ನವದೆಹಲಿ: ಚಾಲನಾ ಪರವಾನಗಿ ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದಿದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡಿದ್ದರೆ ನೀವು ಚಿಂತಿಸಬೇಕಾಗಿಲ್ಲ. ಈಗ ನೀವು ಪ್ರಾದೇಶಿಕ ಸಾರಿಗೆ ಕಚೇರಿ (RTO)ಯನ್ನು ಸುತ್ತುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಹೊಸ ಅಂದರೆ ನಕಲಿ ಡ್ರೈವಿಂಗ್ ಲೈಸೆನ್ಸ್(Duplicate Driving License)ಅನ್ನು ಸುಲಭವಾಗಿ ಪಡೆಯಬಹುದು.


COMMERCIAL BREAK
SCROLL TO CONTINUE READING

ಚಾಲನಾ ಪರವಾನಗಿ ಕಡ್ಡಾಯ 


ವಾಸ್ತವವಾಗಿ ಅನೇಕ ಸ್ಥಳಗಳಲ್ಲಿ, ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ಡ್ರೈವಿಂಗ್ ಲೈಸೆನ್ಸ್ ಕೂಡ ID ಪುರಾವೆಯಾಗಿ ಅಗತ್ಯವಿದೆ. ಹೀಗಾಗಿ ನಿಮ್ಮ ಮೂಲ ಚಾಲನಾ ಪರವಾನಗಿ(Driving License) ಕಳೆದುಹೋದರೆ ಅಥವಾ ಕೆಲವು ಕಾರಣಗಳಿಂದ ಹರಿದಿದ್ದರೆ ನಂತರ ನಿಮಗೆ ಅನೇಕ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಕೆಲ ಸುಲಭವಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲಿಯೂ ನಕಲಿ ಡಿಎಲ್(Duplicate DL) ಪಡೆದುಕೊಳ್ಳಬಹುದು.   


ಇದನ್ನೂ ಓದಿ: ಅದಾನಿ ಮತ್ತು ಜೀ ಮಿಡಿಯಾ ನಡುವಿನ ವ್ಯಾಪಾರ ಒಪ್ಪಂದ ವದಂತಿ ಆಧಾರ ರಹಿತ


ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಮೊದಲು ಅದರ ಎಫ್‌ಐಆರ್ ಅನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಬೇಕು. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಳೆಯದಾಗಿದ್ದರೆ, ಅದು ಸ್ಪಷ್ಟವಾಗಿಲ್ಲದಿದ್ದರೆ ಅಥವಾ ಹರಿದಿದ್ದರೆ ನಂತರ ನೀವು ನಕಲಿಗಾಗಿ ಮೂಲಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಇದರ ನಂತರ ಆನ್‌ಲೈನ್‌ನಲ್ಲಿ ನಕಲಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು(Driving License Process) ನೀವು ಮೊದಲು ರಾಜ್ಯ ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.


ಈ ಸುಲಭ ಹಂತಗಳನ್ನು ಅನುಸರಿಸಿ


  • ಮೊದಲು ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ.

  • ಈಗ ಇಲ್ಲಿ ಕೇಳುವ ವಿವರಗಳನ್ನು ಭರ್ತಿ ಮಾಡಿ.

  • ಇದರ ನಂತರ LLD ಫಾರ್ಮ್ ಅನ್ನು ಭರ್ತಿ ಮಾಡಿ.

  • ಈಗ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

  • ಇದರೊಂದಿಗೆ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ.

  • ಈಗ ಈ ಫಾರ್ಮ್ ಮತ್ತು ಎಲ್ಲಾ ದಾಖಲೆಗಳನ್ನು ಆರ್‌ಟಿಒ ಕಚೇರಿಗೆ ಸಲ್ಲಿಸಿ.

  • ಇದನ್ನು ಆನ್‌ಲೈನ್‌ನಲ್ಲಿಯೂ ಸಲ್ಲಿಸಬಹುದು.

  • ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಂಡ 30 ದಿನಗಳ ನಂತರ ನಕಲಿ ಚಾಲನಾ ಪರವಾನಗಿ ನಿಮಗೆ ಬರುತ್ತದೆ.


ಆಫ್‌ಲೈನ್‌ಗಾಗಿ ಈ ಹಂತಗಳನ್ನು ಅನುಸರಿಸಿ


  • ನೀವು ನಕಲು ಚಾಲನಾ ಪರವಾನಗಿಗಾಗಿ ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.

  • ಇದಕ್ಕಾಗಿ ನಿಮಗೆ ಮೂಲ ಡ್ರೈವಿಂಗ್ ಲೈಸೆನ್ಸ್ ನೀಡಿದ ಆರ್‌ಟಿಒಗೆ ಮೊದಲು ಹೋಗಿ.

  • ಇಲ್ಲಿ ನೀವು LLD ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ.

  • ಈ ನಮೂನೆಯೊಂದಿಗೆ ಇಲಾಖೆಯು ನಿಗದಿಪಡಿಸಿದ ಶುಲ್ಕವನ್ನು ಸಹ ಕಟ್ಟಬೇಕು.

  • ಈ ಸಂಪೂರ್ಣ ಪ್ರಕ್ರಿಯೆಯ ನಂತರ ನೀವು 30 ದಿನಗಳಲ್ಲಿ ನಕಲಿ ಚಾಲನಾ ಪರವಾನಗಿಯನ್ನು ಪಡೆಯುತ್ತೀರಿ.


ಇದನ್ನೂ ಓದಿ: Multibagger Stock: ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿ ಶ್ರೀಮಂತರನ್ನಾಗಿಸಿದ ಷೇರು..!


ನಿಮ್ಮ ಬಳಿ ರಶೀದಿಯನ್ನು ಇಟ್ಟುಕೊಳ್ಳಿರಿ


ನಕಲಿ ಚಾಲನಾ ಪರವಾನಗಿಯ ಆನ್‌ಲೈನ್ ಪ್ರಕ್ರಿಯೆ(Driving License Rule) ನಂತರ ನಿಮ್ಮ ದಾಖಲೆಗಳು ಪೂರ್ಣಗೊಂಡ ತಕ್ಷಣ ನೀವು ರಶೀದಿಯನ್ನು ಪಡೆಯುತ್ತೀರಿ. ಅದನ್ನು ಒಂದು ಸಾರಿ ಪರಿಶೀಲಿಸಿಕೊಳ್ಳಿರಿ, ಏಕೆಂದರೆ ನಕಲಿ ಡಿಎಲ್ ಬಂದಾಗ ನಿಮಗೆ ಅದು ಬೇಕಾಗುತ್ತದೆ. ಅಥವಾ ನಕಲಿ ಡಿಎಲ್ ಬರುವಲ್ಲಿ ವಿಳಂಬವಾದರೆ ಆ ರಸೀದಿಯಿಂದ ನಿಮ್ಮ ಡಿಎಲ್ ಗುರುತಾಗಿ ಬಳಸಬಹುದು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.