RBI ಮತ್ತೆ ಬಿಡುಗಡೆ ಮಾಡಲಿದೆಯೇ 1000 ರೂ.? ಈ ಬಗ್ಗೆ ಕೇಂದ್ರ ಬ್ಯಾಂಕ್ ನೀಡಿದ ಮಾಹಿತಿ ಇದು
ಬ್ಯಾಂಕ್‌ಗಳು ದೇಶಾದ್ಯಂತ ಸಾಮಾನ್ಯ ಜನರಿಂದ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಹೀಗಿರುವಾಗ ಸರ್ಕಾರ ಹೊಸ 1000 ರೂಪಾಯಿ ನೋಟು ಬಿಡುಗಡೆ ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ಕೂಡಾ ಎದ್ದಿದೆ.
ಬೆಂಗಳೂರು : ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಲಾವಣೆಯಲ್ಲಿರುವ 2000 ರೂಪಾಯಿ ನೋಟನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಈ ಘೋಷಣೆಯ ನಂತರ 2000 ರೂಪಾಯಿ ನೋಟುಗಳನ್ನು ಬದಲಾಯಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ಕೂಡಾ ನೀಡಿತ್ತು. 2000 ರೂಪಾಯಿ ನೋಟುಗಳನ್ನು ಬದಲಾಯಿಸಲು 4 ತಿಂಗಳ ಕಾಲಾವಕಾಶ ಕೂಡಾ ನೀಡಲಾಗಿದೆ. ಅಂದರೆ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಲು ಸೆಪ್ಟೆಂಬರ್ 30 ರವರೆಗೆ ಸಮಯ ನೀಡಲಾಗಿದೆ. ಇದರ ಅಡಿಯಲ್ಲಿ, ಒಂದೇ ಸಮಯದಲ್ಲಿ ಸಮಯದಲ್ಲಿ 2000 ರೂಪಾಯಿಯ 10 ನೋಟುಗಳನ್ನು ಇತರ ನೋಟುಗಳಿಗೆ ಬದಲಾಯಿಸಬಹುದಾಗಿದೆ. ಆದರೆ ಆರ್‌ಬಿಐ ಈ ನಿರ್ಧಾರವನ್ನು ಪ್ರಕಟಿಸಿದಾಗಿನಿಂದ, 2000 ರೂಪಾಯಿ ಬದಲು ಆರ್‌ಬಿಐ ಮತ್ತೆ ಹೊಸ 1000 ರೂಪಾಯಿ ನೋಟನ್ನು ಬಿಡುಗಡೆ ಮಾಡುವುದೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಬ್ಯಾಂಕ್‌ಗಳು ದೇಶಾದ್ಯಂತ ಸಾಮಾನ್ಯ ಜನರಿಂದ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಹೀಗಿರುವಾಗ ಸರ್ಕಾರ ಹೊಸ 1000 ರೂಪಾಯಿ ನೋಟು ಬಿಡುಗಡೆ ಮಾಡಲು ಹೊರಟಿದೆಯೇ ಎಂಬ ಪ್ರಶ್ನೆ ಕೂಡಾ ಎದ್ದಿದೆ. ಕೇಂದ್ರ ಸರ್ಕಾರ 2000 ರೂಪಾಯಿ ನೋಟನ್ನು ಚಲಾವಣೆಯನ್ನು ನಿಲ್ಲಿಸಿ ಹೊಸ 1000 ರೂಪಾಯಿ ನೋಟನ್ನು ಮತ್ತೆ ಪರಿಚಯಿಸಲಿದೆ ಎನ್ನುವುದು ಕೆಲವರ ವಾದ. ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಜನತೆಗೆ ಸಂದೇಶವನ್ನು ನೀಡಿದ್ದಾರೆ.
ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!
ರಿಸರ್ವ್ ಬ್ಯಾಂಕ್ ಗವರ್ನರ್ ನೀಡಿರುವ ಮಾಹಿತಿ ಏನು? :
1000 ರೂಪಾಯಿ ಬಿಡುಗಡೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಬಿಐ ಗವರ್ನರ್, 'ಸದ್ಯಕ್ಕೆ ಹೊಸ 1000 ರೂಪಾಯಿ ನೋಟು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ. ಇದು ಕೇವಲ ವದಂತಿ ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ. 2000 ರೂಪಾಯಿ ನೋಟು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎನ್ನುವುದನ್ನು ಅವರು ಒತ್ತಿ ಹೇಳಿದ್ದಾರೆ. ಸೆಪ್ಟೆಂಬರ್ 30ರವರೆಗೆ ಸಾಮಾನ್ಯ ಜನರಿಗೆ ನೋಟು ಬದಲಾವಣೆಗೆ ಅವಕಾಶವಿದೆ. ಹಾಗಾಗಿ ನೋಟು ಬದಲಾಯಿಸುವ ಸಲುವಾಗಿ ಬ್ಯಾಂಕ್ ಗಳಿಗೆ ಮುಗಿ ಬೀಳುವ ಅಗತ್ಯವಿಲ್ಲ ಎಂದಿದ್ದಾರೆ. ಜನ ಸಾಮಾನ್ಯರ ಬಳಿಯಲ್ಲಿ 4 ತಿಂಗಳ ಸಮಯಾವಕಾಶವಿದ್ದು, ಆತುರ ಪಡಬೇಕಾಗಿಲ್ಲ ಎಂದಿದ್ದಾರೆ.
ದೊಡ್ಡ ಮುಖಬೆಲೆಯ ನೋಟು 500 ರೂಪಾಯಿ :
ಹೊಸ 1000 ರೂಪಾಯಿ ನೋಟು ಬಿಡುಗಡೆಯ ವದಂತಿಗಳಿಗೆ ಆರ್‌ಬಿಐ ಅಂತ್ಯ ಹಾಡಿದೆ. ಇದರೊಂದಿಗೆ 2000 ನೋಟು ಹಿಂಪಡೆದ ಬಳಿಕ ಇದೀಗ 500 ರೂಪಾಯಿ ನೋಟು ದೇಶದಲ್ಲೇ ಅತಿ ದೊಡ್ಡ ಮುಖ ಬೆಲೆಯ ನೋಟು ಆಗಿರಲಿದೆ. ನವೆಂಬರ್ 2016 ರಲ್ಲಿ, ಹಳೆಯ 500 ಮತ್ತು 1000 ರೂ ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ನಂತರ ಹೊಸ 200, 500 ಮತ್ತು 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ 2000 ರೂಪಾಯಿ ನೋಟುಗಳನ್ನು ಕೂಡಾ ಹಿಂಪಡೆಯಲಾಗುತ್ತಿದೆ.
ಇದನ್ನೂ ಓದಿ : ಹೊಸ ಪೇಮೆಂಟ್ ಸಿಸ್ಟಮ್ ಜಾರಿಗೆ ಹೋರಾಟ RBI!ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮಾಹಿತಿ
2000 ರೂಪಾಯಿ ನೋಟುಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಮಾಹಿತಿಗಳು:
- ನವೆಂಬರ್ 2016 ರಲ್ಲಿ ಪರಿಚಯಿಸಲಾದ 2000 ರೂ. ನೋಟು ಈಗ ಹಿಂಪಡೆಯಲಾಗಿದೆ.
- ಅಸ್ತಿತ್ವದಲ್ಲಿರುವ 2000 ರೂ. ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣಿ ಮಾಡಬಹುದು ಅಥವಾ ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.
- 2000 ರೂಪಾಯಿಯ 10 ನೋಟುಗಳನ್ನು ಅಂದರೆ 20,000 ರೂಪಾಯಿಗಳನ್ನು ಒಮ್ಮೆಗೆ ಬದಲಾಯಿಸಿಕೊಳ್ಳಬಹುದು.
- 2000 ರೂಪಾಯಿ ನೋಟುಗಳನ್ನು ಸೆಪ್ಟೆಂಬರ್ 30, 2023 ರವರೆಗೆ ಬದಲಾಯಿಸಲು ಅವಕಾಶ ನೀಡಲಾಗಿದೆ. ಆದರೆ ಅವು ಚಲಾವಣೆಯಲ್ಲಿ ಇರುವುದಿಲ್ಲ.
- 2018-19ರಲ್ಲಿ 2000 ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗುವುದು ಎಂದು ಆರ್‌ಬಿಐ ಮಾಹಿತಿ ನೀಡಿತ್ತು.
- ಸುಮಾರು 89% 2000 ರೂ ನೋಟುಗಳನ್ನು ಮಾರ್ಚ್ 2017 ರ ಮೊದಲು ನೀಡಲಾಯಿತು.
- ನೋಟುಗಳನ್ನು ವಾಣಿಜ್ಯ ಬ್ಯಾಂಕ್ ಶಾಖೆಗಳಲ್ಲಿ ಮತ್ತು ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ (ಆರ್‌ಒ) ವಿನಿಮಯ ಮಾಡಿಕೊಳ್ಳಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ