ನವದೆಹಲಿ: ಬುಧವಾರ ಮಧ್ಯಾಹ್ನದ ಹೊತ್ತಿಗೆ, ಫೋರ್ಬ್ಸ್‌ನ ನೈಜ-ಸಮಯದ ಟ್ರ್ಯಾಕರ್ ಪ್ರಕಾರ ಅದಾನಿ ಅವರ ನಿವ್ವಳ ಮೌಲ್ಯವು ಮತ್ತೊಂದು $ 13 ಶತಕೋಟಿಗಳಷ್ಟು ಕುಗ್ಗಿದೆ. ಇದರಿಂದಾಗಿ ಒಂದು ಸಮಯದಲ್ಲಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಈಗ ಎಂಟನೇ ಸ್ಥಾನದಿಂದ ದಿನವನ್ನು ಪ್ರಾರಂಭಿಸಿದ ನಂತರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 15 ನೇ ಸ್ಥಾನಕ್ಕೆ ಕುಸಿದಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಮಧ್ಯಪ್ರಾಚ್ಯ ಸಾಂಸ್ಥಿಕ ಹೂಡಿಕೆದಾರರ ನೆರವಿಗೆ ಬಂದಿದ್ದರೂ ಕೂಡ ಸಹ-ಅದಾನಿ ಸಮೂಹದ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಬುಧವಾರದಂದು 28.2% ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.ಈಗಾಗಲೇ ಸಂಘಟಿತ ಕಂಪನಿಯ ಇತರ ಆರು ಪ್ರಮುಖ ಪಟ್ಟಿ ಮಾಡಲಾದ ಸಂಸ್ಥೆಗಳಾದ ಅದಾನಿ ಪೋರ್ಟ್ಸ್, ಅದಾನಿ ವಿಲ್ಮಾರ್, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟೋಟಲ್ ಗ್ಯಾಸ್ ಕೂಡ ಈಗ ತೀವ್ರ ಸಂಕಷ್ಟದಲ್ಲಿವೆ.


ಇದನ್ನೂ ಓದಿ : Vastu Tips: ಸಂಜೆ ವೇಳೆ ಮನೆಯಲ್ಲಿ ಈ ಶಬ್ದ ಕೇಳಿದರೆ ದಿನಬೆಳಗಾಗುವಷ್ಟರಲ್ಲಿ ಅದೃಷ್ಟ ಬದಲಾಗುವುದು ಖಂಡಿತ


ಫೋರ್ಬ್ಸ್ ಮೌಲ್ಯಮಾಪನ


ಈ ವರದಿ ಪ್ರಕಟಣೆಯ ಸಮಯದಲ್ಲಿ, ಫೋರ್ಬ್ಸ್ ಅದಾನಿಯವರ ನಿವ್ವಳ ಮೌಲ್ಯವು $75.1 ಬಿಲಿಯನ್ ಎಂದು ಅಂದಾಜಿಸಿದೆ, ಬುಧವಾರ $13 ಶತಕೋಟಿ ಕಡಿಮೆಯಾಗಿದೆ. ಕಳೆದ ವಾರ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ಆರೋಪಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದಾಗಿನಿಂದ, ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಕೆಳಗಿಳಿದಿದ್ದಾರೆ ಮತ್ತು ಅವರ ಸಂಪತ್ತು $ 50 ಶತಕೋಟಿಗಿಂತ ಹೆಚ್ಚು ಕುಸಿತ ಕಂಡಿದೆ.


ಭಾರತದಲ್ಲಿ ಅಂಬಾನಿ ಮತ್ತು ಅದಾನಿ ಇಬ್ಬರೂ ವಿವಿಧ ಆಸಕ್ತಿಗಳೊಂದಿಗೆ ಬೃಹತ್ ಸಂಘಟಿತ ಸಂಸ್ಥೆಗಳ ಚುಕ್ಕಾಣಿ ಹಿಡಿದಿದ್ದರೂ ಸಹ ಹಲವಾರು ವರ್ಷಗಳ ಕಾಲ ನೇರ ಘರ್ಷಣೆಯನ್ನು ತಪ್ಪಿಸಿದ್ದಾರೆ. ಅದರಲ್ಲಿ ಅಂಬಾನಿಯವರ ರಿಲಯನ್ಸ್ ಕಂಪನಿಯು ಟೆಲಿಕಾಂ, ಮಾಧ್ಯಮ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಬೃಹದಾಕಾರವಾಗಿ ಆಗಿ ಬೆಳೆದಿದೆ, ಅದಾನಿ ಗ್ರೂಪ್ಸ್ ಹೆಚ್ಚಾಗಿ ಮೂಲಸೌಕರ್ಯ, ಸಾರಿಗೆ ಮತ್ತು ಇಂಧನ ವಿತರಣೆಯ ಮೇಲೆ ಕೇಂದ್ರೀಕರಿಸಿದೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ಇಬ್ಬರೂ ಹಸಿರು ಶಕ್ತಿಯ ಕಡೆಗೆ ತಿರುಗಲು ಪ್ರಯತ್ನಿಸಿದ್ದಾರೆ, ಇದರಿಂದಾಗಿ ಈಗ ಇಬ್ಬರ ನಡುವೆ ಸ್ಪರ್ಧೆಯು ಅನಿವಾರ್ಯವಾಗಿದೆ.


ಇದನ್ನೂ ಓದಿ : Moles On Body : ದೇಹದ ಈ ಭಾಗದ ಮೇಲೆ ಮಚ್ಚೆ ಇದ್ರೆ ಶ್ರೀಮಂತ ಗಂಡ ಸಿಗುತ್ತಾನೆ.!


ಕಳೆದ ವಾರ, ಹಿಂಡೆನ್‌ಬರ್ಗ್ ಅದಾನಿ ಗ್ರೂಪ್‌ನ ಲಿಸ್ಟೆಡ್ ಕಂಪನಿಗಳ ವಿರುದ್ಧ ವರದಿಯನ್ನು ಪ್ರಕಟಿಸಿ ದಶಕಗಳ ಅವಧಿಯಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿತು.ಆದರೆ ಅದಾನಿ ಗ್ರೂಪ್ ಆರೋಪಗಳನ್ನು ಕಟುವಾಗಿ ನಿರಾಕರಿಸಿದೆ, ಅಲ್ಲದೆ ಈ ವರದಿ ದುರುದ್ದೇಶದಿಂದ ಕೂಡಿದ್ದು,ಈ ಕುರಿತಾಗಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅದು ಎಚ್ಚರಿಕೆ ನೀಡಿದೆ. ಅದಾನಿ ಗ್ರೂಪ್ ಮೇಲೆ ಮಾಡಿರುವ ಆರೋಪವು ಭಾರತದ ಮೇಲಿನ ಲೆಕ್ಕಾಚಾರದ ದಾಳಿ ಎಂದು ಅದು ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.