ್ತು ನಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದು ಸಹ ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಸಂಚಾರ ನಿಯಮಗಳನ್ನು ಅನುಸರಿಸುತ್ತಿದ್ದರೆ ಮತ್ತು  ತಪ್ಪು ಮಾಡದಿದ್ದರೆ ನಾವು ಯಾವುದೇ ಕಾರಣಕ್ಕೂ ಭಯಪಡಬೇಕಾಗಿಲ್ಲ. ಅಂತಹ ಸಮಯದಲ್ಲಿ, ಚಾಲಕರಾದ ನಾವು ವಾಹನ ಚಾಲನೆ ಮಾಡುವ ವೇಳೆ ಕೆಲವು ದಾಖಲೆಗಳನ್ನು ಇಡುವುದು ಮತ್ತು ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 


ಇದನ್ನೂ ಓದಿ- ಸರ್ಕಾರದ ಹೊಸ ಪ್ಲಾನ್: ಪೆಟ್ರೋಲ್-ಡೀಸೆಲ್‌ನಿಂದ ಎಲ್‌ಪಿಜಿ ಸಿಲಿಂಡರ್‌ಗಳವರೆಗೆ ಎಲ್ಲವೂ ಅಗ್ಗ!


ಈ ಡಾಕ್ಯುಮೆಂಟ್‌ಗಳು ಸದಾ ನಿಮ್ಮೊಂದಿಗಿರಲಿ:-
ನೀವು ಚಾಲನೆ ಮಾಡುವಾಗ ಯಾವಾಗಲೂ ನಿಮ್ಮೊಂದಿಗೆ ಈ ದಾಖಲೆಗಳಿರಲಿ-
* ನೋಂದಣಿ ಪ್ರಮಾಣಪತ್ರ (RC)
* ಮಾಲಿನ್ಯ ನಿಯಂತ್ರಣ (PUC) 
* ವಿಮಾ ದಾಖಲೆ
* ಚಾಲನಾ ಪರವಾನಗಿ


ಇದನ್ನೂ ಓದಿ- Nitin Gadkari: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿತೀನ್ ಗಡ್ಕರಿ ಹೇಳಿದ್ದೇನು?


ನೀವು ಈ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ:
1. ಪೊಲೀಸ್ ಅಧಿಕಾರಿಯು ಯಾವಾಗಲೂ ತನ್ನ ಸಮವಸ್ತ್ರದಲ್ಲಿರಬೇಕು ಮತ್ತು ಅವರು ಸಮವಸ್ತ್ರದಲ್ಲಿಲ್ಲದಿದ್ದರೆ ನೀವು ಅವರ ಗುರುತಿನ ಚೀಟಿಯನ್ನು ಕೇಳಬಹುದು. ಅವರು ಗುರುತಿನ ಚೀಟಿಯನ್ನು ತೋರಿಸದಿದ್ದರೆ, ನಿಮ್ಮ ದಾಖಲೆಗಳನ್ನು ತೋರಿಸಲು ನೀವು ನಿರಾಕರಿಸಬಹುದು.
2. ನಿಮಗೆ ದಂಡ ವಿಧಿಸಿದರೆ, ಅದು ಅಧಿಕೃತ ರಸೀದಿ ಪುಸ್ತಕ ಅಥವಾ ಇ-ಚಲನ್ ಯಂತ್ರದಿಂದ ಬರಬೇಕು. ಅಂತಹ ಯಾವುದೇ ರಸೀದಿ ಇಲ್ಲದಿದ್ದರೆ, ನೀವು ಕೇವಲ ಲಂಚವನ್ನು ನೀಡುತ್ತೀರಿ.
3. ಸಂಚಾರ ಪೊಲೀಸರು ನಿಮ್ಮ ಯಾವುದೇ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದರೆ, ನಂತರ ರಶೀದಿಯನ್ನು ಕೇಳಿ.
4. ಪೊಲೀಸ್ ಅಧಿಕಾರಿ ನಿಮ್ಮ ಅನುಮತಿಯಿಲ್ಲದೆ ನಿಮ್ಮ ಕಾರಿನ ಕೀಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. 
5. ನೀವು ವಾಹನದೊಳಗೆ ಕುಳಿತಿದ್ದರೆ ಪೊಲೀಸರು ನಿಮ್ಮ ವಾಹನವನ್ನು ಎಳೆಯುವಂತಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.