ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೊಂದು ಭಾರಿ ನೆಮ್ಮದಿಯ ಸುದ್ದಿ!

Post Office: ಕುರಿತು ಮಾತನಾಡಿರುವ ಅಂಚೆ ಇಲಾಖೆಯ ಕಾರ್ಯದರ್ಶಿ ವಿನೀತ್ ಪಾಂಡೆ,ಕಡಿಮೆ ವೆಚ್ಚದ ಚೌಕಟ್ಟು ಮತ್ತು ಸುಲಭ ಪ್ರಕ್ರಿಯೆಯ ಮೂಲಕ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಅಂಚೆ ಕಚೇರಿಗಳು ಸೂಕ್ತವಾಗಿವೆ ಎಂದಿದ್ದಾರೆ. ಇಲಾಖೆಯು ತನ್ನ ನೆಟ್‌ವರ್ಕ್ ನಲ್ಲಿ 'ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಯೋಜನೆಯನ್ನು ರೂಪಿಸುತ್ತಿದ್ದು, ಇದು ಸಣ್ಣ ವ್ಯಾಪಾರಿಗಳು ಮತ್ತು ಈಶಾನ್ಯ ರಾಜ್ಯಗಳಿಗೆ ಉಪಯುಕ್ತವಾಗುವ ಸಮಗ್ರ ಯೋಜನೆಯಾಗಲಿದೆ ಎಂದು ಪಾಂಡೆ ಹೇಳಿದ್ದಾರೆ.  

Written by - Nitin Tabib | Last Updated : Feb 13, 2023, 09:43 PM IST
  • ಸರ್ಕಾರವು ಅಂಚೆ ಕಛೇರಿ ಮೂಲಕ ಅನೇಕ ಜನರಿಗೆ ಹಲವು ಪ್ರಯೋಜನವನ್ನು ನೀಡುತ್ತಿದೆ.
  • ಅನೇಕ ಪ್ರಮುಖ ಯೋಜನೆಗಳನ್ನು ಅಂಚೆ ಕಚೇರಿಯ ಮೂಲಕವೂ ನಡೆಸಲಾಗುತ್ತಿದೆ.
  • ಈ ಯೋಜನೆಗಳ ಮೂಲಕ ಸರ್ಕಾರವು ಜನರಿಗೆ ಉಳಿತಾಯ ಮಾಡಲು ಮತ್ತು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ.
ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೊಂದು ಭಾರಿ ನೆಮ್ಮದಿಯ ಸುದ್ದಿ! title=
ಅಂಚೆ ಕಚೇರಿಯ ಹೊಸ ಯೋಜನೆ !

Modi Government Scheme: ಜನರ ಅನುಕೂಲಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನೊಂದೆಡೆ ಉದ್ಯಮಿಗಳು ತಮ್ಮ ವ್ಯವಹಾರಕ್ಕೆ ಉತ್ತೇಜನವನ್ನು ಪಡೆಯಲು ಸರ್ಕಾರದ ವತಿಯಿಂದ ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಇದೀಗ ಸರ್ಕಾರ  ಕೈಗೊಂಡ ಒಂದು ಹೊಸ ನಿರ್ಧಾರದಿಂದ ಸಣ್ಣ ಉದ್ಯಮಿಗಳಿಗೆ ಲಾಭವಾಗಲಿದೆ. ವಾತವದಲ್ಲಿ, ಸಣ್ಣ ವ್ಯಾಪಾರಿಗಳು ಅಂಚೆ ರಫ್ತು ಕೇಂದ್ರಗಳಿಂದ ಉತ್ತೇಜನವನ್ನು ಪಡೆಯುತ್ತಾರೆ. ಅಂಚೆ ಕಚೇರಿ ರಫ್ತು ಕೇಂದ್ರಗಳು ಸಣ್ಣ ವ್ಯಾಪಾರಿಗಳಿಗೆ ಉತ್ತೇಜನ ನೀಡುತ್ತವೆ ಮತ್ತು ಇದು ದೇಶದ ರಫ್ತು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-DA Arrears Update: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರವೇ ಸಿಗಲಿದೆ ಈ ಸಂತಸದ ಸುದ್ದಿ!

ಅಂಚೆ ಕಛೇರಿ
ಈ ಕುರಿತು ಮಾತನಾಡಿರುವ ಅಂಚೆ ಇಲಾಖೆಯ ಕಾರ್ಯದರ್ಶಿ ವಿನೀತ್ ಪಾಂಡೆ, ಕಡಿಮೆ ವೆಚ್ಚದ ಚೌಕಟ್ಟು ಮತ್ತು ಸುಲಭ ಪ್ರಕ್ರಿಯೆಯ ಮೂಲಕ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಅಂಚೆ ಕಚೇರಿಗಳು ಸೂಕ್ತವಾಗಿವೆ. ಇಲಾಖೆಯು ತನ್ನ ನೆಟ್‌ವರ್ಕ್ ಅಡಿ 'ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಯೋಜನೆಯನ್ನು ರೂಪಿಸುತ್ತಿದ್ದು, ಇದು ಸಣ್ಣ ವ್ಯಾಪಾರಿಗಳು ಮತ್ತು ಈಶಾನ್ಯ ರಾಜ್ಯಗಳಿಗೆ ಉಪಯುಕ್ತವಾಗುವ ಸಮಗ್ರ ಯೋಜನೆಯಾಗಲಿದೆ ಎಂದು ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ-LIC ಪಾಲಸಿ ಹೊಂದಿರುವವರಿಗೆ ಬಿಗ್ ಶಾಕ್... ಇನ್ಮುಂದೆ ಪಾಲಸಿಗಳ ಮೇಲೆ ಸಿಗಲ್ಲ ಈ ಲಾಭ!

ಪೋಸ್ಟ್ ಆಫೀಸ್
ಇಂಡಿಯನ್ ಪೋಸ್ಟ್ - ಅಮೃತ್‌ಪೆಕ್ಸ್-2023 ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಂಡೆ, ಅಂಚೆ ರಫ್ತು ಕೇಂದ್ರಗಳು ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡಲಿವೆ ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ಅನುರಾಗ್ ಜೈನ್, ಸರ್ಕಾರವು ಭೌಗೋಳಿಕ ಸೂಚಕ (ಜಿಐ) ಹೊಂದಿರುವ ಉತ್ಪನ್ನಗಳನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ದೇಶದ ಕೋಟ್ಯಾಂತರ ರೈತರಿಗೊಂದು ಸತಸದ ಸುದ್ದಿ, ನಿತ್ಯ 50 ರೂ.ಹೂಡಿಕೆ ಮಾಡಿ 35 ಲಕ್ಷ ಲಾಭ ಪಡೆಯುವ ಸುವರ್ಣಾವಕಾಶ!

ಅಂಚೆ ಇಲಾಖೆ
ಸರ್ಕಾರವು ಅಂಚೆ ಕಛೇರಿ ಮೂಲಕ ಅನೇಕ ಜನರಿಗೆ ಹಲವು ಪ್ರಯೋಜನವನ್ನು ನೀಡುತ್ತಿದೆ. ಅನೇಕ ಪ್ರಮುಖ ಯೋಜನೆಗಳನ್ನು ಅಂಚೆ ಕಚೇರಿಯ ಮೂಲಕವೂ ನಡೆಸಲಾಗುತ್ತಿದೆ. ಈ ಯೋಜನೆಗಳ ಮೂಲಕ ಸರ್ಕಾರವು ಜನರಿಗೆ ಉಳಿತಾಯ ಮಾಡಲು ಮತ್ತು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ. ಈಗ ಅಂಚೆ ರಫ್ತು ಕೇಂದ್ರಗಳಿಂದ ಸಣ್ಣ ವ್ಯಾಪಾರಿಗಳನ್ನು ಉತ್ತೇಜಿಸಲು ಸರ್ಕಾರದಿಂದ ಪ್ರಯತ್ನಗಳನ್ನು ನಡೆಸಲಾಗುತ್ತಿರುವುದು ಒಂದು ಶ್ಲಾಘನೀಯ ಹೆಜ್ಜೆ ಎಂದರೆ ತಪ್ಪಾಗಲಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News