Business Of Hairs: ಕೂದಲಿನಿಂದಲೂ ಹಣ ಗಳಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ...? ಬಹುಶಃ ಇಲ್ಲ, ಆದರೆ ಇಂದು ನಾವು ನಿಮಗೆ ನೀವು ಕೂದಲಿನಿಂದಲೂ ಹಣ ಗಳಿಕೆ ಮಾಡಬಹುದು ಮತ್ತು ಇದಕ್ಕಾಗಿ ನೀವು ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದೇವೆ. ಹೌದು ಇಂದಿನ ಕಾಲದಲ್ಲಿ ನಾವು ಕ್ಷೌರಿಕನ ಬಳಿ ಕೂದಲು ಕತ್ತರಿಸಲು ಹೋಗುತ್ತೇವೆ ಮತ್ತು ಕೂದಲು ಕತ್ತರಿಸುವ ಕೆಲಸಕ್ಕೆ ಕ್ಷೌರಿಕರು ನಮ್ಮಿಂದ ಹಣವನ್ನು ತೆಗೆದುಕೊಳ್ಳುತ್ತಾರೆ, ಆದರೆ ನೀವು ನಿಮ್ಮ ಕೂದಲಿನಿಂದ ಆದಾಯ ಗಳಿಸಬಹುದು ಎಂಬುದನ್ನು ನಾವು ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಹೇಗೆ ವ್ಯಾಪಾರ ಮಾಡಬಹುದು
ಇಂದಿನ ದಿನಗಳಲ್ಲಿ ಯಾವ ಬೇಕಾದ ವ್ಯವಹಾರವನ್ನು ಕೂಡ ನೀವು ಪ್ರಾರಂಭಿಸಬಹುದು. ಪ್ರತಿ ತಿಂಗಳು ಕ್ಷೌರಿಕನ ಬಳಿ ಕೂದಲು ಕತ್ತರಿಸಲು ಹೋದರೆ, ಅದೇ ಹ್ಯೂಮನ್ ವೇಸ್ಟ್ ಕೂದಲನ್ನು ಮಾರಾಟ ಮಾಡಿ ನೀವು ಹಣ ಸಂಪಾದಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಇಂದು ನಾವು ನಿಮಗೆ ವೇಸ್ಟ್ ಕೂದಲಿನಿಂದ ಶ್ರೀಮಂತರಾಗುವುದು ಹೇಗೆ ಎಂಬುದನ್ನು ಹೇಳುತ್ತಿದ್ದೇವೆ ಮತ್ತು ಈ ವ್ಯವಹಾರವು ಭಾರತದಲ್ಲೂ ಕೂಡ ಸಾಕಷ್ಟು ಜನಪ್ರಿಯವಾಗುತ್ತಿದೆ.


ವೇಸ್ಟ್ ಹೇರ್ ಬಿಸಿನೆಸ್ ಎಂದರೇನು?
ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಕತ್ತರಿಸಿದ ಕೂದಲನ್ನು ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ ಆದರೆ ಸತ್ಯವೆಂದರೆ ಮಾನವ ತ್ಯಾಜ್ಯದ ಕೂದಲಿನಿಂದ ಅನೇಕ ರೀತಿಯ ವಸ್ತುಗಳನ್ನು ತಯಾರಿಸಬಹುದು, ಇದನ್ನು ನಂತರ ಕೃಷಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ನಿರ್ಮಾಣ ವಲಯದಲ್ಲಿ ಬಳಸಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, ಒಬ್ಬ ವ್ಯಕ್ತಿಯು ಕ್ಷೌರಿಕನಿಂದ ಕೂದಲನ್ನು ಖರೀದಿಸಿ ಅದನ್ನು ಸಂಗ್ರಹಿಸಿ ಅದನ್ನು ಮಾರುಕಟ್ಟೆ ಅಥವಾ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ, ಅವನು ಮಾಡುವ ಈ ಕೆಲಸವನ್ನು ವೇಸ್ಟ್ ಹೇರ್ ವ್ಯಾಪಾರ ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ-SBI ನ ಈ ಹೊಸ ಯೋಜನೆಯಲ್ಲಿ ಸಿಗುತ್ತಿದೆ ಶೇ.7.1ರಷ್ಟು ಬಡ್ಡಿಯ ಲಾಭ! ಹೂಡಿಕೆಗೆ ಕೇವಲ ಮಾರ್ಚ್ ವರೆಗೆ ಮಾತ್ರ ಅವಕಾಶ


ತ್ಯಾಜ್ಯ ಕತ್ತರಿಸಿದ ಕೂದಲು
ವಿಗ್‌ಗಳು, ನಕಲಿ ಮೀಸೆಗಳು, ನಕಲಿ ಕೂದಲು, ಹುಬ್ಬುಗಳು, ಗಡ್ಡಗಳಂತಹ ಅನೇಕ ರೀತಿಯ ಫ್ಯಾಷನ್, ಥಿಯೇಟರ್ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನೂ ಸಹ ಮಾನವ ತ್ಯಾಜ್ಯದ ಕೂದಲಿನಿಂದ ತಯಾರಿಸಲಾಗುತ್ತದೆ. ಇದಲ್ಲದೆ, ರಸಗೊಬ್ಬರಗಳನ್ನು ಕೂಡ ಭಾರತ, ಚೀನಾ ಮತ್ತು ಅಮೆರಿಕದಲ್ಲಿಯೂ ತಯಾರಿಸಲಾಗುತ್ತದೆ ಮತ್ತು ವಿವಿಧ ರೀತಿಯ ಹಗ್ಗಗಳು, ಸ್ಟಫಿಂಗ್ ಆಟಿಕೆಗಳು, ಪೀಠೋಪಕರಣಗಳು, ಹಾಸಿಗೆಗಳು, ಸೌಂದರ್ಯವರ್ಧಕ ಬ್ರಷ್ಗಳು ಇತ್ಯಾದಿಗಳನ್ನು ಕೂದಲಿನಿಂದ ತಯಾರಿಸಲಾಗುತ್ತದೆ.


ಇದನ್ನೂ ಓದಿ-ನಿವೃತ್ತಿಯ ಬಳಿಕ ತಿಂಗಳಿಗೆ 70 ಸಾವಿರ ಪೆನ್ಷನ್ ಪಡೆಯಬೇಕೆ? ಇಲ್ಲಿದೆ ಅದ್ಭುತ ಯೋಜನೆ!


ಎಷ್ಟು ಗಳಿಸಬಹುದು
ವೆಸ್ಟ್ ಹೇರ್ ವ್ಯಾಪಾರದಲ್ಲಿ ಗಳಿಕೆ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತದೆ,  ಕೂದಲು ಚೆನ್ನಾಗಿದ್ದಾಗ ಸಲೀಸಾಗಿ 20 ರಿಂದ 25 ಸಾವಿರಕ್ಕೆ ಮಾರಾಟವಾಗುತ್ತದೆ. ಆದ್ದರಿಂದ ನೀವು ಈ ವ್ಯವಹಾರದಿಂದ ಉತ್ತಮ ಲಾಭವನ್ನು ಪಡೆಯಬಹುದು.


ಇದನ್ನೂ ಓದಿ-ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚುವರಿ ಬಡ್ಡಿಯ ಲಾಭ ಪಡೆಯಿರಿ, ಆರ್ಬಿಐ ಹೇಳಿದ್ದೇನು?

(ಹಕ್ಕುತ್ಯಾಗ- ಇಲ್ಲಿ ನಾವು ನಿಮಗೆ ಈ ಉದ್ಯಮವನ್ನು ಸ್ಥಾಪಿಸುವ ಪರಿಕಲ್ಪನೆಯ ಕುರಿತು ಮಾಹಿತಿಯನ್ನು ಮಾತ್ರ ನೀಡುತ್ತಿದ್ದೇವೆ. ಯಾವುದೇ ಉದ್ಯಮವನ್ನು ಸ್ಥಾಪಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಸೂಕ್ತ. ಇದಲ್ಲದೆ ಲಾಭದ ಅಂಕಿ-ಅಂಶಗಳು ನಿಮ್ಮ ವ್ಯಾಪಾರದ ಮಾರಾಟವನ್ನು ಅವಲಂಭಿಸಿರುತ್ತವೆ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.