Light Weight Portable Payment System : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಲೈಟ್ ವೈಟ್ ಪೋರ್ಟಬಲ್ ಪೇಮೆಂಟ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ನೈಸರ್ಗಿಕ ವಿಪತ್ತುಗಳು ಮತ್ತು ಯುದ್ಧದಂತಹ ಸಂದರ್ಭಗಳಲ್ಲಿ ಪ್ರಮುಖ ವಹಿವಾಟುಗಳಿಗಾಗಿ ಈ ಪಾವತಿ ವ್ಯವಸ್ಥೆಯನ್ನು ಬಳಸಬಹುದಾಗಿದೆ. RBI ಪ್ರಕಾರ, ಪ್ರಸ್ತಾವಿತ ಲೈಟ್ ವೈಟ್ ಪೋರ್ಟಬಲ್ ಪೇಮೆಂಟ್ ಸಿಸ್ಟಮ್ (LPSS) ಸಾಂಪ್ರದಾಯಿಕ ತಂತ್ರಜ್ಞಾನದಿಂದ ಮುಕ್ತವಾಗಿರುತ್ತದೆ. ಕೆಲವು ವಿಶೇಷ ಉದ್ಯೋಗಿಗಳು ಈ ವ್ಯವಸ್ಥೆಯನ್ನು ಎಲ್ಲಿ ಬೇಕಾದರೂ ನಿರ್ವಹಿಸಲು ಸಾಧ್ಯವಾಗುತ್ತದೆ.
ಅಸ್ತಿತ್ವದಲ್ಲಿರುವ ಪಾವತಿ ವ್ಯವಸ್ಥೆಗಳು IT ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುತ್ತವೆ :
ಪ್ರಸ್ತುತ ಪಾವತಿ ವಹಿವಾಟುಗಳಿಗಾಗಿ ಚಾಲನೆಯಲ್ಲಿರುವ RTGS, NEFT ಮತ್ತು UPIಯಂತಹ ಅಸ್ತಿತ್ವದಲ್ಲಿರುವ ಪೇಮೆಂಟ್ ಸಿಸ್ಟಮ್ ಅನ್ನು ದೊಡ್ಡ ಪ್ರಮಾಣದ ಪೇಮೆಂಟ್ ಮಾಡುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ. ಈ ಪೇಮೆಂಟ್ ಸಿಸ್ಟಮ್ ಗಳು ಸುಧಾರಿತ ಐಟಿ ಮೂಲಸೌಕರ್ಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ನೈಸರ್ಗಿಕ ವಿಕೋಪ ಮತ್ತು ಯುದ್ಧದ ಸಂದರ್ಭದಲ್ಲಿ ಈ ಹೊಸ ಪಾವತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಲಭ್ಯವಾಗುವಂತೆ ಮಾಡಬಹುದು ಎಂದು ಆರ್ಬಿಐ ತಿಳಿಸಿದೆ.
ಇದನ್ನೂ ಓದಿ : Banking Frauds: ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದ ಆರ್ಬಿಐ, ಗ್ರಾಹಕರು ಏನ್ ಮಾಡ್ಬೇಕು?
ಎಲ್ಲಿಂದ ಬೇಕಾದರೂ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ :
ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು, ಯಾವುದೇ ಸ್ಥಿತಿಯಲ್ಲಿ ಬಳಸಬಹುದಾದ ಇಂತಹ ವ್ಯವಸ್ಥೆಯನ್ನು ಸಿದ್ಧಪಡಿಸುವ ಅವಶ್ಯಕತೆಯಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, RBI LPSS ಅನ್ನು ಪರಿಚಯಿಸುವ ಯೋಜನೆ ಹಮ್ಮಿಕೊಂಡಿದೆ. ಇದು ಸಾಂಪ್ರದಾಯಿಕ ತಂತ್ರಜ್ಞಾನದಿಂದ ಮುಕ್ತವಾಗಿರುತ್ತದೆ. ಕಡಿಮೆ ಸಂಖ್ಯೆಯ ಉದ್ಯೋಗಿಗಳ ಸಹಾಯದಿಂದ ಎಲ್ಲಿಂದ ಬೇಕಾದರೂ ಇದನ್ನು ಕಾರ್ಯನಿರ್ವಹಿಸಬಹುದು.
'ಇದು ಕನಿಷ್ಠ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ನಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ ಎಂದು RBI ಹೇಳಿದೆ. ಯಾವಾಗ ಅಗತ್ಯವಿದೆಯೂ ಆ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಈ ಸಿಸ್ಟಮ್ ಅನ್ನು ಆಕ್ಟಿವ್ ಮಾಡಲಾಗುವುದು. ಸರ್ಕಾರ ಮತ್ತು ಮಾರುಕಟ್ಟೆ ಸಂಬಂಧಿತ ವಹಿವಾಟುಗಳಂತಹ ಆರ್ಥಿಕತೆಯ ಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳಲು ,ಮತ್ತು ಮುಖ್ಯವಾದ ವಹಿವಾಟುಗಳನ್ನು ಪೂರ್ಣಗೊಳಿಸಲು ಇದು ಉಪಯುಕ್ತವಾಗಿರುತ್ತದೆ.
ಇದನ್ನೂ ಓದಿ : ಬ್ಯಾಂಕ್ , ಐಟಿಆರ್ ಸೇರಿದಂತೆ ಜೂನ್ 1ರಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ ! ಇಕ್ಕಟ್ಟಿಗೆ ಸಿಲುಕಲಿರುವ ಗ್ರಾಹಕರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ