Multibagger Stock: ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿ ಶ್ರೀಮಂತರನ್ನಾಗಿಸಿದ ಷೇರು..!

ಷೇರುಪೇಟೆಯ ಏರಿಳಿತದ ನಡುವೆಯೇ ಹಲವು ಷೇರುಗಳು ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡುತ್ತಿವೆ. 2021ರಲ್ಲಿ ಅನೇಕ ಪೆನ್ನಿ ಸ್ಟಾಕ್‌ಗಳು ಮತ್ತು ಅನೇಕ ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ. ಕೆಲವು ಷೇರುಗಳಲ್ಲಿ ಜನರು 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಕಡಿಮೆ ಸಮಯದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದ್ದಾರೆ.

Written by - Puttaraj K Alur | Last Updated : Feb 12, 2022, 06:45 AM IST
  • ಈ ಷೇರು ಕಡಿಮೆ ಸಮಯದಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ
  • ಕೇವಲ ಒಂದೇ ಒಂದು ವರ್ಷದಲ್ಲಿ ಬಂಪರ್ ರಿಟರ್ನ್ಸ್ ನೀಡಿ ಅಚ್ಚರಿ ಮೂಡಿಸಿದೆ
  • ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್‌ಗೆ ಪ್ರಬಲ ಮಾರುಕಟ್ಟೆ ಇದೆ
Multibagger Stock: ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿ ಶ್ರೀಮಂತರನ್ನಾಗಿಸಿದ ಷೇರು..!    title=
ಒಂದು ವರ್ಷದಲ್ಲಿ ಬಂಪರ್ ರಿಟರ್ನ್ಸ್

ನವದೆಹಲಿ: ಷೇರುಪೇಟೆ(Share Market)ಯ ಏರಿಳಿತದ ನಡುವೆಯೇ ಹಲವು ಷೇರುಗಳು ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡುತ್ತಿವೆ. 2021ರಲ್ಲಿ ಅನೇಕ ಪೆನ್ನಿ ಸ್ಟಾಕ್‌ಗಳು ಮತ್ತು ಅನೇಕ ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ. ಕೆಲವು ಷೇರುಗಳಲ್ಲಿ ಜನರು 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಕಡಿಮೆ ಸಮಯದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದ್ದಾರೆ. ಕೇವಲ ಒಂದೇ ವರ್ಷದಲ್ಲಿ 50 ಸಾವಿರ ರೂ. ಹೂಡಿಕೆಗೆ 25 ಲಕ್ಷ ರೂ. ತಂದುಕೊಟ್ಟ ಇಂತಹ ಒಂದು ಸ್ಟಾಕ್ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ.

ಕೇವಲ ಒಂದೇ ವರ್ಷದಲ್ಲಿ ದೊಡ್ಡ ಆದಾಯ

ನಾವು ಈಗ ಹೇಳುತ್ತಿರುವ ಈ ಸ್ಟಾಕ್‌ನ ಹೆಸರು ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್(Flomic Global Logistics). ಒಂದೇ ವರ್ಷದಲ್ಲಿ ಈ ಷೇರು ಹೂಡಿಕೆದಾರರಿಗೆ ಭರ್ಜರಿ ಆದಾಯ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಈ ಷೇರಿನ ಚಲನವಲನ ನೋಡಿದರೆ ಆದಾಯದ ವಿಷಯದಲ್ಲಿ ದೊಡ್ಡ ಕಂಪನಿಗಳನ್ನು ಹಿಂದಕ್ಕೆ ತಳ್ಳಿ ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದೆ.

ಇದನ್ನೂ ಓದಿ: EPFO Rules: ಹಳೆ ಕಂಪನಿಯ ಇಪಿಎಫ್ ವರ್ಗಾವಣೆಯಾಗದಿದ್ದರೆ EPFO ಖಾತೆ ಕ್ಲೋಸ್ ಆಗಬಹುದು!

ಶೇ.4,800ಕ್ಕಿಂತ ಹೆಚ್ಚಿನ ಆದಾಯ

ಫೆಬ್ರವರಿ 8, 2021ರಂದು ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್‍ ನ ಷೇರಿನ ಬೆಲೆ(Multibagger Penny Stock) ಕೇವಲ 2.93 ರೂ. ಇತ್ತು. ಫೆಬ್ರವರಿ 12ರ ಮಾರುಕಟ್ಟೆ ಮುಕ್ತಾಯದ ವಹಿವಾಟಿನಲ್ಲಿ ಈ ಷೇರು 142 ರೂ.ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಈ ಷೇರು ಶೇ.4,800ರಷ್ಟು ಹೆಚ್ಚಿನ ಆದಾಯವನ್ನು ನೀಡಿದೆ. ಆದರೆ ಈ ಅವಧಿಯಲ್ಲಿ ಸೆನ್ಸೆಕ್ಸ್ ಕೇವಲ ಶೇ.13.41ರಷ್ಟು ಮಾತ್ರ ಏರಿಕೆ ಕಂಡಿದೆ.

50 ಸಾವಿರಕ್ಕೆ 24 ಲಕ್ಷ ರೂ. ಆದಾಯ

ಹೂಡಿಕೆದಾರರು 1 ವರ್ಷದ ಹಿಂದೆ ಈ ಷೇರುಗಳಲ್ಲಿ 50 ಸಾವಿರ ರೂ.ಗಳನ್ನು ಹೂಡಿಕೆ(Multibagger Stock) ಮಾಡಿದ್ದರೆ ಇಂದು ಆ ಮೊತ್ತ 24 ಲಕ್ಷ ರೂ.ಗೂ ಹೆಚ್ಚಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ಭಾರೀ ಕುಸಿತದ ನಂತರವೂ ಈ ಷೇರು ಹಸಿರು ಮಾರ್ಕ್‌ನೊಂದಿಗೆ ಕ್ಲೋಸ್ ಆಗಿದೆ. ಈ ಷೇರಿನ 52 ವಾರಗಳ ದಾಖಲೆಯನ್ನು ನೋಡಿದರೆ 216 ರೂ.ಗೆ ತಲುಪಿದೆ.

ಇದನ್ನೂ ಓದಿ: Paytm offer : 4 ರೂಪಾಯಿ ಖರ್ಚು ಮಾಡಿದರೆ 100 ರೂಪಾಯಿ ಕ್ಯಾಶ್‌ಬ್ಯಾಕ್..!

ಕಂಪನಿಯ ಬಗ್ಗೆ ತಿಳಿಯಿರಿ

ಫ್ಲೋಮಿಕ್ ಗ್ಲೋಬಲ್ ಲಾಜಿಸ್ಟಿಕ್ಸ್(Flomic Global Logistics)ನ ನೋಂದಾಯಿತ ಕಚೇರಿ ಮುಂಬೈನಲ್ಲಿದೆ. ಇದು ಗ್ರಾಹಕರಿಗೆ ಲಾಜಿಸ್ಟಿಕ್ಸ್ ಪರಿಹಾರವನ್ನು ಒದಗಿಸುವ ಕಂಪನಿಯಾಗಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂ. ಕಂಪನಿಯ ಇಬ್ಬರು ಪ್ರವರ್ತಕರು ಶೇ.27.49ರಷ್ಟು ಪಾಲನ್ನು ಹೊಂದಿದ್ದಾರೆ. ಉಳಿದ ಶೇ.72.51ರಷ್ಟು ಪಾಲು ಸಾರ್ವಜನಿಕ ಷೇರುದಾರರಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News