ಬೆಂಗಳೂರು : ಮುಂಬರುವ ವಾರಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಕೆಲವು ಸಿಹಿ ಸುದ್ದಿಗಳನ್ನು ಪಡೆಯಲಿದ್ದಾರೆ. ತುಟ್ಟಿಭತ್ಯೆ ದರ ಸೇರಿದಂತೆ ಇನ್ನೂ ಹಲವು ಭತ್ಯೆಯಲ್ಲಿ ಏರಿಕೆಯಾಗಲಿದೆ. ಇದರಿಂದಾಗಿ ನೌಕರರ ವೇತನದಲ್ಲಿಯೂ ಭಾರೀ ಹೆಚ್ಚಳವಾಗಲಿದೆ.  ಸರ್ಕಾರಿ ನೌಕರರ ವೇತನ ಹೆಚ್ಚಳವಾಗುವ ಅಂಶಗಳು ಮತ್ತು ಲೆಕ್ಕಾಚಾರ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಎರಡು ಒಳ್ಳೆಯ ಸುದ್ದಿ : 
ಕೇಂದ್ರ ಸರ್ಕಾರ ಶೀಘ್ರದಲ್ಲೇ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಿದೆ. ಇದರೊಂದಿಗೆ ಸರ್ಕಾರವು ನೌಕರರ ಫಿಟ್‌ಮೆಂಟ್ ಅಂಶವನ್ನೂ ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಮೋದಿ ಸರ್ಕಾರ ಈ ಬಗ್ಗೆ  ಘೋಷಣೆ ಮಾಡಲಿದೆ. ಹಬ್ಬ ಹರಿದಿನಗಳು ಸಮೀಪಿಸುತ್ತಿರುವಂತೆಯೇ ಈ ಬಗ್ಗೆ ಘೋಷಣೆಯಾದರೆ  ಸರ್ಕಾರಿ ನೌಕರರಿಗೆ ದೊಡ್ಡ ಕೊಡುಗೆಯೇ ಸಿಗಲಿದೆ.  


ಇದನ್ನೂ ಓದಿ : Pension Scheme : ಹಳೆಯ ಪಿಂಚಣಿ ಯೋಜನೆ ಪ್ರಮುಖ ಅಪ್‌ಡೇಟ್...ಉದ್ಯೋಗಿಗಳಿಗೆ ಸಿಹಿಸುದ್ದಿ!


ಡಿಎ ಯಲ್ಲಿ ಹೆಚ್ಚಳ :  
ಈ ಬಾರಿ ತುಟ್ಟಿಭತ್ಯೆ ಶೇ. 3 ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ 4 ಪ್ರತಿಶತದಷ್ಟು ಹೆಚ್ಚಳ ಮಾಡುವ ನೀರಿಕ್ಷೆಯೂ ಇದೆ. ಹೀಗಾದಾಗ ನೌಕರರ ತುಟ್ಟಿಭತ್ಯೆ ಹೆಚ್ಚಳ 46 ಪ್ರತಿಶತಕ್ಕೆ ಏರಿದಂತಾಗುತ್ತದೆ. ಇದರಿಂದ ಒಟ್ಟು ವೇತನದಲ್ಲಿ ಭಾರೀ  ಏರಿಕೆಯಾಗಲಿದೆ. ಉದ್ಯೋಗಿಗಳು ಪ್ರಸ್ತುತ 42 ಪ್ರತಿಶತದಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.  


ತುಟ್ಟಿಭತ್ಯೆ ಏರಿಕೆಯು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಆದರೆ, ಅದರ ಘೋಷಣೆಗಾಗಿ ಸ್ವಲ್ಪ ಕಾಯಬೇಕಾಗಿದೆ. ಇದನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಘೋಷಿಸುವ ನಿರೀಕ್ಷೆಯಿದೆ. ಒಮ್ಮೆ ಘೋಷಣೆಯಾದರೆ ಜುಲೈನಿಂದ ಮುಂದಿನ ಸೂಚನೆ ಬರುವವರೆಗಿನ ಡಿಎ ಬಾಕಿಯನ್ನು ವೇತನದ ಜೊತೆಗೆ ಪಾವತಿಸಲಾಗುವುದು.


ಇದನ್ನೂ ಓದಿ : ಪಡಿತರ ಚೀಟಿದಾರರೇ ಗಮನಿಸಿ ! ಸೆ.30 ರೊಳಗೆ ಈ ಕೆಲಸ ಮಾಡದಿದ್ದರೆ ಸಿಗುವುದಿಲ್ಲ ಉಚಿತ ಪಡಿತರ !


ಸಂಬಳ ಎಷ್ಟು ಹೆಚ್ಚಳವಾಗಲಿದೆ ? :  
ಕನಿಷ್ಠ ಮೂಲ ವೇತನದ ಲೆಕ್ಕಾಚಾರ (ರೂ. 18,000)
1. ಉದ್ಯೋಗಿಯ ಮೂಲ ವೇತನ - ರೂ 18,000
2. ಹೊಸ ತುಟ್ಟಿಭತ್ಯೆ (46%) - 8280 ರೂ./ತಿಂಗಳು
3. ಹಿಂದಿನ ತುಟ್ಟಿಭತ್ಯೆ (42%) - 7560 ರೂ./ತಿಂಗಳು
4. ತುಟ್ಟಿಭತ್ಯೆಯಲ್ಲಿ ಹೆಚ್ಚಳ - 8280-7560=  720 ರೂ./ತಿಂಗಳು
5 .ವಾರ್ಷಿಕ ವೇತನ ಹೆಚ್ಚಳ - 720X12 = 8640 ರೂ.


ಗರಿಷ್ಠ ಮೂಲ ವೇತನದ ಲೆಕ್ಕಾಚಾರ (ರೂ. 56,900)
1. ಉದ್ಯೋಗಿಗಳ ಮೂಲ ವೇತನ - ರೂ. 56,900
2. ಹೊಸ ತುಟ್ಟಿಭತ್ಯೆ  (46%) - ರೂ 26,174/ತಿಂಗಳು
3. ಇದುವರೆಗೆ ತುಟ್ಟಿಭತ್ಯೆ (42%) - ರೂ 23,898/ತಿಂಗಳು
4.ತುಟ್ಟಿಭತ್ಯೆಯಲ್ಲಿ ಹೆಚ್ಚಳ - 26,174-23,898 -2276  /ತಿಂಗಳು
5. ವಾರ್ಷಿಕ ವೇತನ ಹೆಚ್ಚಳ - 2276X12 = ರೂ 27312


ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಮಾಸಿಕ 10,000 ರೂ. , ಕೇಂದ್ರ ಸರ್ಕಾರದ ಅದ್ಭುತ ಯೋಜನೆ ಇದು !


ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ : 
ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಬೇಕೆಂದು ನೌಕರರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ನೌಕರರ ಮೂಲ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ. ಫಿಟ್‌ಮೆಂಟ್ ಅಂಶ ಮತ್ತು ಡಿಎ ಹೆಚ್ಚಳದ ದಿನಾಂಕವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ. ಆದರೆ, ಶೀಘ್ರವೇ ಈ ಬಗ್ಗೆ ಘೋಷಣೆಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 


ಫಿಟ್‌ಮೆಂಟ್ ಅಂಶವನ್ನು 2016 ರಲ್ಲಿ ಹೆಚ್ಚಿಸಲಾಯಿತು: 
ಏಳನೇ ವೇತನ ಆಯೋಗವನ್ನು ಸರ್ಕಾರ 2016ರಲ್ಲಿ ಜಾರಿಗೆ ತಂದಿರುವುದು ಗಮನಾರ್ಹ. 7ನೇ ವೇತನ ಆಯೋಗದ ಅಡಿಯಲ್ಲಿ ನೌಕರರ ವೇತನವನ್ನು ಹೆಚ್ಚಿಸಲಾಗಿದೆ. ಅದರ ನಂತರ ಕನಿಷ್ಠ ವೇತನದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬಂದಿದೆ. ಮೂಲ ಕನಿಷ್ಠ ವೇತನ 18,000 ರೂ. ಫಿಟ್‌ಮೆಂಟ್ 
ಅಂಶವನ್ನು 2.57 ಪಟ್ಟು ನಿಗದಿಪಡಿಸಿದ್ದು, ಅದನ್ನು 3.68 ಪಟ್ಟು ಹೆಚ್ಚಿಸುವಂತೆ ನೌಕರರು ಒತ್ತಾಯಿಸಿದ್ದಾರೆ. 


ಹೆಚ್ಚಾಗಲಿದೆ ವೇತನ : 
ಉದ್ಯೋಗಿಗಳ ಕನಿಷ್ಠ ವೇತನವನ್ನು 3 ಪಟ್ಟು ಹೆಚ್ಚಿಸಿದರೆ, ಫಿಟ್‌ಮೆಂಟ್ 
ಅಂಶವು 26,000 ರೂ. ವರೆಗೆ ಹೆಚ್ಚಾಗಬಹುದು. 7ನೇ ವೇತನ ಶ್ರೇಣಿಯಡಿ ಫಿಟ್ ಮೆಂಟ್ ಅಂಶ ಹೆಚ್ಚಿಸಿದರೆ ವೇತನ ಹೆಚ್ಚಳದ ಜತೆಗೆ ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಮೂಲವೇತನವೂ ದಾಖಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ