Liquor Sale Contributes To State Government Revenue: ಅತಿಯಾದ ಮದ್ಯ ಸೇವನೆಯು ದೇಹಕ್ಕೆ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಆದರೂ ಜನರು ಮದ್ಯಪಾನ ಮಾಡುವುದನ್ನು ಬಿಡದಿರುವುದೇ, ರಾಜ್ಯ ಸರ್ಕಾರದ ಆದಾಯದ ಬಹುಪಾಲು ಮದ್ಯ ಮಾರಾಟದಿಂದಲೇ ಬರುತ್ತಿದೆನ್ನುವುದಕ್ಕೇ ಇದೇ ಸಾಕ್ಷಿಯಾಗಿದೆ. ಪ್ರತಿ ರಾಜ್ಯವು ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ತನ್ನದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿದೆ. ಕೆಲವು ರಾಜ್ಯಗಳು ಮದ್ಯ ಮಾರಾಟವನ್ನು ನಿಷೇಧಿಸಿದರೆ, ಇನ್ನೂ ಇತರ ರಾಜ್ಯಗಳು ಮದ್ಯ ಆಧಾರಿತ ಆದಾಯವನ್ನು ಹೆಚ್ಚಿಸಲು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಏಕೆಂದರೆ ರಾಜ್ಯ ಸರ್ಕಾರಗಳು ಮದ್ಯದ ಮೇಲಿನ ಅಬಕಾರಿ ಸುಂಕದಿಂದ ಭಾರಿ ಆದಾಯವನ್ನು ಪಡೆಯುತ್ತವೆ. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ, ರಾಜ್ಯಗಳ ಆದಾಯದ ಮುಖ್ಯ ಮೂಲಗಳಲ್ಲಿ ರಾಜ್ಯ ಜಿಎಸ್‌ಟಿ, ಭೂಕಂದಾಯ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗಳು ಮತ್ತು ಇತರ ತೆರಿಗೆಗಳು ಸೇರಿವೆ. ಅಬಕಾರಿ ಸುಂಕವು ರಾಜ್ಯ ಸರ್ಕಾರದ ಆದಾಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಹೆಚ್ಚಿನ ಸಂದರ್ಭಗಳಲ್ಲಿ, ಸುಮಾರು 15 ರಿಂದ 30 ಪ್ರತಿಶತದಷ್ಟು ಆದಾಯವು ಮದ್ಯದಿಂದ ಬರುತ್ತದೆ ಎಂದು ಕಂಡುಬಂದಿದೆ. ಈ ವಿಚಾರದಲ್ಲಿ ಉತ್ತರ ಪ್ರದೇಶ ಮುಂಚೂಣಿಯಲ್ಲಿದ್ದು, 2022–23ರ ಹಣಕಾಸು ವರ್ಷದಲ್ಲಿ, ಯುಪಿ ಅಬಕಾರಿ ಸುಂಕದಿಂದ 41,250 ಕೋಟಿ ರೂಪಾಯಿಗಳ ದಾಖಲೆಯ ಆದಾಯವನ್ನು ಸಾಧಿಸಿದೆ. 


ಇದನ್ನೂ ಓದಿ: Arecanut today price December 27: ಅಡಿಕೆ ಬೆಲೆ ಮತ್ತೆ ಏರಿಕೆ


ಅಧಿಕೃತ ವರದಿಗಳ ಪ್ರಕಾರ, 2020-21ರ ಹಣಕಾಸು ವರ್ಷದಲ್ಲಿ ಭಾರತವು ಅಬಕಾರಿ ಸುಂಕದಿಂದ ಸುಮಾರು 1.75 ಲಕ್ಷ ಕೋಟಿ ರೂಪಾಯಿ ಗಳಿಸಿದ್ದು, ಅದರಲ್ಲೂ ಉತ್ತರ ಪ್ರದೇಶವು ಮದ್ಯದಿಂದ ಹೆಚ್ಚು ಆದಾಯವನ್ನು ಗಳಿಸಿದ ರಾಜ್ಯವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಂಜಾಬ್ ಮತ್ತು ಮಧ್ಯಪ್ರದೇಶದಂತಹ ಇತರ ರಾಜ್ಯಗಳು ಸಹ ಮುಂಚೂಣಿಯಲ್ಲಿದದು, ಅಲ್ಲಿ ಅವರ ಸರ್ಕಾರಗಳು ಮದ್ಯ ಮಾರಾಟದಿಂದ ಕೋಟಿಗಳನ್ನು ಗಳಿಸಿದವು.


ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ತೆರಿಗೆಯನ್ನು ವಿಧಿಸುತ್ತಿದ್ದು, ಅಂದರೆ 83 ಪ್ರತಿಶತ. ಗೋವಾ ಮದ್ಯದ ಮೇಲೆ ಸುಮಾರು 49 ಪ್ರತಿಶತ ತೆರಿಗೆ ವಿಧಿಸುತ್ತದೆ. ಅಂದರೆ ಗೋವಾದಲ್ಲಿ 100 ರೂ.ಗೆ ಸಿಗುವ ಸ್ಪಿರಿಟ್ ಬಾಟಲ್ ಕರ್ನಾಟಕದಲ್ಲಿ ಸುಮಾರು 513 ರೂ.ಗೆ  ಮಾರಾಟವಾಗುತ್ತಿದೆ. ಪ್ರತಿ ಆಲ್ಕೋಹಾಲ್ ಉತ್ಪನ್ನಕ್ಕೆ ವಿಭಿನ್ನವಾಗಿ ಶುಲ್ಕ ವಿಧಿಸಲಾಗುತ್ತಿದ್ದು, ಉದಾಹರಣೆಗೆ, ಬಿಯರ್, ವಿಸ್ಕಿ, ರಮ್, ಸ್ಕಾಚ್ ಮತ್ತು ಹಳ್ಳಿಗಾಡಿನ ಮದ್ಯದ ಮೇಲೆ ವಿವಿಧ ರೀತಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. 


ಇದನ್ನೂ ಓದಿ: ಇದ್ದ ಚಿನ್ನವನ್ನೇ ಕಾಪಾಡಿಕೊಳ್ಳಿ ! ಇನ್ನು ಚಿನ್ನ ಖರೀದಿ ಬರೀ ಕನಸು ! ಎಷ್ಟಾಗಿದೆ ನೋಡಿ ಬಂಗಾರದ ಬೆಲೆ


ಮದ್ಯದ ಮೇಲೆ ಸಂಗ್ರಹಿಸುವ ಅಬಕಾರಿ ಸುಂಕವು ಅದರ ತಯಾರಿಕೆಯನ್ನು ಭಾರತದಲ್ಲಿ ಅಥವಾ ವಿದೇಶದಲ್ಲಿ ಮಾಡಲಾಗುತ್ತದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿ ರಾಜ್ಯವು ಮದ್ಯದ ಮಾರಾಟ, ವಿತರಣೆ ಮತ್ತು ಬೆಲೆಗೆ ಸಂಬಂಧಿಸಿದಂತೆ ತನ್ನದೇ ಆದ ನೀತಿಗಳನ್ನು ಹೊಂದಿದೆ. ಅದರ ಪರಿಣಾಮವಾಗಿ, ತೆರಿಗೆ ಕೂಡ ಬದಲಾಗುತ್ತದೆ. ವರದಿಯ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ, ದೇಶಾದ್ಯಂತ ಮದ್ಯದ ಅಂಗಡಿಗಳನ್ನು ಮುಚ್ಚಿದಾಗ, ಮದ್ಯ ಮಾರಾಟವಾಗದ ಕಾರಣ ರಾಜ್ಯಗಳು ಪ್ರತಿದಿನ ಸುಮಾರು 700 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.