Nitin Gadkari: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿತೀನ್ ಗಡ್ಕರಿ ಹೇಳಿದ್ದೇನು?

E-highways News: ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ, ವಿದ್ಯುತ್‌ ಮೇಲೆ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಬಯಸಿದೆ ಎಂದು ಪುನರುಚ್ಚರಿಸಿದ್ದಾರೆ.  

Written by - Nitin Tabib | Last Updated : Sep 12, 2022, 07:39 PM IST
  • ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಭಾರತಕ್ಕೆ ಶೀಘ್ರದಲ್ಲಿಯೇ ಇ-ಹೆದ್ದಾರಿ ಉಡುಗೊರೆಯಾಗಿ ಸಿಗಲಿದೆ.
  • ಮಾಲಿನ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಇದು ಒಂದು ಉದಾಹರಣೆ ಎಂದು ಸಾಬೀತಾಗಲಿದೆ.
  • ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಭಾರಿ ಸಂತಸದ ಸುದ್ದಿಯೊಂದು ಪ್ರಕಟಿಸಿದ್ದಾರೆ.
Nitin Gadkari: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿತೀನ್ ಗಡ್ಕರಿ ಹೇಳಿದ್ದೇನು? title=
E-highways News

Solar Powered E-highways: ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಭಾರತಕ್ಕೆ ಶೀಘ್ರದಲ್ಲಿಯೇ ಇ-ಹೆದ್ದಾರಿ ಉಡುಗೊರೆಯಾಗಿ  ಸಿಗಲಿದೆ. ಮಾಲಿನ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಇದು ಒಂದು ಉದಾಹರಣೆ ಎಂದು ಸಾಬೀತಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಭಾರಿ ಸಂತಸದ ಸುದ್ದಿಯೊಂದು ಪ್ರಕಟಿಸಿದ್ದಾರೆ. ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ, ಇದು ಹೆವಿ ಡ್ಯೂಟಿ ಟ್ರಕ್‌ಗಳು ಮತ್ತು ಬಸ್‌ಗಳಿಗೆ ಚಾರ್ಜಿಂಗ್ ಸೌಲಭ್ಯಗಳನ್ನು ಸಹ ಒದಗಿಸಲಿದೆ.

ನಿತಿನ್ ಗಡ್ಕರಿ ಮಹತ್ವದ ಘೋಷಣೆ
ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿರುವ ಗಡ್ಕರಿ, ವಿದ್ಯುತ್‌ ಮೇಲೆ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಬಯಸಿದೆ ಎಂದು ಪುನರುಚ್ಚರಿಸಿದ್ದಾರೆ. ವಿದ್ಯುತ್ ಚಲನಶೀಲತೆಗಾಗಿ ಸೌರ ಶಕ್ತಿ  ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್ ವ್ಯವಸ್ಥೆಯನ್ನು ಸರ್ಕಾರ ಬಲವಾಗಿ ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-LPG Cylinder Price: ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ, 300 ರೂ. ಅಗ್ಗದ ದರದಲ್ಲಿ ಸಿಗುತ್ತಿದೆ ಸಿಲಿಂಡರ್, ಈಗಲೇ ಬುಕ್ ಮಾಡಿ

ವಿದ್ಯುತ್ ಹೆದ್ದಾರಿ ಹೇಗೆ ಕೆಲಸ ಮಾಡುತ್ತದೆ?
"ನಾವು ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೇವೆ, ಇದು ಸೌರಶಕ್ತಿ ಚಾಲಿತವಾಗಿರುತ್ತದೆ ಮತ್ತು ಚಲಿಸುವಾಗ ಹೆವಿ ಡ್ಯೂಟಿ ಟ್ರಕ್‌ಗಳು ಮತ್ತು ಬಸ್‌ಗಳ ಚಾರ್ಜ್‌ಗೆ ಅನುಕೂಲವಾಗುತ್ತದೆ" ಎಂದು ಅವರು ಹೇಳಿದ್ದಾರೆ. ಎಲೆಕ್ಟ್ರಿಕ್ ಹೆದ್ದಾರಿಯು ಸಾಮಾನ್ಯವಾಗಿ ಅದರ ಮೇಲೆ ಪ್ರಯಾಣಿಸುವ ವಾಹನಗಳಿಗೆ ವಿದ್ಯುತ್ ಸರಬರಾಜು ಮಾಡುವ ರಸ್ತೆಯನ್ನು ಸೂಚಿಸುತ್ತದೆ, ಇದರಲ್ಲಿ ಓವರ್ಹೆಡ್ ವಿದ್ಯುತ್ ಲೈನ್ಗಳು ಕೂಡ ಶಾಮೀಲಾಗಿವೆ.

ಇದನ್ನೂ ಓದಿ-EPFO Update: ಬಿಗ್ ಅಪ್ಡೇಟ್- ಇನ್ಮುಂದೆ ಈ ಜನರಿಗೂ ಕೂಡ ಸಿಗಲಿದೆ ಪೆನ್ಷನ್ ಲಾಭ!

26 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಲಿದೆ
ಟೋಲ್ ಪ್ಲಾಜಾಗಳನ್ನು ಸೌರಶಕ್ತಿಯಿಂದ ಕಾರ್ಯನಿರ್ವಹಿಸಲು ಸರ್ಕಾರವೂ ಪ್ರೋತ್ಸಾಹಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ರಸ್ತೆ ಸಚಿವಾಲಯವು ಪ್ರಮುಖ ಕಾರಿಡಾರ್‌ಗಳಲ್ಲಿ ಮಾರ್ಗ ಆಪ್ಟಿಮೈಸೇಶನ್ ಎಕ್ಸರ್ಸೈಜ್ ನಡೆಸಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯವು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಹೊಸ ವ್ಯವಹಾರಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಒತ್ತಿ ಹೇಳಿರುವ ಗಡ್ಕರಿ, "ನಾವು 26 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದ್ದೇವೆ" ಎಂದಿದ್ದಾರೆ. ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸುವುದರೊಂದಿಗೆ, ಯೋಜನೆಗಳು ವೇಗವಾಗಿ ಅನುಮೋದನೆಗಳನ್ನು ಪಡೆಯುತ್ತವೆ ಮತ್ತು ಇದು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News